ವೀಡಿಯೊ..| ಮತ್ತೊಂದು ಹೆಲಿಕಾಪ್ಟರ್‌ ಮೂಲಕ ಏರ್‌ ಲಿಫ್ಟ್‌ ಮಾಡುತ್ತಿದ್ದಾಗ ನದಿಗೆ ಬಿದ್ದ ಹೆಲಿಕಾಪ್ಟರ್‌

ಈ ಹಿಂದೆ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ವೇಳೆ ಹಾನಿಗೊಳಗಾಗಿದ್ದ ಹೆಲಿಕಾಪ್ಟರ್ ಶನಿವಾರ ಮಂದಾಕಿನಿ ನದಿಯ ಬಳಿ ಪತನಗೊಂಡಿತ್ತು. ರಿಪೇರಿಗಾಗಿ ಮತ್ತೊಂದು ಹೆಲಿಕಾಪ್ಟರ್ ಮೂಲಕ ಗೌಚಾರ್ ಏರ್‌ಸ್ಟ್ರಿಪ್‌ಗೆ ಏರ್‌ ಲಿಫ್ಟ್‌ ಮಾಡುವಾಗ ಹೆಲಿಕಾಪ್ಟರ್ ಥಾರು ಕ್ಯಾಂಪ್ ಬಳಿ ಬಿದ್ದಿದೆ. ಯಾರಿಗೂ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೇದಾರನಾಥ ಹೆಲಿಪ್ಯಾಡ್‌ನಿಂದ ಗೋಚಾರ್ ಹೆಲಿಪ್ಯಾಡ್‌ಗೆ ಮತ್ತೊಂದು ಹೆಲಿಕಾಪ್ಟರ್ ಮೂಲಕ ಏರ್‌ ಲಿಫ್ಟ್‌ ಮಾಡಿ ಒಯ್ಯುತ್ತಿದ್ದ ಖಾಸಗಿ ಕಂಪನಿಯ ದೋಷಯುಕ್ತ ಹೆಲಿಕಾಪ್ಟರ್ ಸಮೀಪದ ಲಿಂಚೋಲಿಯಲ್ಲಿ ನದಿಗೆ ಬಿದ್ದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ರಕ್ಷಣಾ ತಂಡಕ್ಕೆ ಮಾಹಿತಿ ಬಂದಿದೆ. ಎಸ್‌ಡಿಆರ್‌ಎಫ್ ತಂಡವು ಘಟನಾ ಸ್ಥಳಕ್ಕೆ ತಲುಪಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಖಾಸಗಿ ಕಂಪನಿ ನಡೆಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಮೇ 24, 2024 ರಂದು ತುರ್ತು ಭೂಸ್ಪರ್ಶ ಮಾಡಿತ್ತು. ಕೇದಾರನಾಥ ಹೆಲಿಪ್ಯಾಡ್‌ನಿಂದ ಗೋಚಾರ್ ಹೆಲಿಪ್ಯಾಡ್‌ಗೆ ಮತ್ತೊಂದು ಹೆಲಿಕಾಪ್ಟರ್ ಮೂಲಕ ಖಾಸಗಿ ಕಂಪನಿಯ ಈ ತಾಂತ್ರಿಕ ದೋಷ ಹೆಲಿಕಾಪ್ಟರ್ ಏರ್‌ಲಿಫ್ಟ್‌ ಮಾಡುವಾಗ ರಭಸದಿಂದ ಬೀಳುತ್ತಿದ್ದ ಗಾಳಿಯನ್ನು ನಿಯಂತ್ರಣ ಮಾಡಲಾಗದೇ ಪತನಗೊಂಡಿದೆ ಎಂದು ಹೇಳಲಾಗಿದೆ. ಅದುಥಾರು ಕ್ಯಾಂಪ್ ಬಳಿ ಬಿತ್ತು ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ವಿವರಿಸಿದರು. ಆ ಸಮಯದಲ್ಲಿ ಹೆಲಿಕಾಪ್ಟರ್‌ನಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸರಕು ಇರಲಿಲ್ಲ.

ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಪಘಾತ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದೆ. ಎಸ್‌ಡಿಆರ್‌ಎಫ್ ಹೇಳಿಕೆಯ ಪ್ರಕಾರ, ದೋಷಪೂರಿತ ಹೆಲಿಕಾಪ್ಟರ್ ಅನ್ನು ಕೇದಾರನಾಥದಿಂದ ಗೌಚಾರ್‌ಗೆ ಏರ್‌ ಲಿಫ್ಟ್‌ ಮಾಡುತ್ತಿದ್ದಾಗ ಅದು ಲಿಂಚೋಲಿ ಬಳಿ ನದಿಗೆ ಬಿದ್ದಿದೆ.
ಪತನಗೊಂಡ ಹೆಲಿಕಾಪ್ಟರ್ ಈ ಹಿಂದೆ ಕೇದಾರನಾಥ ದೇವಸ್ಥಾನಕ್ಕೆ ಪ್ರಯಾಣಿಕರನ್ನು ಸಾಗಿಸುವಲ್ಲಿ ತೊಡಗಿಸಿಕೊಂಡಿತ್ತು. ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಅಡ್ಡಿ ಎದುರಿಸುತ್ತಿರುವ ಕೇದಾರನಾಥ ಯಾತ್ರೆಯ ನಡುವೆ ಈ ಅಪಘಾತ ಸಂಭವಿಸಿದೆ. ಆಗಸ್ಟ್‌ನಲ್ಲಿ ಟ್ರೆಕ್ಕಿಂಗ್ ಮಾರ್ಗಗಳನ್ನು ಸ್ಥಗಿತಗೊಳಿಸಿದ್ದರೂ, ಯಾತ್ರಾರ್ಥಿಗಳು ಹೆಲಿಕಾಪ್ಟರ್ ಮೂಲಕ ಕೇದಾರನಾಥ ದೇವಸ್ಥಾನವನ್ನು ತಲುಪುವುದನ್ನು ಮುಂದುವರೆಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement