ಸಿದ್ದಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ

ಸಿದ್ದಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಶಿರಸಿ ಜಿಲ್ಲೆಯ ಸಿದ್ದಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಶ್ರಾವಣ ಮಾಸದ ನಿಮಿತ್ತ ಶ್ರೀರಾಮ ಭಜನೆ ಕಾರ್ಯಕ್ರಮ ಸಿದ್ದಾಪುರದ ಶ್ರೀ ರಾಘವೇಂದ್ರ ಮಠದಲ್ಲಿ ಶನಿವಾರ (ಆಗಸ್ಟ್ 31) ಸಂಜೆ ನಡೆಯಿತು.
ಜಿ . ಎಸ್.ಬಿ. ಸಮಾಜದ ಅಧ್ಯಕ್ಷರಾದ ಜಯವಂತ ಪದ್ಮನಾಭ ಶಾನಭಾಗ್, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಸಂಘಟನ ಕಾರ್ಯದರ್ಶಿ ನಾರಾಯಣ ಶೇವಿರೆ, ರಾಜ್ಯ ಸಮಿತಿ ಆಮಂತ್ರಿತ ಸದಸ್ಯ ಜಗದೀಶ ಭಂಡಾರಿ, ಶಿರಸಿ ಜಿಲ್ಲೆ ಅಧ್ಯಕ್ಷ ಗಂಗಾಧರ ಕೊಳಗಿ ವೇದಿಕೆಯಲ್ಲಿದ್ದರು. ನಾರಾಯಣ ಶೇವಿರೆ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಸಮಿತಿಯ ಪ್ರಕಾಶ ಭಾಗವತ, ಸಂಜಯ ಭಟ್ ಬೆಣ್ಣೆ, ದಾಕ್ಷಾಯಣಿ, ಸಂಘಟನೆ ಯಲ್ಲಿ ಸಕ್ರಿಯರಾಗಿರುವ ಶೈಲಾ ಮಂಗಳೂರು, ಭಾನುರಾಜ ಬನವಾಸಿ ಹಾಗೂ ಸ್ಥಳೀಯ ಪ್ರಮುಖರು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ಶ್ರೀ ಲಕ್ಷ್ಮಿ ವೆಂಕಟೇಶ ದೇವಾಲಯ, ಶ್ರೀ ವಿಠೋಬ ದೇವಾಲಯದ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಭಜನಾ ಮಂಡಳಿಯಿಂದ ಶ್ರೀ ರಾಮ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement