ಕೋಲ್ಕತ್ತಾ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ನನಗೆ ಹುದ್ದೆಯ ಬಗ್ಗೆ ಕಾಳಜಿ ಇಲ್ಲ. ನ್ಯಾಯ ಖಾತ್ರಿ ಪಡಿಸುವುದಾದರೆ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಕಿರಿಯ ವೈದ್ಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ವೈದ್ಯರೊಂದಿಗೆ ಮಾತನಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಸಭೆ ಕರೆದಿದ್ದರು. ಆದರೆ ಪ್ರತಿಭಟನಾ ನಿರತ ವೈದ್ಯರಿಗಾಗಿ ಸುಮಾರು ಎರಡು ತಾಸುಗಳ ಕಾಲ ಕಾಯ್ದು ಕುಳಿತಿದ್ದರು. ನಂತರ ಮಾತನಾಡಿದ ಅವರು “ನಾನು ರಾಜೀನಾಮೆ ನೀಡಲು ಸಿದ್ಧ” ಎಂದು ಹೇಳಿದರು.
ಟಿಎಂಸಿ ಬಿಡುಗಡೆ ಮಾಡಿದ ದೃಶ್ಯಗಳು ಬ್ಯಾನರ್ಜಿ ಖಾಲಿ ಸಭಾಂಗಣದಲ್ಲಿ ಕುಳಿತುಕೊಂಡಿದ್ದು, ಅವರ ಮುಂದೆ ಖಾಲಿ ಕುರ್ಚಿಗಳು ಮತ್ತು ಮೇಜುಗಳ ಸಾಲುಗಳನ್ನು ನೋಡಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ ಅವರು 2 ಗಂಟೆಗಳ ಕಾಲ ಕಾದರೂ ವೈದ್ಯರು ಬರಲಿಲ್ಲ ಎಂದು ಹೇಳಿದರು, “ಜನರು ನ್ಯಾಯವನ್ನು ಬಯಸಿದರೆ, ಜನರ ಹಿತಾಸಕ್ತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನನಗೆ ಮುಖ್ಯಮಂತ್ರಿ ಕುರ್ಚಿ ಬೇಡ ಎಂದರು.
ವೈದ್ಯರನ್ನು ಭೇಟಿ ಮಾಡಲು ನಾವು ಎರಡು ತಾಸುಗಳಿಂದ ಕಾಯುತ್ತಿದ್ದೇವೆ. ನಾವು ಅವರಿಗೆ ಪತ್ರ ಬರೆದಿದ್ದೇವೆ ಮತ್ತು ಅವರು ಬರುತ್ತಾರೆ ಎಂದು ಹೇಳಿದರು, ಅದಕ್ಕಾಗಿಯೇ ನಾವು ಈ ವ್ಯವಸ್ಥೆ ಮಾಡಿದೆವು. ನಾವು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಲು ಬಯಸಿದ್ದೇವೆ. ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಗೃಹ ಕಾರ್ಯದರ್ಶಿ… ಎಲ್ಲರೂ ಇಲ್ಲಿದ್ದರು,” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಗುರುವಾರ ಸಂಜೆ 32 ಜನ ವೈದ್ಯರ ನಿಯೋಗವು ರಾಜ್ಯ ಸಚಿವಾಲಯದ ಹೊರಗಿನ ವರೆಗೆ ಬಂದಿತ್ತು. ಆದರೆ ಅವರ ಬೇಡಿಕೆಯಾದ ಚರ್ಚೆಯ ಲೈವ್ ಸ್ಟ್ರೀಮಿಂಗ್ ಅನ್ನು ಅನುಮತಿಸದ ಕಾರಣ ಅವರು ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು.
ಚರ್ಚೆಯ ಲೈವ್ ಸ್ಟ್ರೀಮಿಂಗ್‌ಗೆ ಸರ್ಕಾರ ಏಕೆ ಒಪ್ಪಲಿಲ್ಲ?
ಚರ್ಚೆಯ ಲೈವ್ ಸ್ಟ್ರೀಮಿಂಗ್‌ಗೆ ಸರ್ಕಾರ ಏಕೆ ಅವಕಾಶ ನೀಡಲಿಲ್ಲ ಎಂದು ಸ್ಪಷ್ಟಪಡಿಸಿದ ಬಂಗಾಳ ಮುಖ್ಯಮಂತ್ರಿ, “ವಿಷಯವು ನ್ಯಾಯಾಲಯದಲ್ಲಿ ಇರುವುದರಿಂದ ಲೈವ್ ತೋರಿಸಲು ಸಾಧ್ಯವಿಲ್ಲ. ಪ್ರತಿಭಟನೆಯನ್ನು ಅಂತ್ಯಗೊಳಿಸಲು ಕಿರಿಯ ವೈದ್ಯರೊಂದಿಗೆ ಮಾತುಕತೆ ನಡೆಸಲು ನಾನು ಮೂರು ಬಾರಿ ಪ್ರಯತ್ನಿಸಿದೆ. ಪ್ರತಿಭಟನೆ ಮಾಡುವ ಕಿರಿಯ ವೈದ್ಯರ ವಿರುದ್ಧ ನಾನು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ನಾವು ಹಿರಿಯರಾಗಿರುವುದರಿಂದ ಅವರನ್ನು ಕ್ಷಮಿಸುತ್ತೇನೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ