ಬಿಜೆಪಿ ಶಿಸ್ತು ಸಮಿತಿಯಿಂದ ಶಾಸಕ ಮುನಿರತ್ನಗೆ ಶೋಕಾಸ್‌ ನೋಟಿಸ್

ಬೆಂಗಳೂರು : ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಅಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸಂಕಷ್ಟ ಎದುರಾಗಿರುವ ಬೆನ್ನಲ್ಲೇ ಬಿಜೆಪಿಯಿಂದ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಮುನಿರತ್ನ ಮೇಲೆ ಕೇಳಿ ಬಂದಿರುವ ಆರೋ ಪದ ಬಗ್ಗೆ ಸ್ಪಷ್ಟಿಕರಣ ನೀ ಡುವಂತೆ ಶೋ ಕಾಸ್‌ ನೋಟಿಸ್ ನೀಡಿದ್ದಾರೆ.
ಮುನಿರತ್ನ ಅವರದ್ದು ಎನ್ನಲಾದ ಆಡಿಯೋದಲ್ಲಿ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂಬುದು ಹಲವೆಡೆ ಪ್ರಸಾರವಾಗುತ್ತಿದೆ. ಇದು ಪಕ್ಷದ ಶಿಸ್ತಿಗೆ ಧಕ್ಕೆಯನ್ನುಂಟು ಮಾಡಿದೆ. ನೋಟಿಸ್ ತಲುಪಿದ 5 ದಿನಗಳ ಒಳಗಾಗಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ಸ್ಪಷ್ಟಿಕರಣ ನೀಡಬೇ ಕು ಎಂದು ತಿಳಿಸಲಾಗಿದೆ.
ಹಣಕಾಸಿನ ವಿಚಾರವಾಗಿ ಚಲುವರಾಜು ಅವರು ಶಾಸಕ ಮುನಿರತ್ನ ಅವರು ಬೆದರಿಕೆ ಹಾಕಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದೂರು ನೀಡಿದ್ದು, ಈ ಸಂಬಂಧ ಎರಡು ಎಫ್​ಐಆರ್​​​ ದಾಖಲಾಗಿದೆ. ಇದರ ಬೆನ್ನಲ್ಲೇ ಮುನಿರತ್ನ ಅವರನ್ನು ಬಂಧಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement