ಪ್ರಧಾನಿ ಮೋದಿ ಬಗ್ಗೆ ಹೇಳಿಕೆ : ಕಾಂಗ್ರೆಸ್‌ ನಾಯಕ ತರೂರ್ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದತಿಗೆ ದೆಹಲಿ ಹೈಕೋರ್ಟ್ ನಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನೀಡಿದ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆಯ ಮೊಕದ್ದಮೆಯನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ತರೂರ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಅನುಪಕುಮಾರ ಮೆಂಡಿರಟ್ಟ ಅವರು ತಿರಸ್ಕರಿಸಿದ್ದಾರೆ.
2018ರ ನವೆಂಬರ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್‌ ಈ ಹೇಳಿಕೆ ನೀಡಿದ್ದರು.‘ ಮೋದಿ ಅವರು ಶಿವಲಿಂಗದ ಮೇಲೆ ಕುಳಿತಿರುವ ಚೇಳು’ ಎಂದು ಬಣ್ಣಿಸಿದ್ದರು.

ವಿಚಾರಣೆಗೆ ತಡೆ ನೀಡಿ ತಾನು ಈ ಹಿಂದೆ ಪ್ರಕಟಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿದ ನ್ಯಾಯಾಲಯ ಸೆಪ್ಟೆಂಬರ್ 10 ರಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಕಕ್ಷಿದಾರರಿಗೆ ಆದೇಶಿಸಿದೆ. “ಈ ಹಂತದಲ್ಲಿ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಯಾವುದೇ ಆಧಾರಗಳಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ತರೂರ್‌ ವಿರುದ್ಧ ಬಿಜೆಪಿ ನಾಯಕ ರಾಜೀವ ಬಬ್ಬರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ ವಿಚಾರಣಾ ನ್ಯಾಯಾಲಯ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ತಾನು ಗೋರ್ಧನ್‌ ಜಡಾಫಿಯಾ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದೆ. ಕೃತಿಯೊಂದರಲ್ಲಿ ಉಲ್ಲೇಖಿಸಿರುವುದನ್ನು ನಾನು ಹೇಳಿದ್ದು, ಆ ಹೇಳಿಕೆ ಸಾರ್ವಜನಿಕವಾಗಿ ಲಭ್ಯ ಇದೆ.ಅಲ್ಲದೆ ದೂರುದಾರ ಬಬ್ಬರ್‌ ಅವರು ಐಪಿಸಿ ಸೆಕ್ಷನ್ 499ರ ಪ್ರಕಾರ ಬಾಧಿತ ವ್ಯಕ್ತಿಯಲ್ಲ ಎಂದು ತರೂರ್‌ ಪರ ವಕೀಲರು ವಾದಿಸಿದ್ದರು.
ತರೂರ್‌ ಅವರನ್ನು ಹಿರಿಯ ವಕೀಲ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ತಂಡ ಪ್ರತಿನಿಧಿಸಿತ್ತು. ರಾಜೀವ್ ಬಬ್ಬರ್ ಅವರ ಪರವಾಗಿ ಹಿರಿಯ ವಕೀಲೆ ಪಿಂಕಿ ಆನಂದ್ ಹಾಗೂ ತಂಡ ವಾದಿಸಿತ್ತು.

ಪ್ರಮುಖ ಸುದ್ದಿ :-   ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದ ಆರೋಪ ; ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement