ಒಮನ್ ನಲ್ಲಿ‌ ಕಾರು ಅಪಘಾತ: ಗೋಕಾಕ ಮೂಲದ ನಾಲ್ವರು ಸಾವು

ಬೆಳಗಾವಿ: ಒಮನ್‌ನಲ್ಲಿ ಸಂಭವಿಸಿದ ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ವಾಹನ ಅಪಘಾತದಲ್ಲಿ ಗೋಕಾಕ ಮೂಲದ ನಾಲ್ವರು ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಒಮಾನಿನ ಸಲಾಲಾ ನಗರದಿಂದ ಮುಸ್ಕತ್‌ಗೆ ತೆರಳುತ್ತಿದ್ದ ವೇಳೆ ಹೈಮಾ ಪ್ರದೇಶದ ಹತ್ತಿರ ಕಾರ್ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ. ಮೊದಲು ಇವರೆಲ್ಲ ಕೇರಳದವರು ಎಂಬ ತಪ್ಪು ಮಾಹಿತಿ‌ ರವಾನೆಯಾಗಿತ್ತು.
ಗೋಕಾಕ ಮೂಲದ ವಿಜಯ ಮಾಯಪ್ಪ ತಹಶೀಲ್ದಾರ (52), ಪವನಕುಮಾರ ಮಾಯಪ್ಪ ತಹಶೀಲ್ದಾರ್ ( 22) ಪೂಜಾ (21) ಆದಿಶೇಷ ಬಸವರಾಜ (32) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ಗೋಕಾಕ ಮೂಲದವರಾಗಿದ್ದು, ಓಮನ್ ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದರು ಎನ್ನಲಾಗಿದೆ. ರಾತ್ರಿ 10 ಗಂಟೆಗೆ ಓಮನ್‌ ನಿಂದ ಕತಾರ್ ಗೆ ಸಂಚರಿಸುವಾಗ ಇವರ ಎಲೆಕ್ಟ್ರಿಕಲ್ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಲೆಕ್ಟ್ರಿಕಲ್ ಕಾರು ಚೆಲ್ಲಾಪಿಲ್ಲಿಯಾಗಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು,ನಾಲ್ವರು ಸಜೀವವಾಗಿ ದಹನವಾಗಿದ್ದಾರೆ ಎಂದು ಹೇಳಲಾಗಿದೆ. ನಾಲ್ವರೂ ಗೋಕಾಕ ಮೂಲದವರು ಎಂದು ಭಾರತೀಯ ರಾಯಭಾರ ಕಚೇರಿ‌ ಮೂಲಗಳು ಖಚಿತಪಡಿಸಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಶಾಸಕ ಮುನಿರತ್ನ ಮತ್ತೆ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement