ಮುಂಬೈ: ಖ್ಯಾತ ಬಾಲಿವುಡ್ ನಟ ಗೋವಿಂದ ಅವರಿಗೆ ಇಂದು, ಮಂಗಳವಾರ ಬೆಳಗ್ಗೆ ಮನೆಯಲ್ಲಿ ಕಾಲಿಗೆ ಗುಂಡು ತಗುಲಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ನಟ ಗೋವಿಂದ ಅಪಾಯದಿಂದ ಪಾರಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ. ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಮಂಗಳವಾರ (ಅಕ್ಟೋಬರ್ 1) ಬೆಳಿಗ್ಗೆ 4:45 ರ ಸುಮಾರಿಗೆ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಿಸ್‌ಫೈರ್ ಆಗಿ ಗುಂಡು ಅವರ ಕಾಲಿಗೆ ತಗುಲಿ ಗಾಯವಾಗಿದೆ.
60 ವರ್ಷದ ಗೋವಿಂದ ಘಟನೆಯ ಸಮಯದಲ್ಲಿ ತನ್ನ ಜುಹು ಮನೆಯಲ್ಲಿ ಒಬ್ಬರೇ ಇದ್ದರು. ಅವರು ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗೋವಿಂದ ಅವರನ್ನು ಅವರ ಮನೆ ಸಮೀಪದ ಕ್ರಿಟಿಕೇರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಅವರು ವಾಪಸ್ಸಾದರು ಎಂದು ವರದಿಯಾಗಿದೆ,
“ನಾವು ಕೋಲ್ಕತ್ತಾದಲ್ಲಿ ಕಾರ್ಯಕ್ರಮಕ್ಕಾಗಿ ಹೋಗಲು ಬೆಳಿಗ್ಗೆ 6 ಗಂಟೆಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು ಮತ್ತು ನಾವು ವಿಮಾನ ನಿಲ್ದಾಣವನ್ನು ತಲುಪಿದ್ದೆವು. ಗೋವಿಂದ ಅವರು ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಈ ಅಪಘಾತ ಸಂಭವಿಸಿದೆ ಎಂದು ನಟ ಗೋವಿಂದ ಅವರ ಮ್ಯಾನೇಜರ್ ಹೇಳಿದ್ದಾರೆ.
“ರಿವಾಲ್ವರನ್ನು ಕಪಾಟಿನಲ್ಲಿ ಇಡುತ್ತಿದ್ದಾಗ ಅದು ಬಿದು ಮಿಸ್ ಫೈರ್ ಆಗಿದೆ, ದೇವರ ದಯೆಯಿಂದ ಗೋವಿಂದ ಅವರ ಕಾಲಿಗೆ ಮಾತ್ರ ಗಾಯವಾಗಿದ್ದು, ಏನೂ ಗಂಭೀರವಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ