ಚಿರತೆ ನಾಯಿಯನ್ನು ಬೇಟೆ ಮಾಡುವುದನ್ನು ನೋಡಿರಬೇಕು. ಆದರೆ ನಾಯಿಗಳು ಚಿರತೆಯನ್ನು ಬೇಟೆಯಾಡುವುದನ್ನು ನೋಡುವುದು ಬಹಳ ಅಪರೂಪ. ಇದನ್ನು ನೋಡಿಲ್ಲದಿದ್ದರೆ ನಾಯಿಗಳ ಗುಂಪು ಚಿರತೆಯೊಂದನ್ನು ಬೇಟೆಯಾಡಿದ ವೀಡಿಯೊವೊಂದು ವೈರಲ್ ಆಗಿದೆ.
ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ನಾಯಿಗಳ ಗುಂಪು ಚಿರತೆ ಮೇಲೆ ಎರಗಿ ಕಚ್ಚಿ ಎಳೆಯುತ್ತಿರುದನ್ನು ತೋರಿಸುತ್ತದೆ.
ಚಿರತೆ ತನ್ನನ್ನು ತಾನು ಉಳಿಸಿಕೊಳ್ಳಲು ತನ್ನ ಶಕ್ತಿಮೀರಿ ಪ್ರಯತ್ನಿಸುತ್ತದೆ ಆದರೆ ಅದು 5 ನಾಯಿಗಳ ಗುಂಪಿನ ದಾಳಿಯ ಮುಂದೆ ಅದಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಈ ಕ್ಲಿಪ್ ನೋಡಿ ಇಂಟರ್ನೆಟ್ ಪಬ್ಲಿಕ್ ಬೆಚ್ಚಿಬಿದ್ದಿದ್ದು, ನಾಯಿಗಳ ಕಾಟದಿಂದ ದೂರವಿರಿ ಎಂದು ಹೇಳುತ್ತಿದ್ದಾರೆ.
ಈ ಕ್ಲಿಪ್ 30 ಸೆಕೆಂಡುಗಳಿದ್ದು, ನಾಯಿಗಳ ಗುಂಪು ಚಿರತೆಯನ್ನು ಸುತ್ತುವರೆದು ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಇದರಲ್ಲಿ 5 ನಾಯಿಗಳ ಗುಂಪು ಚಿರತೆಯನ್ನು ಬಲವಾಗಿ ಕಚ್ಚಿ ಹಿಡಿದಿರುವುದನ್ನು ನೋಡಬಹುದು. ಕೆಲವು ನಾಯಿಗಳು ಚಿರತೆಯನ್ನು ಅದರ ತಲೆಯ ಬಳಿ ಹಿಡಿದಿದ್ದರೆ, ಮತ್ತೆ ಕೆಲವು ಅದರ ಕಾಲುಗಳನ್ನು ಹಿಡಿದಿವೆ … ಇವೆಲ್ಲವೂ ಕಾಡಿನ ಭಯಾನಕ ಬೇಟೆಗಾರನನ್ನು ಭಯಾನಕವಾಗಿ ದಾಳಿ ಮಾಡವುದು ಕಂಡುಬರುತ್ತದೆ. ಈ ದೃಶ್ಯದಲ್ಲಿ ನಾಯಿಗಳ ದಾಳಿ ನೋಡಿ ಭಯಭೀತರಾಗಬಹುದು. ಆದರೆ ವೀಡಿಯೊ ಚಿತ್ರೀಕರಣ ಮಾಡುತ್ತಿರುವವರು ನಾಯಿಗಳನ್ನು ಪ್ರೋತ್ಸಾಹಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಚಿರತೆ ತನ್ನನ್ನು ಉಳಿಸಿಕೊಳ್ಳಲು ಹತಾಶ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿದೆ.
ಈ ವೀಡಿಯೊವನ್ನು ಆಗಸ್ಟ್ 27 ರಂದು X ಹ್ಯಾಂಡಲ್ @TheBrutalNature ನಿಂದ ಪೋಸ್ಟ್ ಮಾಡಲಾಗಿದೆ.
ಇದನ್ನು ಕೆಲವರು ಪವರ್ ಆಫ್ ಯೂನಿಟಿ ಎಂದು ಬರೆದಿದ್ದಾರೆ. ಈ ವೀಡಿಯೊ ಸಾಕಷ್ಟು ನೋವಿನಿಂದ ಕೂಡಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅಂತೆಯೇ, ಮೂರನೇ ವ್ಯಕ್ತಿ ಬೇಟೆಗಾರ ಸ್ವತಃ ಬೇಟೆಯಾಡಲ್ಪಟ್ಟಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ