ನವದೆಹಲಿ: ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಎಂಟಾಡ್ ಫಾರ್ಮಾಸ್ಯುಟಿಕಲ್ಸ್‌ನ ʼಪ್ರೆಸ್‌ವುʼ ಹೆಸರಿನ ಕಣ್ಣಿನ ಡ್ರಾಪ್ ಅನ್ನು ಅನುಮೋದಿಸಿದೆ. ಇದು ಪ್ರೆಸ್‌ಬಯೋಪಿಯಾ ಚಿಕಿತ್ಸೆಯಲ್ಲಿ ಒಂದು ಪ್ರಗತಿಯಾಗಿದೆ ಎಂದು ಹೇಳಲಾಗುತ್ತದೆ.
ಔಷಧ ಕಂಪನಿಯು ಈಗಾಗಲೇ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ವಿಷಯ ತಜ್ಞರ ಸಮಿತಿಯಿಂದ ಕಣ್ಣಿನ ಡ್ರಾಪ್‌ಗೆ ಅನುಮೋದನೆ ಪಡೆದಿದೆ.
ಪ್ರೆಸ್‌ವು (PresVu) ಈ ತರಹದ ಭಾರತದ ಮೊದಲ ಕಣ್ಣಿನ ಡ್ರಾಪ್ ಆಗಿದೆ, ಇದನ್ನು ವಿಶೇಷವಾಗಿ ಕನ್ನಡಕ ಹಾಕಿಕೊಂಡು ಓದಲೇ ಬೇಕಾದ ಅನಿವಾರ್ಯತೆ ತಂದೊಡ್ಡುವ ಪ್ರೆಸ್‌ಬಯೋಪಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಿಗಾಗಿ ತಯಾರಿಸಲಾಗುತ್ತಿದೆ.
ಪ್ರೆಸ್‌ಬಯೋಪಿಯಾ ಎಂದರೇನು?
ಪ್ರೆಸ್ಬಯೋಪಿಯಾ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಸ್ಥಿತಿಯಾಗಿದ್ದು ಅದರಿಂದ ವ್ಯಕ್ತಿಗಳಿಗೆ ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಸಾಮಾನ್ಯವಾಗಿ, 40 ವರ್ಷಕ್ಕಿಂತ ಮೇಲ್ಪಟ್ಟವರು ಈ ಕಾಯಿಲೆಯಿಂದ ಬಳಲುತ್ತಾರೆ. ಒಂದು ವರದಿಯ ಪ್ರಕಾರ, ಜಾಗತಿಕವಾಗಿ 1.09 ಶತಕೋಟಿಯಿಂದ 1.80 ಶತಕೋಟಿ ಜನರು ಪ್ರೆಸ್ಬಯೋಪಿಯಾದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
ಪ್ರೆಸ್ಬಯೋಪಿಯಾ ವಯಸ್ಸಾದಂತೆ ಸ್ವಾಭಾವಿಕವಾಗಿ ಸಂಭವಿಸುತ್ತದೆ, ಏಕೆಂದರೆ ಕಣ್ಣಿನ ಕೇಂದ್ರೀಕರಿಸುವ ಸಾಮರ್ಥ್ಯವು ಕ್ಷೀಣಿಸುತ್ತದೆ. ಈ ಸ್ಥಿತಿಯು ವ್ಯಕ್ತಿಯ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಕಣ್ಣುಗಳ ಸರಳ ಪರೀಕ್ಷೆಯಿಂದ ಇದನ್ನು ಕಂಡುಹಿಡಿಯಬಹುದು.
ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಿಖಿಲ್ ಕೆ ಮಸುರ್ಕರ್ ಅವರು ಒಂದು ಹನಿಯ ಪರಿಣಾಮವು 15 ನಿಮಿಷಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು 6 ಗಂಟೆಗಳವರೆಗೆ ಇರುತ್ತದೆ. ಇದಲ್ಲದೆ, ಎರಡನೆಯ ಡ್ರಾಪ್ ಅನ್ನು ಮೊದಲನೆಯ 3 ಗಂಟೆಗಳ ಒಳಗೆ ಬಳಸಿದರೆ, ಪರಿಣಾಮವು ಹೆಚ್ಚು ಕಾಲ ಉಳಿಯಬಹುದು ಎಂದು ಹೇಳಿದ್ದಾರೆ. “ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಪ್ರೆಸ್‌ವು (PresVu) ಅನ್ನು ತಯಾರಿಸಲಾಗಿದೆ. ಡಿಸಿಜಿಐ (DCGI) ಅನುಮೋದನೆಯು ಭಾರತದಲ್ಲಿ ಕಣ್ಣಿನ ಆರೈಕೆಯಲ್ಲಿ ಬದಲಾವಣೆ ತರುವ ನಮ್ಮ ಮಿಷನ್‌ನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಪ್ರೆಸ್‌ವು (PresVu) : ಪ್ರಮುಖ ಪ್ರಯೋಜನಗಳು
ಎಂಟೋಡ್ (Entod) ಫಾರ್ಮಾಸ್ಯುಟಿಕಲ್ಸ್ ಪ್ರೆಸ್‌ವು(PresVu)ನ ಸೂತ್ರೀಕರಣ ಮತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದೆ. ಎಂಟೋಡ್ ಸೂತ್ರವು ಕನ್ನಡಕದಿಂದ ಮುಕ್ತಿಯನ್ನು ನೀಡುತ್ತದೆ ಹಾಗೂ ರೋಗಿಗೆ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ. ಇದು ಕಣ್ಣುಗಳನ್ನು ನಯಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಕಣ್ಣೀರಿನ ಪಿಎಚ್ (pH)ಗೆ ತ್ವರಿತವಾಗಿ ಹೊಂದಿಕೊಳ್ಳಲು ಸೂತ್ರವು ಸುಧಾರಿತ ಡೈನಾಮಿಕ್ ಬಫರ್ ತಂತ್ರಜ್ಞಾನವನ್ನು ಬಳಸುತ್ತದೆ. ಇದರ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ, ಆದರೆ ಕಣ್ಣುಗಳು ಸಹ ರಕ್ಷಿಸಲ್ಪಡುತ್ತವೆ.
ಎಂಟೋಡ್ ಫಾರ್ಮಾಸ್ಯುಟಿಕಲ್ಸ್‌ನ ಸಿಇಒ ನಿಖಿಲ್ ಕೆ ಮಾಸೂರ್ಕರ್ ಅವರು, ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ ಪ್ರೆಸ್‌ವು (PresVu) ಅನ್ನು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.
PresVu ಕೇವಲ ಒಂದು ಉತ್ಪನ್ನಕ್ಕಿಂತ ಹೆಚ್ಚು ಎಂದು ಮಾಸೂರ್ಕರ್ ಹೇಳಿದ್ದಾರೆ; ಇದು ಲಕ್ಷಾಂತರ ಜನರ ಜೀವನವನ್ನು ಉತ್ತಮವಾಗಿ ನೋಡಲು ಸಹಾಯ ಮಾಡುವ ಮೂಲಕ ಅವರ ಜೀವನವನ್ನು ಸುಧಾರಿಸಲು ಕೆಲಸ ಮಾಡುವ ಪರಿಹಾರವಾಗಿದೆ ಎಂದು ಹೇಳುತ್ತಾರೆ ಅವರು.
’15 ನಿಮಿಷಗಳಲ್ಲಿ ಸಮೀಪ ದೃಷ್ಟಿ ವರ್ಧಿಸುತ್ತದೆ’
ರೋಗಿಗಳಿಗೆ ಪ್ರೆಸ್‌ವು (PresVu) ಪ್ರಯೋಜನಗಳ ಬಗ್ಗೆ ಹೇಳುತ್ತ, ಪ್ರೆಸ್ಬಯೋಪಿಯಾಕ್ಕೆ ಕನ್ನಡಕಗಳು, ಕಾಂಟ್ಯಾಕ್ಟ್ ಲೆನ್ಸ್‌ಗಳು ಮತ್ತು ಶಸ್ತ್ರಚಿಕಿತ್ಸಾ ಕ್ರಮಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಪೆಸ್ ವು (PresVu) ಕಣ್ಣಿನ ಡ್ರಾಪ್ 15 ನಿಮಿಷಗಳಲ್ಲಿ ವ್ಯಕ್ತಿಯ ಸಮೀಪ ದೃಷ್ಟಿ ಸುಧಾರಿಸುವುದರಿಂದ ಇದನ್ನು ಪರಿಣಾಮಕಾರಿ ಚಿಕಿತ್ಸೆಯಾಗಿ ಬಳಸಬಹುದು ಎಂದು ಡಾ. ಆದಿತ್ಯ ಸೇಥಿ ಹೇಳುತ್ತಾರೆ.
ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಸಮೀಪದ ದೃಷ್ಟಿ ಮಸುಕಾಗಿದ್ದರೆ ಓದುವಿಕೆ ಅಥವಾ ಇತರ ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
PresVu ನ ಕ್ಲಿನಿಕಲ್ ಸಾಮರ್ಥ್ಯದ ಕುರಿತು ಪ್ರತಿಕ್ರಿಯಿಸಿದ ಡಾ ಧನಂಜಯ್ ಬಖ್ಲೆ ಅವರು, ನೇತ್ರವಿಜ್ಞಾನ ಕ್ಷೇತ್ರದಲ್ಲಿ ಅದರ ಅನುಮೋದನೆಯು ಭರವಸೆಯ ಸಾಧನೆ ಎಂದು ಹೇಳಿದ್ದಾರೆ.
ಪ್ರಿಸ್ಬಯೋಪಿಯಾ ರೋಗಿಗಳಿಗೆ, ಈ ಐ ಡ್ರಾಪ್ ಆಕ್ರಮಣಶೀಲವಲ್ಲದ ಆಯ್ಕೆಯನ್ನು ಒದಗಿಸುತ್ತದೆ ಅದು ಓದುವ ಕನ್ನಡಕಗಳ ಅಗತ್ಯವನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ