ಮೈಸೂರು: ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಆನೆಗಳು ಶುಕ್ರವಾರ ರಾತ್ರಿ ದಿಢೀರ್ ಕಾದಾಟಕ್ಕೆ ಇಳಿದು ಅರಮನೆಯಿಂದ ಹೊರಬಂದ ಕಾರಣ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಶ್ವವಿಖ್ಯಾತ ದಸರಾ ಗಜಪಡೆಯ (Mysuru Dasara Elephants) ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿದ್ದು, ದಾಳಿಗೆ ತತ್ತರಿಸಿದ ಕಂಜನ್ ಆನೆ ಅರಮನೆ ಆವರಣದಿಂದ ಹೊರ ಓಡಿದೆ.
ಅಕ್ಟೋಬರ್ 12 ರಂದು ನಡೆಯಲಿರುವ ದಸರಾ ಅಂಗವಾಗಿ ಸಾಂಪ್ರದಾಯಿಕ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಲು ಸುಮಾರು 11 ಆನೆಗಳನ್ನು ಕರೆತರಲಾಗಿದೆ. ಮಳೆ ಕಾರಣದಿಂದ ಆನೆಗೆಳಿಗೆ ಅರಮನೆ ಆವರಣದಲ್ಲೇ ತಾಲೀಮು ನಡೆಸಲಾಗಿತ್ತು. ಶುಕ್ರವಾರ ತಾಲೀಮು ನಂತರ ರಾತ್ರಿ 7:45ರ ವೇಳೆ ಧನಂಜಯ ಹಾಗೂ ಕಂಜನ್ ಆನೆಗಳ ನಡುವೆ ಜಗಳ ಶುರುವಾಗಿತ್ತು. ರಾತ್ರಿ ಆಹಾರ ತಿನ್ನುವ ವೇಳೆ ಈ ಗಲಾಟೆ ಆರಂಭವಾಗಿತ್ತು. ಘರ್ಷಣೆಯ ನಂತರ, ಗಾಬರಿಯಾದ ಕಂಜನ್ ಆನೆ ಅರಮನೆಯ ಸಂಕೀರ್ಣದ ತಡೆಗೋಡೆಗಳನ್ನು ಭೇದಿಸಿ ನಗರದ ಬೀದಿಗಳಲ್ಲಿ ಓಡಿಹೋಗಿದ್ದನ್ನು ವೀಡಿಯೊ ತೋರಿಸಿದೆ. ಅದರ ಹಿಂದೆಯೇ ಧನಂಜಯ ಆನೆ ಅಟ್ಟಿಸಿಕೊಂಡು ಹಿಂಬಾಲಿಸಿದೆ. ದಿಢೀರ್ ಕಾಣಿಸಿಕೊಂಡ ಆನೆಗಳನ್ನು ನೋಡಿ ಸ್ಥಳೀಯರಲ್ಲಿ ಆತಂಕವಾಗಿದ್ದು, ಹಲವರು ಭಯಭೀತರಾಗಿ ಸ್ಥಳದಿಂದ ಓಡಿ ಹೋಗಿದ್ದಾರೆ.
ಅರಮನೆಯ ಜಯ ಮಾರ್ತಾಂಡ ದ್ವಾರದ ಮೂಲಕ ಕಂಜನ್ ಹಾಗೂ ಧನಂಜಯ ಆನೆಗಳು ಓಡಿಕೊಂಡು ಹೊರಬಂದಿವೆ. ಕಂಜನ್ ಆನೆಯನ್ನು ಅರಮನೆಯಿಂದ ಧನಂಜಯ ಆನೆ ಹೊರಗೆ ಓಡಿಸಿಕೊಂಡು ಬಂದಿತ್ತು. ಇದರಿಂದ ಕೆಲಕಾಲ ಜನ, ಮಾವುತರು, ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆನೆಗಳು ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿಹೋದರು.
ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತಿತು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಕಾವಾಡಿಗಳ ಚಾಣಾಕ್ಷತದಿಂದ ಆನೆಗಳ ಆಟೋಟಕ್ಕೆ ಬ್ರೇಕ್ ಬಿದ್ದಿದೆ . ಬಳಿಕ ಆನೆಗಳನ್ನ ಅರಮನೆಗೆ ಆನೆಗಳನ್ನು ಸಿಬ್ಬಂದಿ ಕರೆತಂದಿದ್ದಾರೆ. ಸದ್ಯ ಕೋಡಿಸೋಮೇಶ್ವರ ದೇವಸ್ಥಾನ ಸಮೀಪ ಇರುವ ಆನೆಗಳು ಬಿಡಾರ ಬಿಟ್ಟಿವೆ.
ಒಂದು ಗಂಟೆಗೂ ಹೆಚ್ಚು ಕಾಲ ಅರಣ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಕಂಜನ್ ಆನೆಯನ್ನು ಹತೋಟಿಗೆ ತಂದರು. ಏತನ್ಮಧ್ಯೆ, ಧನಂಜಯ ಆನೆಯನ್ನು ಮಾವುತನು ಯಶಸ್ವಿಯಾಗಿ ಶಾಂತಗೊಳಿಸಿದ್ದಾನೆ ಮತ್ತು ಹೆಚ್ಚಿನ ಘಟನೆಯಿಲ್ಲದೆ ಅರಮನೆಯ ಶಿಬಿರಕ್ಕೆ ಕೊಂಡೊಯ್ಯಲಾಯಿತು.
ನಾಟಕೀಯ ದೃಶ್ಯದ ಹೊರತಾಗಿಯೂ, ಯಾವುದೇ ಗಾಯಗಳು ಉಂಟಾದ ವರದಿಯಾಗಿಲ್ಲ ಮತ್ತು ಗದ್ದಲದ ಸಮಯದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಮೈಸೂರು ದಸರಾ ಕಾರ್ಯಕ್ರಮಕ್ಕೂ ಮುನ್ನ ಇತ್ತೀಚಿನ ವರ್ಷಗಳಲ್ಲಿ ವರದಿಯಾದ ಮೊದಲ ಘಟನೆ ಇದಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ