ನವದೆಹಲಿ : ವಾಯುಪಡೆಯ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರಪ್ರೀತ್ ಸಿಂಗ್ ಅವರು ನೇಮಕಗೊಂಡಿದ್ದು, ಸೆ. 30 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಅಮರಪ್ರೀತ್ ಸಿಂಗ್ ಅವರು ಅಕ್ಟೋಬರ್ 27, 1964 ರಂದು ಜನಿಸಿದರು. ಅವರನ್ನು ಡಿಸೆಂಬರ್ 1984 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಸ್ಟ್ರೀಮ್‌ಗೆ ನಿಯೋಜಿಸಲಾಗಿತ್ತು. ವಿವಿಧ ಕಮಾಂಡ್, ಸಿಬ್ಬಂದಿ, ಸೂಚನಾ ಮತ್ತು ವಿದೇಶಿ ನೇಮಕಾತಿಗಳಲ್ಲಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಅಮರಪ್ರೀತ್ ಸಿಂಗ್ ಅವರು 5,000 ಗಂಟೆಗಳ ಕಾಲ ಯುದ್ಧ ವಿಮಾನ ಹಾರಾಟ ಮಾಡಿದ ಅನುಭವ ಹೊಂದಿದ್ದಾರೆ. ವಾಯುಸೇನೆಯಲ್ಲಿ ಅಮರ್ ಪ್ರೀತ್ ಸಿಂಗ್ ಅವರು ಸುಮಾರು 40 ವರ್ಷಗಳ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆ ನೀಡಿದ್ದಾರೆ. ಅವರು ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಆಫ್ ದಿ ಏರ್ ಸ್ಟಾಫ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲಿ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಅವರು ನಿವೃತ್ತರಾದ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ
ಇತ್ತೀಚೆಗೆ ಐಎಎಫ್ ಆಯೋಜಿಸಿದ್ದ ಬಹುರಾಷ್ಟ್ರೀಯ ಯುದ್ಧ ವಿಮಾನಗಳ ಕಸರತ್ತು ‘ತರಂಗ ಶಕ್ತಿ’ ಆಯೋಜಿಸುವಲ್ಲಿ ಅಮರಪ್ರೀತ್ ಸಿಂಗ್ ಅವರು ಮುಖ್ಯ ಪಾತ್ರ ವಹಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ