
ವಿಶ್ವದಲ್ಲಿ ಜೀವಂತವಾಗಿರುವ ಅತ್ಯಂತ ತೂಕದ ವ್ಯಕ್ತಿ ಎಂದು ಕರೆಯಲ್ಪಡುತ್ತಿದ್ದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಎಂಬ ವ್ಯಕ್ತಿ ಈಗ ಬರೋಬ್ಬರಿ 542 ಕೆಜಿ ತೂಕ ಇಳಿಸಿಕೊಂಡಿದ್ದಾರೆ…! ಇದಕ್ಕಾಗಿ ಸೌದಿ ಅರೇಬಿಯಾದ ಮಾಜಿ ರಾಜ ಅಬ್ದುಲ್ಲಾ ಅವರಿಗೆ ಧನ್ಯವಾದಗಳು….
2013 ರಲ್ಲಿ, 610 ಕೆಜಿಯಷ್ಟು ತೂಕವಿದ್ದ ಖಾಲಿದ್ ಅವರ ಜೀವಕ್ಕೆ ಅಪಾಯವಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಮತ್ತು ಮೂರು ವರ್ಷಗಳ ಕಾಲ ಅವರು ಹಾಸಿಗೆ ಹಿಡಿದಿದ್ದರು. ಯಾವುದೇ ಚಟುವಟಿಕೆಗಳೇ ಇರಲಿಲ್ಲ. ಬಿದ್ದಲ್ಲಿಯೇ ಬಿದ್ದುಕೊಂಡಿದ್ದರು. ಅವರ ಸ್ಥಿತಿಯು ಹದಗೆಟ್ಟಿತು, ಖಾಲಿದ್ ತನ್ನ ಮೂಲಭೂತ ಅಗತ್ಯಗಳಿಗಾಗಿ ಸ್ನೇಹಿತರು ಮತ್ತು ಕುಟುಂಬದವರನ್ನು ಅವಲಂಬಿಸಿದ್ದರು. ಖಾಲಿದ್ ಅವರ ದುರವಸ್ಥೆ ನೋಡಿದ ರಾಜ ಅಬ್ದುಲ್ಲಾ ಅವರ ಜೀವ ಉಳಿಸಲು ಸಮಗ್ರ ಯೋಜನೆಗೆ ಮುಂದಾದರು.
ಖಾಲಿದ್ ಅವರಿಗೆ ಯಾವುದೇ ಖರ್ಚಿಲ್ಲದೆ ಉನ್ನತ ಮಟ್ಟದ ವೈದ್ಯಕೀಯ ಆರೈಕೆಯ ವ್ಯವಸ್ಥೆ ಮಾಡಿದರು. ಫೋರ್ಕ್‌ಲಿಫ್ಟ್ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಹಾಸಿಗೆಯನ್ನು ಬಳಸಿಕೊಂಡು 610 ಕೆಜಿಯಷ್ಟು ತೂಕವಿದ್ದ ಖಾಲಿದ್ ಅವರನ್ನು ಜಜಾನ್‌ನಲ್ಲಿರುವ ಅವರ ಮನೆಯಿಂದ ರಿಯಾದ್‌ನ ಕಿಂಗ್ ಫಹಾದ್ ಮೆಡಿಕಲ್ ಸಿಟಿಗೆ ಸಾಗಿಸಲಾಯಿತು.

ಕಠಿಣ ಚಿಕಿತ್ಸೆ ಮತ್ತು ಆಹಾರ ಪದ್ಧತಿ ಅಳವಡಿಸಲು 30 ವೈದ್ಯಕೀಯ ವೃತ್ತಿಪರರ ತಂಡವನ್ನು ರಚಿಸಲಾಯಿತು.
ಖಾಲಿದ್ ಅವರ ಚಿಕಿತ್ಸೆಯಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆ, ಕಸ್ಟಮೈಸ್ ಮಾಡಿದ ಆಹಾರ ಮತ್ತು ವ್ಯಾಯಾಮಗಳು, ತೀವ್ರವಾದ ಭೌತಚಿಕಿತ್ಸೆಯ ಸೆಶನ್‌ಗಳು ಅವರಿಗೆ ದೇಹ ಚಲಿಸಲು, ಅವರಿಗೆ ಸಾಮಾನ್ಯರಂತೆ ಓಡಾಡಲು, ಚಟುವಟಿಕೆಗಳನ್ನು ಪುನಃ ನಡೆಸಲು ಸಹಾಯ ಮಾಡುವ ಗುರಿಯನ್ನು ಇದು ಹೊಂದಿತ್ತು. ಪ್ರಮುಖ ಮಧ್ಯಪ್ರಾಚ್ಯ ವಿಜ್ಞಾನಿಗಳ ಬೆಂಬಲದೊಂದಿಗೆ, ಖಾಲಿದ್ ಅವರಿಗೆ ನಂಬಲಾಗದಷ್ಟು ತೂಕಗಳು ಕಡಿಮೆಯಾದವು.
ಜೀವಂತವಾಗಿರುವ ವಿಶ್ವದ ಅತ್ಯಂತ ಭಾರವಾದ ವ್ಯಕ್ತಿ ಎಂದು ಕರೆಯಲ್ಪಡುತ್ತಿದ್ದ ಮತ್ತು ಇದುವರೆಗಿನ ಪ್ರಪರಂಚದ ಎರಡನೇ ಅತಿ ತೂಕದ ವ್ಯಕ್ತಿ, ಖಾಲಿದ್ ಬಿನ್ ಮೊಹ್ಸೆನ್ ಶಾರಿ ಗಮನಾರ್ಹವಾದ ರೂಪಾಂತರಕ್ಕೆ ಒಳಗಾದರು, ಕೇವಲ ಆರು ತಿಂಗಳಲ್ಲಿ ಅರ್ಧದಷ್ಟು ದೇಹದ ತೂಕವನ್ನು ಕಳೆದುಕೊಂಡರು.
2023 ರ ಹೊತ್ತಿಗೆ, ಖಾಲಿದ್ 542 ಕೆಜಿ ತೂಕವನ್ನು ಕಳೆದುಕೊಂಡರು, ಅವರ ತೂಕವನ್ನು 63.5 ಕೆಜಿಗೆ ಇಳಿಸಿದರು. ಅವರ ದೈಹಿಕ ರೂಪಾಂತರವು ಎಷ್ಟು ಕ್ಲಿಷ್ಟವಾಗಿತ್ತು ಎಂದರೆ ಅವರಿಗೆ ದೇಹದ ಹೆಚ್ಚಿನ ಹೆಚ್ಚುವರಿ ಚರ್ಮವನ್ನೂ ತೆಗೆಯುವ ಶಸ್ತ್ರಚಿಕಿತ್ಸೆಗಳು ನಡೆದವು. ಯಾಕೆಂದರೆ ಗಮನಾರ್ಹವಾದ ತೂಕವಿದ್ದವರು ನಂತರ ಭಾರಿ ಪ್ರಮಾಣದ ತೂಕ ಕಳೆದುಕೊಂಡರೆ ಅವರಿಗೆ ಹೆಚ್ಚವರಿ ಚರ್ಮಗಳು ಸಹ ಸಮಸ್ಯೆಯಾಗುತ್ತವೆ. ಏಕೆಂದರೆ ಅಷ್ಟೊಂದು ದೊಡ್ಡ ಚರ್ಮ ಭಾರಿ ಪ್ರಮಾಣದ ತೂಕ ಇಳಿಸಿಕೊಂಡ ಹೊಸ ದೇಹದ ಆಕಾರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ಚರ್ಮ ತೆಗೆಯುವ ಶಸ್ತ್ರಚಿಕಿತ್ಸೆಗಳು ನಡೆದವು.
ಇಂದು, ಅವರನ್ನು “ದಿ ಸ್ಮೈಲಿಂಗ್ ಮ್ಯಾನ್” ಎಂದು ಪ್ರೀತಿಯಿಂದ ಕರೆಯುತ್ತಾರೆ, ಇದು ಅವರ ಗಮನಾರ್ಹವಾದ ತೂಕ ಇಳಿಕೆಗೆ ಸಾಕ್ಷಿಯಾದ ವೈದ್ಯಕೀಯ ಸಿಬ್ಬಂದಿ ನೀಡಿದ ಅಡ್ಡಹೆಸರಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ