ಇದು ವಿಶ್ವದ ಶ್ರೀಮಂತ ನಾಯಿ: ಇದರ ಆಸ್ತಿ ಮೌಲ್ಯ 3356 ಕೋಟಿ ರೂ…! ಈ ನಾಯಿಯ ಐಶಾರಾಮಿ ಜೀವನ ಶೈಲಿ ಹೇಗಿದೆ ಗೊತ್ತೆ..?!

ಗುಂಥರ್ VI ಹೆಸರಿನ ಜರ್ಮನ್ ಶೆಫರ್ಡ್ ವಿಶ್ವದ ಅತ್ಯಂತ ಶ್ರೀಮಂತ ನಾಯಿ ಎಂದು ಹೇಳಲಾಗಿದೆ. ಈ ನಾಯಿಯ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ ಹೌಹಾರಲೇಬೇಕು. ಈ ನಾಯಿಗೆ ಅಷ್ಟೊಂದು ಆಸ್ತಿಯಿದೆ. ಈ ನಾಯಿಗೆ ಸುಮಾರು 3356 ಕೋಟಿ ರೂ. ((400 ಮಿಲಿಯನ್ ಡಾಲರ್) ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ…!
1992ರಲ್ಲಿ ತನ್ನ ಮಗನ ಅಕಾಲಿಕ ಮರಣದ ನಂತರ ಉತ್ತರಾಧಿಕಾರಿಯಿಲ್ಲದ ಶ್ರೀಮಂತ ಮಹಿಳೆಯಾಗಿದ್ದ ಕೌಂಟೆಸ್ ಕೊರ್ಲೊಟ್ಟಾ ಲೀಬೆನ್‌ಸ್ಟೈನ್ ಎಂಬವರು ತನ್ನ ಜೊತೆಗಿದ್ದ ಆಗಿನ ಪ್ರೀತಿಯ ಸಾಕು ನಾಯಿ ಗುಂಥರ್ III ಹೆಸರಿಗೆ $ 80 ಮಿಲಿಯನ್ ಮೌಲ್ಯದ ತನ್ನ ಸಂಪತ್ತನ್ನು ಬಿಟ್ಟು ಹೋಗಿದ್ದಾಳೆ. ಅಲ್ಲದೆ, ತನ್ನ ಮುದ್ದಿನ ನಾಯಿಯನ್ನು ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಕೆ ತನ್ನ ಸ್ನೇಹಿತಳ ಮಗನಾದ ಮೌರಿಜಿಯೊ ಮಿಯಾನ್‌ ಎಂಬವರಿಗೆ ಜವಾಬ್ದಾರಿ ನೀಡಿ ಹೋಗಿದ್ದಾರೆ. ಹೀಗಾಗಿ ಅಂದಿನಿಂದ 30 ವರ್ಷಗಳಲ್ಲಿ, ಮೌರಿಜಿಯೊ ಮಿಯಾನ್ ಅವರು ಈ ಗುಂಥರ್ (ನಾಯಿ) ವಂಶಸ್ಥರಿಗೆ ಅದ್ದೂರಿ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ಅಲ್ಲದೆ, ಮೌರಿಜಿಯೊ ಮಿಯಾನ್ ಅವರು 30 ವರ್ಷಗಳಲ್ಲಿ, ಗುಂಥರ್ III (ನಾಯಿ) ಆಸ್ತಿಯನ್ನು $ 80 ಮಿಲಿಯನ್ ನಿಂದ ಈಗ $ 400 ಮಿಲಿಯನ್‌ಗೆ ಹೆಚ್ಚಿಸಿದ್ದಾರೆ. ವರದಿಗಳ ಪ್ರಕಾರ ಗುಂಥರ್ VI (ಗುಂಥರ್ III ರ ಮರಿ ಮೊಮ್ಮಗ) ವಿಶ್ವದ ಅತ್ಯಂತ ಶ್ರೀಮಂತ ನಾಯಿಯಾಗಿದೆ…!

ಈ ನಾಯಿಯ ಸಂಪತ್ತನ್ನು ಯಾರು ನಿರ್ವಹಿಸುತ್ತಾರೆ…?
ವರದಿಗಳ ಪ್ರಕಾರ, ಗುಂಥರ್ VI ರ ಸಂಪತ್ತು ಮತ್ತು ಆಸ್ತಿಗಳನ್ನು ಟ್ರಸ್ಟಿಗಳ ಮಂಡಳಿಯು ನಿರ್ವಹಿಸುತ್ತದೆ. ಇದರ ಟ್ರಸ್ಟಿಗಳು ಗುಂಥರ್ VI ರ ಹಣವನ್ನು ಹೂಡಿಕೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ ಮತ್ತು ಸಂಪತ್ತು ಹೆಚ್ಚಳವಾಗುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಗುಂಥರ್ III ರ ವಂಶಸ್ಥ (ಮರಿಮೊಮ್ಮಗ) ಈಗಿನ ನಾಯಿ ಗುಂಥರ್ VI $400 ಮಿಲಿಯನ್ (INR 3356 ಕೋಟಿಗಳು) ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಟ್ರಸ್ಟಿಗಳು ಆಸ್ತಿ ಹೆಚ್ಚಳ ಮಾಡುವಲ್ಲಿ ಅಸಾಧಾರಣ ಕೆಲಸವನ್ನು ಮಾಡಿದ್ದಾರೆ ಎಂದು ತೋರುತ್ತದೆ. ಇದು ಮಿಯಾಮಿಯಲ್ಲಿ $7.5 ಮಿಲಿಯನ್ ಮೌಲ್ಯದ ಭವನವನ್ನು ಒಳಗೊಂಡಿದೆ. ಇದನ್ನು ಪಾಪ್‌ಸ್ಟಾರ್ ಮಡೋನಾ ಅವರಿಂದ ಗುಂಥರ್‌ (ನಾಯಿ) ಪರವಾಗಿ ಖರೀದಿಸಲಾಯಿತು ಮತ್ತು ನಂತರ ಈ ಭವನವನ್ನು $29 ಮಿಲಿಯನ್‌ ಮಾರಾಟ ಮಾಡಲಾಯಿತು…!

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ನಾಯಿಯ ಅದ್ದೂರಿ ಜೀವನ ಶೈಲಿಯ ಒಂದು ನೋಟ….
ಗುಂಥರ್ VI ಹೆಸರಿನ ಜರ್ಮನ್ ಶೆಫರ್ಡ್ ನಾಯಿ ಇಟಲಿಯಲ್ಲಿ ಐಷಾರಾಮಿ ಜೀವನವನ್ನು ನಡೆಸಿದೆ. ಈ ನಾಯಿ ಪ್ರಪಂಚದಾದ್ಯಂತ ಪ್ರಯಾಣಿಸುತ್ತದೆ, ಐಶಾರಾಮಿ ವಿಹಾರ ನೌಕೆಯನ್ನು ಸಹ ಹೊಂದಿದೆ. ಅಲ್ಲದೆ, ಈ ನಾಯಿ ಬಳಿ ಕೆಲಸ ಮಾಡುವ 27 ಉದ್ಯೋಗಿಗಗಳಿದ್ದಾರೆ. ಈ ಸಿಬ್ಬಂದಿ ಆಹಾರ ಮತ್ತು ಅದು ವಾಸಿಸುವ ಸ್ಥಳದ ಅಂದಗೊಳಿಸುವಿಕೆ, ಸ್ವಚ್ಛತೆ ಇತ್ಯಾದಿ ದೈನಂದಿನ ಅಗತ್ಯಗಳಿಗಾಗಿ ಇದ್ದಾರೆ. ವರದಿಗಳ ಪ್ರಕಾರ, ಗುಂಥರ್ VI ಬಿಎಂಡಬ್ಲ್ಯೂ (BMW) ಕಾರನ್ನು ಸಹ ಹೊಂದಿದೆ. ಇಷ್ಟೇ ಅಲ್ಲ, ಗುಂಥರ್ VI ನಾಯಿ ಅರಮನೆ, ಮ್ಯೂಸಿಕ್ ಕ್ಲಬ್, ಸ್ಪೋರ್ಟ್ಸ್ ತಂಡ ಸೇರಿದಂತೆ ನೂರಕ್ಕೂ ಹೆಚ್ಚಿನ ಆಸ್ತಿಗಳನ್ನು ಹೊಂದಿದೆ. ಗುಂಥರ್ VI ಅವರು ಪಿಸಾ ಸ್ಪೋರ್ಟಿಂಗ್ ಕ್ಲಬ್ ಅನ್ನು ಒಳಗೊಂಡಿರುವ ಕೆಲವು ಕ್ರೀಡಾ ತಂಡಗಳನ್ನು ಸಹ ಖರೀದಿಸಿದೆ. ಡೈಲಿ ಬೀಸ್ಟ್‌ನ ವರದಿಯ ಪ್ರಕಾರ ಅವರು ದಿ ಮ್ಯಾಗ್ನಿಫಿಸೆಂಟ್ 5 ಎಂಬ ಹೆಸರಿನ ಮ್ಯೂಸಿಕ್ ಕ್ಲಬ್ ಸಹ ರಚಿಸಲಾಗಿದೆ.

ಇದು ನಿಜವೇ..?
ಗುಂಥರ್ VI ನಾಯಿಯ ಸಂಪತ್ತು ಮತ್ತು ವಾಸಿಸುವ ಐಷಾರಾಮಿ ಜೀವನ ಎಲ್ಲವೂ ನಿಜವಾಗಿದ್ದರೂ, ಅದು ಆ ನಾಯಿಯ ಪೂರ್ವಜ ಗುಂಥರ್ III ಅದೃಷ್ಟದಿಂದ ಬಂದಿದ್ದಾಗಿದೆ. ನಾಯಿ ಮಾಲಕಿ ಈಗ ಬದುಕಿಲ್ಲ. ಆದರೆ ಒಂದು ರೂಪಾಯಿಯೂ ನಾಯಿಗೆ ಬಿಟ್ಟು ಬೇರೆಡೆ ಖರ್ಚಾಗದಂತೆ, ಪೋಲಾಗದಂತೆ ಮಾಡಲಾಗಿದೆ. ಇಟಲಿಯ ಕೌಂಟೆಸ್ ಕೊರ್ಲೊಟಾ ಲೈಬೆನ್‌ಸ್ಟೀನ್ ಎಂಬ ಮಹಿಳೆ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಳು. ರಾಜಮನೆತನದ ಈ ಮಹಿಳೆ ಜೀವನದ ಕೊನೆಯ ಮಗನ ಅಕಾಲಿಕ ನಿಧನದಿಂದ ಕೊನೆಯ ಸಮಯದಲ್ಲಿ ಏಕಾಂಗಿಯಾಗಿದ್ದರು. ಬೇರೆ ಮಕ್ಕಳು ಇರಲಿಲ್ಲ. ಒಬ್ಬಂಟಿಯಾಗಿದ್ದ ಈ ವೃದ್ಧ ಮಹಿಳೆಯ ಜೊತೆಗಿದ್ದದ್ದು, ಗಂಥರ್ III ಅನ್ನೋ ಜರ್ಮನ್ ಶೆಫರ್ಡ್ ನಾಯಿ.
1992ರ ವೇಳೆ ಈ ಮಹಿಳೆ ತನ್ನ ಎಲ್ಲ ಆಸ್ತಿಯನ್ನು ತನ್ನ ಪ್ರೀತಿಯ ನಾಯಿ ಗುಂಥರ್ III ಹೆಸರಿಗೆ ಬರೆದು, ನಾಯಿಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಗೆಳತಿಯ ಪುತ್ರ ಮೌರಿಜಿಯೋ ಮಿಯಾನ್‌ಗೆ ವಹಿಸಿ ನಿಧನರಾದರು. ತನ್ನ ಆಸ್ತಿ ಸಂಪೂರ್ಣವಾಗಿ ತನ್ನ ನಾಯಿಗೆ ಬಳಕೆಯಾಗಬೇಕು. ಈ ನಾಯಿ ಸಂತತಿ ಇಲ್ಲಿಗೆ ಅಂತ್ಯವಾಗಬಾರದು ಎಂದು ಷರತ್ತು ವಿಧಿಸಿದ್ದಳು. ಅದೇ ವರ್ಷದಲ್ಲಿ ಕೌಂಟೆಸ್ ನಿಧನರಾದರು. ಮೌರಿಜಿಯೋ ಮಿಯಾನ್ ಇದಕ್ಕಾಗಿ ಒಂದು ಟ್ರಸ್ಟ್ ಆರಂಭಿಸಿದರು. ನಾಯಿ ನೋಡಿಕೊಳ್ಳಲು, ಈ ಆಸ್ತಿಗಳನ್ನು ನಿರ್ವಹಣೆ ಮಾಡಲು ಟ್ರಸ್ಟ್ ನಿರ್ಮಿಸಿ ಕಾರ್ಯಾರಂಭಿಸಿದರು. ಗುಂಥರ್ III ಸಂತತಿ ಮುಂದುವರಿದು ಇದೀಗ ಗಂಥರ್ VIರಲ್ಲಿದೆ. 6ನೇ ಗುಂಥರ್ ನಾಯಿ ಇದೀಗ 3,356 ಕೋಟಿ ರೂಪಾಯಿ ಒಡೆಯ. 27 ಸಿಬ್ಬಂದಿ ಈ ನಾಯಿ ಆರೈಕೆ ಮಾಡುತ್ತಾರೆ. ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಈ ಪೈಕಿ ವೈದ್ಯರ ತಂಡವೂ ಇದೆಯಂತೆ..!

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement