ಜಾಟ್ ಕೇಂದ್ರೀಕೃತ ಪ್ರಚಾರದಿಂದ ಹಿಡಿದು ಒಳಜಗಳದ ವರೆಗೆ…: ಹರಿಯಾಣದಲ್ಲಿ ಕಾಂಗ್ರೆಸ್‌ ಆಘಾತಕಾರಿ ಸೋಲಿನ ಹಿಂದಿನ 5 ಕಾರಣಗಳು…

ನವದೆಹಲಿ: ಹರಿಯಾಣ ಚುನಾವಣೆಯ ಮತ ಎಣಿಕೆಗೆ ಮಂಗಳವಾರ ಬೆಳಗ್ಗೆ ಆರಂಭವಾದ ನಂತರ 9 ಗಂಟೆ ಸುಮಾರಿಗೆ ಕಾಂಗ್ರೆಸ್‌ ಬಿಜೆಪಿಗಿಂತ ಸಾಕಷ್ಟು ಮುನ್ನಡೆ ಸಾಧಿಸಿತ್ತು. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಜಲೇಬಿ ಹಂಚುವುದು ಮತ್ತು ಡೊಳ್ಳು ಬಾರಿಸುವ ಸಂಭ್ರಮಾಚರಣೆಯೂ ನಡೆದಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಕಚೇರಿ ನಿರ್ಜನವಾಗಿತ್ತು.
ಆದರೆ ಒಂದು ಗಂಟೆಯ ನಂತರ, ಟ್ರೆಂಡ್‌ ಸಂಪೂರ್ಣ ಬದಲಾಯಿತು. ಬಿಜೆಪಿ ಮತ್ತೆ ಆಟದ ಮೈದಾನಕ್ಕೆ ಮರಳಿತು. ಇನ್ನೂ ಎರಡು ಗಂಟೆಗಳ ನಂತರ, ಬಿಜೆಪಿ ಬಲವಾದ ಮುನ್ನಡೆ ಪಡೆಯಿತು. ಹರಿಯಾಣದಲ್ಲಿ ತನ್ನ ಅತಿದೊಡ್ಡ ಗೆಲುವಿನತ್ತ ಹಾಗೂ ಯಾರೂ ಸಾಧಿಸಿದ ಸತತ ಮೂರನೇ ಬಾರಿಗೆ ಅಧಿಕಾರ ಪಡೆಯುವತ್ತ ಮುನ್ನಡೆ ಪಡೆಯಿತು. ಹರ್ಯಾಣ ಚುನಾವಣಾ ಫಲಿತಾಂಶವು ಎಕ್ಸಿಟ್ ಪೋಲ್ ಭವಿಷ್ಯವಾಣಿಗಳನ್ನು ಸಂಪೂರ್ಣ ಠುಸ್‌ ಆಗುವಂತೆ ಮಾಡಿದವು. ನಂತರ ಬಿಜೆಪಿ ಕೇಂದ್ರ ಕಚೇರಿ ಲಡ್ಡೂ, ಜಿಲೇಬಿಗಳಿಂದ ಸಂಭ್ರಮಿಸುತ್ತಿತ್ತು, ಕಾಂಗ್ರೆಸ್‌ ಕಚೇರಿ ನಿರ್ಜನವಾಯಿತು.

ಕಾಂಗ್ರೆಸ್ ಹಿನ್ನಡೆಗೆ ಕಾರಣವಾದ ಐದು ಅಂಶಗಳು…
ಜಾಟ್ ಸಮುದಾಯವನ್ನು ಓಲೈಸುವುದರ ಮೇಲೆ ಕಾಂಗ್ರೆಸ್‌ ಹೆಚ್ಚಿನ ಗಮನಹರಿಸಿದ್ದು ಅದರ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲೊಂದು ಎಂದು ವಿಶ್ಲೇಷಿಸಲಾಗುತ್ತಿದೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಮೇಲಿನ ಅತಿಯಾದ ಅವಲಂಬನೆ ಮತ್ತು ದಲಿತ ನಾಯಕಿ ಕುಮಾರಿ ಸೆಲ್ಜಾ ಹಾಗೂ ಭೂಪಿಂದರ್ ಸಿಂಗ್ ಹೂಡಾ ಅವರ ಒಳ ಜಗಳಗಳು 10 ವರ್ಷಗಳ ವಿರಾಮದ ನಂತರ ಅಧಿಕಾರಕ್ಕೆ ಮರಳುವ ಕಾಂಗ್ರೆಸ್ಸಿನ ಕನಸಿನ ಹಳಿಯನ್ನು ತಪ್ಪಿಸಿದ ಪ್ರಮುಖ ಅಂಶಗಳಾಗಿವೆ.

ಕಾಂಗ್ರೆಸ್ ಒಳ ಜಗಳ
2019 ರ ಚುನಾವಣೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಅದರ ಗೆಲುವಿನ ಪ್ರಸ್ತುತ ಸಂಖ್ಯೆಗಳನ್ನು ನೋಡಿದರೆ ಅದು ತನ್ನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಸುಧಾರಿಸಿಲ್ಲ ಎಂಬುದು ಗೊತ್ತಾಗುತ್ತದೆ.
ಸೋಲಿಗೆ ಒಂದು ಪ್ರಮುಖ ಅಂಶವೆಂದರೆ ಪಕ್ಷದ ಆಂತರಿಕ ಕಲಹ ಮತ್ತು ಅದರ ಉನ್ನತ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದ್ದು. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ತಮ್ಮ ಗೆಲುವು ಖಚಿತ ಎಂದು ಭಾವಿಸಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ಆರಂಭಿಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಮತ್ತು ಹಿರಿಯ ನಾಯಕಿ ಕುಮಾರಿ ಸೆಲ್ಜಾ ನಡುವಿನ ಅಧಿಕಾರದ ಜಗಳ ಬಹಿರಂಗವಾಗಿಯೇ ಕಾಣಿಸಿಕೊಂಡಿತು.
ಚುನಾವಣೆಯ ಪೂರ್ವದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ಕಾಂಗ್ರೆಸ್ ಹೆಣಗಾಡುತ್ತಿರುವಾಗ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಒಡೆದ ಮನೆ ಎಂಬುದನ್ನು ಈ ಜಗಳ ಬಹಿರಂಗಗೊಳಿಸಿತು. ಅಭ್ಯರ್ಥಿಗಳು ಅಥವಾ ಮೈತ್ರಿಗಳನ್ನು ನಿರ್ಧರಿಸುವಲ್ಲಿ ಹೂಡಾ ಅವರಿಗೆ ಮುಕ್ತ ಹಸ್ತ ನೀಡಲಾಯಿತು. ಆದರೆ ಫಲಿತಾಂಶ ತರುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ ಎಂದು ಫಲಿತಾಂಶಗಳು ತೋರಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಮಗುವನ್ನು ಎದೆಗವಚಿಕೊಂಡು ಲಾಠಿ ಹಿಡಿದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಿಸುತ್ತಿರುವ ಮಹಿಳಾ ಕಾನ್​ಸ್ಟೆಬಲ್...!

ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಸ್ವಲ್ಪ ಮುಂದಿದೆ, ಆದರೆ ಅದನ್ನು ಸ್ಥಾನಗಳಾಗಿ ಪರಿವರ್ತಿಸುವಲ್ಲಿ ಅದು ಹೆಚ್ಚು ಯಶಸ್ವಿಯಾಗಲಿಲ್ಲ ಎಂಬುದನ್ನು ಕಾಂಗ್ರೆಸ್‌ ಗೆದ್ದ ಸ್ಥಾನಗಳು ತೋರಿಸುತ್ತವೆ. ಹಲವಾರು ಸ್ಥಾನಗಳಲ್ಲಿ, ಅಂತರವು ತುಂಬಾ ಕಡಿಮೆಯಾಗಿದೆ, ಇದು ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರರು ಹರಿಯಾಣದಲ್ಲಿ ಆಡಳಿತ ವಿರೋಧಿ ಮತಗಳನ್ನು ವಿಭಜಿಸಿದವು ಎಂಬುದನ್ನು ಸೂಚಿಸುತ್ತದೆ, ಇದು ಬಿಜೆಪಿಗೆ ಲಾಭದಾಯಕವಾಯಿತು.
ಆದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗಳಿಸಲು ವಿಫಲವಾದವು. ಪ್ರಸ್ತುತ ಐಎನ್‌ಎಲ್‌ಡಿ ಮತ್ತು ಬಿಎಸ್‌ಪಿ ತಲಾ ಒಂದು ಸ್ಥಾನದಲ್ಲಿ ಗೆಲುವು ಹಾಗೂ ನಾಲ್ವರು ಪಕ್ಷೇತರರು ಗೆಲುವಿನ ಹಾದಿಯಲ್ಲಿದ್ದಾರೆ.

ಜಾಟ್ ವಿರೋಧಿ ಮತಗಳ ಕ್ರೋಢೀಕರಣ…
ಭೂಪಿಂದರ ಸಿಂಗ್‌ ಹೂಡಾ ನೇತೃತ್ವದ ಕಾಂಗ್ರೆಸ್ ಜಾಟ್ ಮತಗಳ ಮೇಲೆ ಕೇಂದ್ರೀಕರಿಸಿದರೆ, ಬಿಜೆಪಿ ಪರವಾಗಿ ಜಾಟ್ ಏತರ ಮತಗಳ ಪ್ರತಿ ಕ್ರೋಢೀಕರಣವು ಸ್ಪಷ್ಟವಾಗಿ ಕಂಡುಬಂದಿದೆ. ಜಾಟ್‌ ಮತಗಳು ಕಾಂಗ್ರೆಸ್ಸಿನತ್ತ ಧ್ರುವೀಕರಣಗೊಂಡಂತೆಯೇ ಇತರ ಹಿಂದುಳಿದ ವರ್ಗಳ ಮತಗಳು ಬಿಜೆಪಿಯತ್ತ ವಾಲಿದವು. ಇದು ಕಾಂಗ್ರೆಸ್‌ ಫಲಿತಾಂಶದ ಮೇಲೆ ಭಾರಿ ಪರಿಣಾಮ ಬೀರಿತು. ಬಿಜೆಪಿಯು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಹೂಡಾ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಜಾಟ್ ಸಮುದಾಯದ ಮೇಲೆ ಪಕ್ಷವು ಹೆಚ್ಚು ಅವಲಂಬಿತವಾಯಿತು. ಇದರಿಂದಾಗಿ ಕಾಂಗ್ರೆಸ್‌ನತ್ತ ಒಲವು ತೋರಲು ಆರಂಭಿಸಿದ್ದ ದಲಿತರು ಮತ್ತು ಜಾಟೇತರ ಹಿಂದುಳಿದ ವರ್ಗಗಳು ಬಿಜೆಪಿಯತ್ತ ವಾಲಿದರು.
ಚುನಾವಣಾ ವಿಶ್ಲೇಷಕರು ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದ್ದರೂ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಅವರ ಉಸ್ತುವಾರಿಯಲ್ಲಿ ಬಿಜೆಪಿಯ ಚುನಾವಣಾ ಯಂತ್ರವು ಮತ್ತೊಮ್ಮೆ ಕಾಂಗ್ರೆಸ್‌ನ ದವಡೆಯಿಂದ ವಿಜಯವನ್ನು ಕಸಿದುಕೊಂಡಿತು.

ಪ್ರಮುಖ ಸುದ್ದಿ :-   ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅನುಮತಿ ನೀಡಿದ ತೆಲಂಗಾಣ ಸರ್ಕಾರ

ಬಿಜೆಪಿಯ ನಗರ ಪ್ರಾಬಲ್ಯ
ಕಳೆದ ದಶಕದಲ್ಲಿ, ಹರಿಯಾಣದ ನಗರ ಪ್ರದೇಶಗಳಾದ ಗುರ್ಗಾಂವ್ ಮತ್ತು ಫರಿದಾಬಾದ್‌ನಲ್ಲಿ ಬಿಜೆಪಿ ಬೆಂಬಲವನ್ನು ಕ್ರೋಢೀಕರಿಸಿದೆ. ಕಾಂಗ್ರೆಸ್ ಗ್ರಾಮಾಂತರ ಪ್ರದೇಶವನ್ನು ಗುಡಿಸಲಿದೆ ಎಂದು ನಿರೀಕ್ಷಿಸಿತ್ತು, ಆದರೆ ಅದು ಹಾಗಾದಂತೆ ನಡೆದಂತೆ ಕಾಣುತ್ತಿಲ್ಲ. ಮಗರ ಪ್ರದೇಶಗಳಾದ ಗುರ್ಗಾಂವ್, ಫರಿದಾಬಾದ್ ಮತ್ತು ಬಲ್ಲಭಗಢದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಿತು. ಇದೇ ವೇಳೆ ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಸ್ಥಾನಗಳನ್ನು ಗಳಿಸಲಿಲ್ಲ. ಇದು ಬಿಜೆಪಿಗೆ ಲಾಭ ತಂದುಕೊಟ್ಟಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement