ಮಾನಹಾನಿ ಪ್ರಕರಣ : ಶಿವಸೇನೆ (ಯುಬಿಟಿ) ನಾಯಕ ಸಂಜಯ ರಾವತಗೆ ಜೈಲು ಶಿಕ್ಷೆ

ಮುಂಬೈ: ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಶಿವಸೇನಾ (ಯುಬಿಟಿ) ಸಂಸದ ಸಂಜಯ ರಾವತ್ ಅವರಿಗೆ ಮುಂಬೈ ನ್ಯಾಯಾಲಯವು ಗುರುವಾರ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
ಮಜಗಾಂವ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಭಾರತೀಯ ದಂಡ ಸಂಹಿತೆ ಸೆಕ್ಷನ್ 500 (ಮಾನನಷ್ಟ ಶಿಕ್ಷೆ) ಅಡಿಯಲ್ಲಿ ರಾಜ್ಯಸಭಾ ಸದಸ್ಯ ಸಂಜಯ ರಾವತ್ ಅವರನ್ನು ದೋಷಿ ಎಂದು ಹೇಳಿತು ಮತ್ತು ಅವರಿಗೆ 25,000 ರೂ.ದಂಡ ವಿಧಿಸಿತು.

ಮೇಧಾ ಸೋಮಯ್ಯ ಅವರು ವಕೀಲ ವಿವೇಕಾನಂದ ಗುಪ್ತಾ ಮೂಲಕ ಸಲ್ಲಿಸಿದ ದೂರಿನಲ್ಲಿ ಸಂಜಯ ರಾವತ್‌ ಅವರು ತಮ್ಮ ಮತ್ತು ತಮ್ಮ ಪತಿ ವಿರುದ್ಧ ಆಧಾರರಹಿತ ಮತ್ತು ಮಾನನಷ್ಟ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಕೆಲವು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹಣ ದುರ್ಬಳಕೆ ಮಾಡಿಕೊಂಡು ಸೋಮಯ್ಯ ದಂಪತಿ 100 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ರಾವತ್ ಆರೋಪಿಸಿದ್ದರು. ಎಂದು ಅವರು ಹೇಳಿದರು.
ಆರೋಪಿಗಳು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಮಾನಹಾನಿಕರವಾಗಿದೆ. ಸಾರ್ವಜನಿಕರ ದೃಷ್ಟಿಯಲ್ಲಿ ನನ್ನ ಚಾರಿತ್ರ್ಯ ವಧೆ ಮಾಡುವ ಹೇಳಿಕೆಗಳನ್ನು ನೀಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಪೊಲೀಸ್‌ ಕುಟುಂಬದ ಹತ್ಯೆಯ ಘಟನೆಯ ನಂತರ ಉಪವಿಭಾಗೀಯ ಅಧಿಕಾರಿಯನ್ನು ಬೆನ್ನಟ್ಟಿದ ಉದ್ರಿಕ್ತ ಗುಂಪು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement