ಶುಕ್ರವಾರ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2 ನೇ ದಿನದಂದು ವಿರಾಟ್ ಕೊಹ್ಲಿ ಡಿಆರ್‌ಎಸ್ ಪ್ರಮಾದ ಎಸಗಿದ್ದಾರೆ. ಕೊಹ್ಲಿ ಬಾಂಗ್ಲಾದೇಶದ ಬೌಲರ್‌ಗಳ ವಿರುದ್ಧ ಉತ್ತಮ ಟಚ್‌ನಲ್ಲಿದ್ದರು. ಅವರು 36 ಎಸೆತಗಳಲ್ಲಿ ಎರಡು ಬೌಂಡರಿಗಳ ಸಹಾಯದಿಂದ 17 ರನ್ ಗಳಿಸಿದರು. ಆದಾಗ್ಯೂ, ಮೆಹಿದಿ ಹಸನ್ ಮಿರಾಜ್ ಅವರ ಪೂರ್ಣ ಎಸೆತ ಅವರ ಮುಂಭಾಗದ ಪ್ಯಾಡ್‌ಗೆ ಅಪ್ಪಳಿಸಿತು. ಅಂಪೈರ್ ಔಟ್ ನೀಡಿದರು. ಆದರೆ ಕೊಹ್ಲಿ ಅವರು ಶುಭಮನ್ ಗಿಲ್ ಕಡೆಗೆ ನಡೆದು ಚರ್ಚಿಸಿದರು. ಆದರೆ ಕೊಹ್ಲಿ ಅಂಪೈರ್ ನೀಡಿದ ಎಲ್‌ಬಿಡಬ್ಲ್ಯು ತೀರ್ಪನ್ನು ಪರಿಶೀಲಿಸದಿರಲು ನಿರ್ಧರಿಸಿದರು. ಇದು ಬೆಂಬಲಿಗರ ನಿರಾಶೆಗೆ ಕಾರಣವಾಯಿತು.
ವಾಸ್ತವಾಗಿ ಚೆಂಡು ಕೊಹ್ಲಿ ಬ್ಯಾಟಿನ ಒಳಭಾಗವನ್ನು ಸ್ಪರ್ಷಿಸಿರುವುದು ಕಂಡುಬಂದಿದೆ ಮತ್ತು ಅವರು ಅಂಪೈರ್ ತೀರ್ಪು ಪ್ರಶ್ನಿಸಿದರರೆ ಡಿಆರ್ ಎಸ್, ಅಂಪೈರ್ ಅವರ ನಿರ್ಧಾರ ರದ್ದುಗೊಳಿಸುವುದಕ್ಕೆ ಕಾರಣವಾಗುತ್ತಿತ್ತು ಎಂದು ತೋರಿಸಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕೊಹ್ಲಿ ಅಂಪೈರ್ ತೀರ್ಪನ್ನು ಪ್ರಶ್ನಿಸಿದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಭಾರತ ಎರಡನೇ ಇನ್ನಿಂಗ್ಸ್‌ನ ಮುಕ್ತಾಯಕ್ಕೆ ಮೂರು ವಿಕೆಟ್‌ಗೆ 81 ರನ್ ಗಳಿಸಿ ತಮ್ಮ ಒಟ್ಟಾರೆ ಮುನ್ನಡೆಯನ್ನು 308 ರನ್‌ಗಳ ಮುನ್ನಡೆ ಸಾಧಿಸಿದೆ.
ದಿನದಾಟದ ಅಂತ್ಯಕ್ಕೆ ಶುಭಮನ್ ಗಿಲ್ (ಔಟಾಗದೆ 33) ಮತ್ತು ರಿಷಭ್ ಪಂತ್ (ಔಟಾಗದೆ 12) ಕ್ರೀಸ್‌ನಲ್ಲಿದ್ದರು.
ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ 227 ರನ್‌ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಭಾರತದ ಮೊದಲ ಇನಿಂಗ್ಸ್ ಮೊತ್ತವಾದ 376 ಕ್ಕೆ ಉತ್ತರವಾಗಿ ಬಾಂಗ್ಲಾದೇಶ ಕೇವಲ 47.1 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು.
ವೇಗಿ ಜಸ್ಪ್ರೀತ್ ಬುಮ್ರಾ (4/50) ಭಾರತದ ಅತ್ಯಂತ ಯಶಸ್ವಿ ಬೌಲರ್ ಆದರು.
ಇದಕ್ಕೂ ಮೊದಲು ಭಾರತ 339/6 ನೊಂದಿಗೆ ದಿನದಾಟ ಮುಂದುವರಿಸಿತು ಮತ್ತು ಕೇವಲ 37 ರನ್‌ಗಳ ಸೇರ್ಪಡೆಗೆ ಎಲ್ಲಾ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ರವಿಚಂದ್ರನ್ ಅಶ್ವಿನ್ ಅವರು 113 ರನ್‌ಗಳಿಸಿ ಔಟಾದರು. ರವೀಂದ್ರ ಜಡೇಜಾ 86 ರನ್ ಗಳಿಸಿದರು. ಬಾಂಗ್ಲಾದೇಶ ಪರ, ಹಸನ್ ಮಹಮೂದ್ ತಮ್ಮ ಐದು ವಿಕೆಟ್ (5/83) ಪಡೆದರೆ ತಸ್ಕಿನ್ ಅಹ್ಮದ್ ಮೂರು ವಿಕೆಟ್ ಪಡೆದರು.
ನಿಮ್ಮ ಕಾಮೆಂಟ್ ಬರೆಯಿರಿ