ನವದೆಹಲಿ: ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಸೆಪ್ಟೆಂಬರ್ 8 ರ ಭಾನುವಾರ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಗಣೇಶನ ಹಬ್ಬದ ದಿನವಾದ ಸೆಪ್ಟೆಂಬರ್ 7 ರಂದು ಸಂಜೆ 5 ಗಂಟೆ ಸುಮಾರಿಗೆ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ನಟಿ ದೀಪಿಕಾ ಅವರನ್ನು ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಜೊತೆಗೆ ತಾಯಿ ಉಜ್ಜಲಾ ಪಡುಕೋಣೆ ಇದ್ದರು. ಶನಿವಾರ ಅವರು ಆಸ್ಪತ್ರೆಗೆ ಹೋಗುತ್ತಿರುವ ವೀಡಿಯೊಗಳು ಹರಿದಾಡಿದ್ದವು. ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ಜನ್ಮ ನೀಡಿದ್ದಾರೆ.
ತಮ್ಮ ಮೊದಲ ಮಗುವನ್ನು ಸ್ವಾಗತಿಸುವ ಎರಡು ದಿನಗಳ ಮೊದಲು, ದೀಪಿಕಾ ಮತ್ತು ರಣವೀರ್ ನಗರದ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. .
ಈ ವರ್ಷದ ಫೆಬ್ರವರಿ 29ರಂದು ತಾವು ತಾಯಿಯಾಗುತ್ತಿರುವುದಾಗಿ ದೀಪಿಕಾ ಪಡುಕೋಣೆ ತಿಳಿಸಿದ್ದರು.ರಣವೀರ್ ಮತ್ತು ದೀಪಿಕಾ ಡಿಸೆಂಬರ್ 2018 ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ಅದ್ದೂರಿ ಸಮಾರಂಭದಲ್ಲಿ ದಂಪತಿ ವಿವಾಹವಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ