ನವದೆಹಲಿ: ಫಾರ್ಚೂನ್ ಇಂಡಿಯಾ ವರದಿಯ ಪ್ರಕಾರ ಎಲ್ಲ ಭಾರತೀಯ ಸೆಲೆಬ್ರಿಟಿಗಳಲ್ಲಿ 2024 ರಲ್ಲಿ ಶಾರುಖ್ ಖಾನ್ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿ ಹೊರಹೊಮ್ಮಿದ್ದಾರೆ.
ಶಾರುಖ್ ಖಾನ್ ಅವರು 92 ಕೋಟಿ ತೆರಿಗೆ ಪಾವತಿಸಿದ್ದು, ನಂತರ ತಮಿಳು ಸೂಪರ್ ಸ್ಟಾರ್ ವಿಜಯ ಅವರು 80 ಕೋಟಿ ತೆರಿಗೆ ಪಾವತಿಸಿದ್ದಾರೆ. 75 ಕೋಟಿ ರೂ. ಪಾವತಿಸಿ ಸಲ್ಮಾನ್ ಖಾನ್ ಕೂಡ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅಮಿತಾಬ್ ಬಚ್ಚನ್ (71 ಕೋಟಿ ರೂ. ತೆರಿಗೆ ಪಾವತಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ರೂ. 66 ಕೋಟಿ ಅಂದಾಜು ತೆರಿಗೆ ಪಾವತಿಯೊಂದಿಗೆ ಅತ್ಯಂತ ಹೆಚ್ಚಿನ ತೆರಿಗೆ ಪಾವತಿದಾರರಾಗಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ.
ಈ ಪಟ್ಟಿಯಲ್ಲಿ ಅಜಯ ದೇವಗನ್ (42 ಕೋಟಿ ರೂ.), ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ 38 ಕೋಟಿ ರೂ., ರಣಬೀರ್ ಕಪೂರ್ (36 ಕೋಟಿ), ಹೃತಿಕ್ ರೋಷನ್ (28 ಕೋಟಿ), ಸಚಿನ್ ತೆಂಡೊಲ್ಕರ್ ರೂ.28 ಕೋಟಿ ರೂ., ಕಪಿಲ್ ಶರ್ಮಾ 26 ಕೋಟಿ ರೂ., ಕ್ರಿಕೆಟರ್ ಸೌರವ್ ಗಂಗೂಲಿ ರೂ.23 ಕೋಟಿ ರೂ., ಕರೀನಾ ಕಪೂರ್ 20 ಕೋಟಿ ರೂ. ಮತ್ತು ನಟರಾದ ಶಾಹಿದ್ ಕಪೂರ್, ಮೋಹನ್ ಲಾಲ್ ಮತ್ತು ಅಲ್ಲು ಅರ್ಜನ್ 14 ಕೋಟಿ ರೂ, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ 13 ಕೋಟಿ ರೂ., ನಟಿ ಕಿಯಾರಾ ಅಡ್ವಾಣಿ 12 ಕೋಟಿ ರೂ, ನಟಿ ಕತ್ರಿನಾ ಕೈಫ್, ಪಂಕಜ್ ತ್ರಿಪಾಠಿ 11 ಕೋಟಿ ರೂ., ಕ್ರಿಕೆಟರ್ ರಿಷಭ್ ಪಂತ್ ರೂ.10 ಕೋಟಿ ರೂ. ಹಾಗೂ ಅಮಿರ್ ಖಾನ್ 10 ಕೋಟಿ ರೂ.ತೆರಿಗೆ ಪಾವತಿಸಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ