ರಾಮ ಭಜನೆ ಮತ್ತು ಹರೇ ರಾಮ ಪಠಣಗಳನ್ನು ಕೇಳಿದ ನಂತರ ಕೋತಿಯೊಂದು ಮಹಿಳೆಯನ್ನು ತಬ್ಬಿಕೊಂಡ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರೆಸ್ಟೊರೆಂಟ್‌ನಲ್ಲಿ ಮಹಿಳೆಯೊಬ್ಬರು ಕುಳಿತಿದ್ದು, ಕೋತಿ ಆರಂಭದಲ್ಲಿ ಮಹಿಳೆಯ ತೊಡೆಯ ಮೇಲೆ ಕುಳಿತು ಮಹಿಳೆ ರಾಮ ಭಜನೆ ಹಾಡುವುದನ್ನು ಕೇಳುತ್ತಿತ್ತು.
ಆ ಮಹಿಳೆಯು ಭಗವಾನ್ ರಾಮನ ಸ್ತೋತ್ರಗಳನ್ನು ಪಠಿಸಲು ಪ್ರಾರಂಭಿಸಿದಾಗ ಕೋತಿಯು ಶ್ರದ್ಧೆಯಿಂದ ಕೇಳುತ್ತಿರುವುದು ಕಂಡುಬಂದಿದೆ.
ಕ್ಯಾಮರಾದಲ್ಲಿ ಸೆರೆಯಾದ ವೀಡಿಯೊದಲ್ಲಿ ಮಹಿಳೆಯೊಂದಿಗೆ ಇತರ ಕೆಲವು ವ್ಯಕ್ತಿಗಳು “ಶ್ರೀ ರಾಮ ಜೈ ರಾಮ ಜೈ ಜೈ ರಾಮ” ಮತ್ತು “ರಾಮ ರಾಮ ಪಾಹಿಮಾಮ್, ರಾಮ ರಾಮ ರಕ್ಷಮಾಮ್” ಭಜನೆಗಳನ್ನು ಹಾಡುತ್ತಾರೆ. ಕೋತಿಯು ಮಹಿಳೆಯ ಮಡಿಲಲ್ಲಿ ಕೇಳುತ್ತ ಕುಳಿತಿತ್ತು. ಹರೇ ಕೃಷ್ಣ ಮಹಾ ಮಂತ್ರವನ್ನು ಪಠಿಸುವುದನ್ನು ಕೋತಿ ಕೇಳುತ್ತಲೇ ಇತ್ತು. ನಂತರ ಮಹಿಳೆಯ ಮುಂಭಾಗದ ಮೇಜಿನ ಮೇಲೆ ಕುಳಿತು ರಾಮ ಪಠಣವನ್ನು ಆಲಿಸಿತು. ನಂತರ ಮಹಿಳೆಯ ಭುಜದ ಮೇಲೆ ತಲೆಯನ್ನಿಟ್ಟು ಮಹಿಳೆಯನ್ನು ತಬ್ಬಿಕೊಂಡಿತು. ಒಂದು ಹಂತದಲ್ಲಿ, ಕೋತಿಯು ರಾಮ ಭಜನೆಯ ಲಯಕ್ಕೆ ತಕ್ಕಂತೆ ತನ್ನ ತಲೆಯನ್ನು ಆಡಿಸುತ್ತಿತ್ತು.
ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದ ನಂತರ ನೆಟಿಜನ್‌ಗಳನ್ನು ಆಕರ್ಷಿಸಿದೆ. ಜನರು ಕ್ಲಿಪ್‌ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಅದನ್ನು “ಸುಂದರ” ಎಂದು ಕರೆದಿದ್ದಾರೆ. ಅನೇಕರು ಪ್ರಾರ್ಥನೆ ಮತ್ತು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ