ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ; ನ್ಯಾಶನಲ್ ಕಾನ್ಫರೆನ್ಸ್- ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ…

ನವದೆಹಲಿ : ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ ಬಾರಿಸಿದೆ.
ಮೈತ್ರಿಕೂಟವು ಕೇಂದ್ರಾಡಳಿತ ಪ್ರದೇಶದ 90 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆಲುವು ಸಾಧಿಸಿದೆ ಅಥವಾ ಮುನ್ನಡೆ ಸಾಧಿಸಿದೆ. ವಿವಾದಾತ್ಮಕ ಹೊಸ ನಿಯಮದ ಅಡಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ ಸಿನ್ಹಾ ಅವರು ಇನ್ನೂ ಐವರನ್ನು ಶಾಕರನ್ನಾಗಿ ನಾಮನಿರ್ದೇಶನ ಮಾಡಲಿದ್ದಾರೆ.
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅತಂತ್ರ ಫಲಿತಾಂಶದತ್ತ ಬೊಟ್ಟು ಮಾಡಿದ್ದವು. ಆದರೆ ಫಲಿತಾಂಶ ಅದನ್ನು ಸುಳ್ಳಾಗಿದ್ದು, ನ್ಯಾಶನಲ್‌ ಕಾನ್ಫರೆನ್ಸ್‌-ಕಾಂಗ್ರೆಸ್‌ ಮೈತ್ರಿಕೂಟವನ್ನು ಸರಳ ಬಹುಮತದತ್ತ ಕೊಂಡೊಯ್ದಿದೆ.
ಆದರೆ ಕಾಂಗ್ರೆಸ್‌ ಪ್ರದರ್ಶನ ನಿರಾಶಾದಾಯಕವಾಗಿದೆ. ಅದರ ಮೈತ್ರಿಪಕ್ಷ ನ್ಯಾಶನಲ್‌ ಕಾನ್ಫರೆನ್ಸ್‌ 42 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಬಿಜೆಪಿಯು ಈವರೆಗೆ ಸ್ವತಂತ್ರವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸತಂತ್ರವಾಗಿ ಸರ್ಕಾರ ರಚಿಸಿಲ್ಲ. ಅದು ಈ ಬಾರಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಅಥವಾ ಮುನ್ನಡೆಯಲ್ಲಿದೆ. ಇದು 2014 ರಲ್ಲಿ ನಡೆದ ಚುನಾವಣೆಯಲ್ಲಿ ಪಡೆದ್ದಕ್ಕಿಂತ ನಾಲ್ಕು ಸ್ಥಾನಗಳು ಹೆಚ್ಚಾಗಿವೆ. ಆದರೆ ಪಕ್ಷವು ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗಿದೆ.
ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಪಿಡಿಪಿ (PDP) ಪಕ್ಷವು 2014 ರ ಚುನಾವಣೆಯ ನಂತರ ಸರ್ಕಾರವನ್ನು ರಚಿಸಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಅದರಂತೆ ಈ ಬಾರಿಯೂ ಸಂಭವನೀಯ ಕಿಂಗ್‌ಮೇಕರ್ ಎಂದು ಪರಿಗಣಿಸಲಾಗಿತ್ತು. ಆದರೆ ಪಕ್ಷದ ಪ್ರದರ್ಶನ ನೀರಸವಾಗಿದೆ. ಪಿಡಿಪಿಯು ಕೇವಲ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಗಿಂತ 25 ಕಡಿಮೆಯಾಗಿದೆ.
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ‘ಒಂದು’ ಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಜಯಗಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ಕೂಡ ಗೆಲುವು ಸಾಧಿಸಿತು – ಸಜ್ಜದ್ ಲೋನ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಉಳಿದ ಏಳು ಸ್ಥಾನಗಳನ್ನು ಸ್ವತಂತ್ರ ಅಭ್ಯರ್ಥಿಗಳುಗೆಲುವು ಸಾಧಿಸಿದ್ದಾರೆ ಅಥವಾ ಮುನ್ನಡೆಯಲ್ಲಿದ್ದಾರೆ.

ಪ್ರಮುಖ ಸುದ್ದಿ :-   ಮಹಾಕುಂಭ 2025 : ತಲೆ ಮೇಲೆ 45 ಕಿಲೋ ತೂಕದ ರದ್ರಾಕ್ಷಿ ಸರ ಹೊತ್ತ ಸನ್ಯಾಸಿ....!

ಮತ ಹಂಚಿಕೆಯ ವಿಷಯದಲ್ಲಿ ಬಿಜೆಪಿಯೇಹೆಚ್ಚು ಮತಗಳನ್ನು ಗಳಿಸಿದೆ. ಬಿಜೆಪಿ 25.63 ಶೇಕಡಾ ಮತಗಳನ್ನು ಪಡೆದಿದೆ – 2014 ರಲ್ಲಿ ನಿರ್ವಹಿಸಿದ್ದಕ್ಕಿಂತ 2.65 ಶೇಕಡಾ ಹೆಚ್ಚು ಮತ ಪಡೆದಿದೆ.
ನ್ಯಾಶನಲ್‌ ಕಾನ್ಫರೆನ್ಸ್ 23.44% ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ ಮತ್ತು ಕಾಂಗ್ರೆಸ್ ಶೇಕಡಾ 11.97%ರಷ್ಟು ಮತಗಳನ್ನು ಗಳಿಸಿದೆ. ನ್ಯಾಶನಲ್‌ ಕಾನ್ಫರೆನ್ಸ್ ಕಳೆದ ಚುನಾವಣೆಗಿಂತ ಸುಮಾರು 2.67 ಶೇಕಡಾ ಹೆಚ್ಚು ಮತ ಪಡದರೆ ಕಾಂಗ್ರೆಸ್‌ ಪಾಲು 6%ರಷ್ಟು ಕುಸಿದೆ. ರಷ್ಟು ಕುಸಿದಿದೆ. PDP 8.87% ಮತಗಳನ್ನು ಪಡೆದುಕೊಂಡಿದೆ. ಇದು 2014 ರ ಚುನಾವಣೆಗಿಂತ 13.8 % ಕಡಿಮೆಯಾಗಿದೆ.
ಕಾಂಗ್ರೆಸ್ ನಂ 2, ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ನಾಯಕ
ನ್ಯಾಷನಲ್ ಕಾನ್ಫರೆನ್ಸ್ 56 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 42ರಲ್ಲಿ ಗೆಲುವು ಸಾಧಿಸಿದೆ. ಪಕ್ಷದ ನಾಯಕ ಒಮರ್ ಅಬ್ದುಲ್ಲಾ – ಬದ್ಗಾಮ್ ಮತ್ತು ಕುಟುಂಬದ ಭದ್ರಕೋಟೆಯಾದ ಗಂದೇರ್ಬಲ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಹಾಗೂ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ; ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಮ್ಮ ಮಗನನ್ನು ಆ ಸ್ಥಾನಕ್ಕೆ ಹೆಸರಿಸಿದ್ದಾರೆ. ಕಾಂಗ್ರೆಸ್ 39 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು, ಆದರೆ ಕೇವಲ ಆರು ಸ್ಥಾನಗಳನ್ನು ಗೆದ್ದಿದೆ; 2014 ರ ಚುನಾವಣೆಯಲ್ಲಿ ಪಕ್ಷವು (ಸ್ವತಂತ್ರವಾಗಿ) 86 ರಲ್ಲಿ ಸ್ಪರ್ಧಿಸಿತ್ತು ಮತ್ತು 12 ಸ್ಥಾನಗಳನ್ನು ಗೆದ್ದಿತ್ತು,

ಪ್ರಮುಖ ಸುದ್ದಿ :-   ವೀಡಿಯೊ...| 10 ರೂ.ಗಳ ವಿಷಯಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಬಸ್ ಕಂಡಕ್ಟರ್...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement