ವಿದೇಶೀ ವಿನಿಮಯ ಸಂಗ್ರಹ : 700 ಶತಕೋಟಿ ಡಾಲರ್ ದಾಟಿದ ವಿಶ್ವದ 4ನೇ ರಾಷ್ಟ್ರವಾದ ಭಾರತ…

ನವದೆಹಲಿ: ಇದೇ ಮೊದಲ ಬಾರಿಗೆ, ಭಾರತದ ವಿದೇಶಿ ವಿನಿಮಯ (forex) ಮೀಸಲು ಸಂಗ್ರಹ $700 ಬಿಲಿಯನ್ ಗಡಿಯನ್ನು ದಾಟಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಸತತ ಏಳು ವಾರಗಳ ಗಮನಾರ್ಹ ಬೆಳವಣಿಗೆಯ ಸರಣಿಯನ್ನು ಮುಂದುವರೆಸಿದೆ.
ಈ ಸಾಧನೆಯೊಂದಿಗೆ, ಭಾರತವು ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್‌ ನಂತರ ಈ ಮೈಲಿಗಲ್ಲು ದಾಟಿದ ವಿಶ್ವದ ನಾಲ್ಕನೇ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿದೇಶೀ ವಿನಿಮಯ ಮೀಸಲು $12.588 ಶತಕೋಟಿಗಳಷ್ಟು ಏರಿಕೆಯಾಗಿದೆ. ಇದು ಜುಲೈ 2023 ರ ಮಧ್ಯಭಾಗದ ನಂತರದ ಅತಿದೊಡ್ಡ ಸಾಪ್ತಾಹಿಕ ಹೆಚ್ಚಳವಾಗಿದೆ, ಸೆಪ್ಟೆಂಬರ್ 27 ಕ್ಕೆ ಕೊನೆಗೊಂಡ ವಾರಕ್ಕೆ $704.885 ಶತಕೋಟಿಯ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಹಿಂದಿನ ವಾರದಲ್ಲಿ $692.296 ಶತಕೋಟಿ ಇದ್ದ ಫಾರೆಕ್ಸ್ ಮೀಸಲು ಒಂದೇ ವಾರದಲ್ಲಿ $2.838 ಶತಕೋಟಿ ಹೆಚ್ಚಳವಾಗಿದೆ. 2024 ರಲ್ಲಿ ಈವರೆಗೆ, ಭಾರತದ ವಿಧೇಶಿ ವಿನಿಮಯ ಕಳೆದ ಕಳೆದ ವರ್ಷ ಪೂರ್ತಿ ಗಮನಿಸಿದರೆ ಸುಮಾರು $62 ಶತಕೋಟಿ ಹೆಚ್ಚಳವಾಗಿತ್ತು. 2024 ರಲ್ಲಿ ಇನ್ನೂ ಪೂರ್ತಿ ವರ್ಷ ಮುಗಿಯುವುದರೊಳಗೆ ವಿದೇಶೀ ವಿನಿಮಯ ಮೀಸಲು $87.6 ಶತಕೋಟಿಗಳಷ್ಟು ಏರಿಕೆಯಾಗಿದೆ.
ಸಂಭಾವ್ಯ ಜಾಗತಿಕ ಅಡೆತಡೆಗಳಿಂದ ದೇಶೀಯ ಆರ್ಥಿಕ ಚಟುವಟಿಕೆಯನ್ನು ರಕ್ಷಿಸುವಲ್ಲಿ ವಿದೇಶಿ ವಿನಿಮಯ ಮೀಸಲುಗಳ ಈ ಗಣನೀಯ ಪ್ರಮುಖ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಆರ್‌ಬಿಐನ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದ ವಿದೇಶಿ ಕರೆನ್ಸಿ ಆಸ್ತಿಗಳು (ಎಫ್‌ಸಿಎ) – ವಿದೇಶೀ ವಿನಿಮಯ ಮೀಸಲುಗಳ ಅತಿದೊಡ್ಡ ಅಂಶವಾಗಿದ್ದು, $10.468 ಶತಕೋಟಿ ಹೆಚ್ಚಳವಾಗಿ $616.154 ಶತಕೋಟಿಗೆ ಏರಿದೆ. ವಾರದಲ್ಲಿ ಭಾರತದ ಚಿನ್ನದ ನಿಕ್ಷೇಪಗಳು $2.184 ಶತಕೋಟಿಯಿಂದ $65.796 ಶತಕೋಟಿಗೆ ಏರಿಕೆಯಾಗಿದೆ.

ಪ್ರಮುಖ ಸುದ್ದಿ :-   75 ಬಾರಿ ಸಂವಿಧಾನ ಬದಲಾಯಿಸಿರುವ ಕಾಂಗ್ರೆಸ್...ಅದಕ್ಕೆ ತುರ್ತು ಪರಿಸ್ಥಿತಿ ಕಳಂಕ ಅಳಿಸಿಹಾಕಲು ಸಾಧ್ಯವಿಲ್ಲ ; ಪ್ರಧಾನಿ ಮೋದಿ ವಾಗ್ದಾಳಿ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement