ಮುಂಬೈ: ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಹೆಸರನ್ನು ಅಹಲ್ಯಾನಗರ ಎಂದು ಮರುನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
ಈ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮಾಹಿತಿ ನೀಡಿದ್ದು, ಅಹಮದ್ ನಗರ ಹೆಸರನ್ನು ಮರುನಾಮಕರಣ ಮಾಡುವ ನಿರ್ಧಾರವನ್ನು ಕಳೆದ ಮಾರ್ಚ್‌ನಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡಿತ್ತು. ನಂತರ ಕೇಂದ್ರದದ ಸಮ್ಮತಿಗಾಗಿ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.
ಮರಾಠ-ಮಾಳವಾ ಸಾಮ್ರಾಜ್ಯದ 18ನೇ ಶತಮಾನದ ರಾಣಿ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಲು ಪ್ರಸ್ತಾಪಿಸಿತ್ತು.
ಅವರು ಅಹಮದ್‌ನಗರ ಜಿಲ್ಲೆಯ ಚೌಂಡಿಯಲ್ಲಿ ಜನಿಸಿದರು ಮತ್ತು ನಂತರ ಹೋಳ್ಕರ್ ರಾಜಮನೆತನದ ಖಂಡೇರಾವ್ ಹೋಳ್ಕರ್ ಅವರನ್ನು ವಿವಾಹವಾದರು. ಹೀಗಾಗಿ ಅವರ ಹೆಸರನ್ನು ಜಿಲ್ಲೆಗೆ ಇಡಲು ಪ್ರಸ್ತಾಪಿಸಲಾಗಿತ್ತು ಎಂದು ಅವರು ತಿಳಿಸಿದರು.
ಕೇಂದ್ರದ ಇದಕ್ಕೆ ಸಮ್ಮತಿ ಸೂಚಿಸಿದ್ದು, ಇದೊಂದು ಐತಿಹಾಸಿಕ ಘಟನೆ. ಯಾಕೆಂದರೆ ಈ ವರ್ಷ ಪುಣ್ಯಶ್ಲೋಕ ಅಹಲ್ಯಾ ದೇವಿಯ 300ನೇ ಜನ್ಮ ವರ್ಷಾಚರಣೆಯಾಗಿದೆ ಎಂದು ರಾಧಾಕೃಷ್ಣ ವಿಖೆ ಪಾಟೀಲ ಹೇಳಿದರು.
2022 ರಲ್ಲಿ, ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಹೆಸರನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಾಶಿವ್ ಎಂದು ಬದಲಾಯಿಸಲಾಯಿತು. ನಗರಗಳಾದ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಗೆ ಕ್ರಮವಾಗಿ ಮೊಘಲ್ ಚಕ್ರವರ್ತಿಗಳಾದ ಔರಂಗಜೇಬ್ ಮತ್ತು ನಿಜಾಮ್ ಮೀರ್ ಓಸ್ಮಾನ್ ಅಲಿ ಖಾನ್ ಅವರ ಹೆಸರನ್ನು ಇಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ