ಮಹಾರಾಷ್ಟ್ರ : ವಿಧಾನಸಭೆ ಚುನಾವಣೆಗೆ ಮುನ್ನ ಎನ್‌ಸಿಪಿಗೆ ಸೇರ್ಪಡೆಗೊಂಡ ಖ್ಯಾತ ನಟ ಸಯಾಜಿ ಶಿಂಧೆ

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಖ್ಯಾತ ಬಹುಭಾಷಾ ನಟ ಸಯಾಜಿ ಶಿಂಧೆ ಅವರು ಶುಕ್ರವಾರ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಗೆ ಸೇರ್ಪಡೆಗೊಂಡಿದ್ದಾರೆ.
ವಿವಿಧ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿನ ವಿವಿಧ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಸಯಾಜಿ ಶಿಂಧೆ ಅವರು, ಉಪಮುಖ್ಯಮಂತ್ರಿ ಅಜಿತ್ ಪವಾರ್, ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ಸುನಿಲ್ ತಟ್ಕರೆ ಅವರ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಂದಿನ ಎರಡು ತಿಂಗಳ ಒಳಗೆ ನಡೆಯಲಿರುವ ಚುನಾವಣೆಯಲ್ಲಿ ಸಯಾಜಿ ಶಿಂಧೆ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಜಿತ್ ಪವಾರ್ ಖಚಿತಪಡಿಸಿದ್ದು, ನಟನಿಗೆ ಅರ್ಹವಾದ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ, 65 ವರ್ಷದ ಶಿಂಧೆ ಅವರು ಚಲನಚಿತ್ರಗಳಲ್ಲಿ ರಾಜಕಾರಣಿಗಳ ಚಿತ್ರಣದ ಬಗ್ಗೆ ಟೀಕಿಸಿದರು ಮತ್ತು “ಅಜಿತ್ ಪವಾರ್ ಅವರ ಕಾರ್ಯವೈಖರಿಯಿಂದ ನಾನು ಪ್ರಭಾವಿತನಾಗಿದ್ದೇನೆ” ಎಂದು ಹೇಳಿರುವ ಅವರು, ಅರಣ್ಯೀಕರಣದ ಅವರ ನೆಚ್ಚಿನ ಕಾರಣಕ್ಕಾಗಿ ಕೆಲಸ ಮಾಡುವಾಗ ಅವರು ಪವಾರ್ ಅವರೊಂದಿಗಿನ ಮಾತಕತೆಯ ಬಗ್ಗೆ ಮಾತನಾಡಿದ್ದಾರೆ. “ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು, ನಾನು ವ್ಯವಸ್ಥೆಯ ಭಾಗವಾಗಬೇಕು” ಎಂದು ಅವರು ಹೇಳಿದರು.
ಮೂಲತಃ ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾದ ಸಯಾಜಿ ಶಿಂಧೆ ಮರಾಠಿ ರಂಗಭೂಮಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು, 1999 ರ ಚಲನಚಿತ್ರ “ಸ್ಕೂಲ್” ನಲ್ಲಿ ಖಳನಾಯಕನ ಪಾತ್ರದೊಂದಿಗೆ ಬಾಲಿವುಡ್‌ನಲ್ಲಿ ಪ್ರಾಮುಖ್ಯತೆಯನ್ನು ಪಡೆದರು. ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಗುಜರಾತಿ ಮತ್ತು ಭೋಜಪುರಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹಿಂದೂ ಹೆಸರು ಪಡೆದ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ-ಬಿಲಿಯನೇರ್‌ ಲಾರೆನ್‌ ಜಾಬ್ಸ್‌ ...! ಮಹಾಕುಂಭಮೇಳದಲ್ಲಿ ಕೇಸರಿ ಉಡುಪು ಧರಿಸ್ತಾರೆ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement