ಪೇಜರ್ ಗಳು ಸ್ಫೋಟಗೊಂಡ ಒಂದು ದಿನದ ನಂತರ ಹಿಜ್ಬೊಲ್ಲಾ ಭದ್ರಕೋಟೆಯಲ್ಲಿ ವಾಕಿ ಟಾಕಿ ಸ್ಫೋಟ; 3 ಸಾವು

ಬೈರುತ್: ಲೆಬನಾನ್‌ನಾದ್ಯಂತ ಪೇಜರ್‌ಗಳು ಸ್ಫೋಟಗೊಂಡು ಒಂಬತ್ತು ಜನರು ಸಾವಿಗೀಡಾದ ಪ್ರಕರಣದಲ್ಲಿ 2,800 ಕ್ಕೂ ಹೆಚ್ಚು ಜನರು ಗಾಯಗೊಂಡ ಒಂದು ದಿನದ ನಂತರ, ಹಿಜ್ಬೊಲ್ಲಾ ಭದ್ರಕೋಟೆ ಬೈರುತ್‌ ನಗರದಲ್ಲಿ ವಾಕಿ-ಟಾಕಿಗಳು ಸ್ಫೋಟಗೊಂಡಿವೆ ಎಂದು ಲೆಬನಾನಿನ ಉಗ್ರಗಾಮಿ ಸಂಘಟನೆ ಹಿಜ್ಬೊಲ್ಲಾಗೆ ನಿಕಟ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಷ್ಟು ವಾಕಿ-ಟಾಕಿಗಳು ಸ್ಫೋಟಗೊಂಡಿವೆ ಎಂಬುದು ಇನ್ನೂ ತಿಳಿದಿಲ್ಲ.
ಪೇಜರ್ ಸ್ಫೋಟಗಳು ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಸಂಘಟನೆಯ ಸಾವಿರಾರು ಸದಸ್ಯರನ್ನು ಗಾಯಗೊಳಿಸಿದ ನಂತರ ಇರಾನ್-ಬೆಂಬಲಿತ ಹಿಜ್ಬೊಲ್ಲಾ ಇಸ್ರೇಲಿ ಫಿರಂಗಿದಳದ ಸ್ಥಾನಗಳ ಮೇಲೆ ರಾಕೆಟ್‌ಗಳಿಂದ ದಾಳಿ ಮಾಡಿದೆ ಎಂದು ಹೇಳಿದೆ.

ವಿದೇಶಿ ನೆಲದಲ್ಲಿ ಅತ್ಯಾಧುನಿಕ ಕಾರ್ಯಾಚರಣೆಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆ ಮೊಸಾದ್, ಮಂಗಳವಾರದ ಸ್ಫೋಟಗಳಿಗೆ ತಿಂಗಳ ಮೊದಲು ಹೆಜ್ಬೊಲ್ಲಾ ಆಮದು ಮಾಡಿಕೊಂಡ ಪೇಜರ್‌ಗಳಲ್ಲಿ ಸ್ಫೋಟಕಗಳನ್ನು ಹಾಕಿದೆ ಎಂದು ಹಿರಿಯ ಲೆಬನಾನಿನ ಭದ್ರತಾ ಮೂಲ ಮತ್ತು ಇನ್ನೊಂದು ಮೂಲವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ.
ಕಳೆದ ಸಂಜೆ, ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಘಟನೆಯಲ್ಲಿ ಒಂಬತ್ತು ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 2,800 ಜನರು ಗಾಯಗೊಂಡಿದ್ದಾರೆ ಎಂಬುದನ್ನು ದೃಢಪಡಿಸಿದರು.
ಮಂಗಳವಾರದ ಪೇಜರ್ ಸ್ಫೋಟದ ಘಟನೆಯಲ್ಲಿ ಲೆಬನಾನ್‌ನಲ್ಲಿನ ತನ್ನ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ʼಕ್ರಿಮಿನಲ್‌ʼ ಎಂದು ಕರೆದ ನಂತರ ವರದಿಗಾರನನ್ನು ಪತ್ರಿಕಾಗೋಷ್ಠಿಯಿಂದ ಹೊರಗೆ ಎಳೆದೊಯ್ದ ಭದ್ರತಾ ಸಿಬ್ಬಂದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement