ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ ಅಂಬಾನಿ ಮತ್ತೊಮ್ಮೆ ನಂ.1 ; ಅವರ ಸಂಪತ್ತು ಎಷ್ಟು ಹೆಚ್ಚಾಗಿದೆ ಗೊತ್ತೆ..?

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ 2024ರ ಫೋರ್ಬ್ಸ್‌ ಪಟ್ಟಿಯಲ್ಲಿ (Forbes List) ಮತ್ತೊಮ್ಮೆ ಭಾರತದ ಶ್ರೀಮಂತ (Richest Indian) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಅವರ ಆದಾಯದ ನಿವ್ವಳ ಮೌಲ್ಯ 119.5 ಶತಕೋಟಿ ಡಾಲರ್ ಆಗಿದೆ ಎಂದು ಫೋರ್ಬ್ಸ್‌ ಹೇಳಿದೆ. ಕಳೆದ ವರ್ಷದಲ್ಲಿ ಅವರ ಸಂಪತ್ತು 27.5 ಶತಕೋಟಿ ಡಾಲರ್ ಗಳಷ್ಟು ಅಂದರೆ ಭಾರತೀಯ ರೂಪಾಯಿ 23,088 ಕೋಟಿ ರೂ. ಹೆಚ್ಚಾಗಿದೆ. ಈ ಮೂಲಕ ಅವರ ಒಟ್ಟು ನಿವ್ವಳ ಮೌಲ್ಯ 119.5 ಶತಕೋಟಿ ಡಾಲರ್ ಆಗಿದೆ. ಈಗ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದ್ದಾರೆ.
116 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. 43.7 ಶತಕೋಟಿ ಡಾಲರ್ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಮೂರನೇ ಸ್ಥಾನದಲ್ಲಿದ್ದಾರೆ.40.2 ಶತಕೋಟಿ ಡಾಲರ್ ನೊಂದಿಗೆ ಶಿವ ನಾಡರ್ ನಾಲ್ಕನೇ ಸ್ಥಾನದಲ್ಲಿದ್ದು, 32.4 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ದಿಲೀಪ್ ಸಂಘ್ವಿ ಐದನೇ ಸ್ಥಾನದಲ್ಲಿದ್ದಾರೆ.

31.5 ಬಿಲಿಯನ್ ಡಾಲರ್‌ ಸಂಪತ್ತಿನೊಂದಿಗೆ ರಾಧಾ ಕಿಶನ್ ದಮಾನಿ ಆರನೇ ಸ್ಥಾನದಲ್ಲಿದ್ದರೆ, 30.7 ಶತಕೋಟಿ ಡಾಲರ್‌ಗಳೊಂದಿಗೆ ಸುನಿಲ್ ಮಿತ್ತಲ್ ಏಳನೇ ಸ್ಥಾನದಲ್ಲಿದ್ದಾರೆ. 24.8 ಶತಕೋಟಿ ಡಾಲರ್‌ಗಳೊಂದಿಗೆ ಕುಮಾರ್ ಬಿರ್ಲಾ ಎಂಟನೇ ಸ್ಥಾನದಲ್ಲಿ, 24.5 ಶತಕೋಟಿ ಡಾಲರ್ ಸಂಪತ್ತು ಹೊಂದಿರುವ ಸೈರಸ್ ಪೂನಾವಾಲಾ ಒಂಬತ್ತನೇ ಸ್ಥಾನ ಹಾಗೂ 23.4 ಶತಕೋಟಿ ಡಾಲರ್‌ ಸಂಪತ್ತಿನೊಂದಿಗೆ ಬಜಾಜ್ ಕುಟುಂಬವು ಹತ್ತನೇ ಸ್ಥಾನದಲ್ಲಿದೆ.
ಭಾರತದ ನೂರು ಶ್ರೀಮಂತರ ಒಟ್ಟು ಸಂಪತ್ತು 1.1 ಲಕ್ಷ ಕೋಟಿ ಡಾಲರ್ ಗಳಷ್ಟು ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 40ರಷ್ಟು ಹೆಚ್ಚಳವಾಗಿದೆ ಎಂದು ಫೋರ್ಬ್ಸ್‌ ವರದಿ ತಿಳಿಸಿದೆ. ಈ ಹೆಚ್ಚಳವು ಸ್ಟಾಕ್ ಮಾರುಕಟ್ಟೆ, ಐಪಿಒ ಮತ್ತು ಮ್ಯೂಚುಯಲ್ ಫಂಡ್‌ಗಳಿಂದ ಆಗಿದೆ. 58 ವ್ಯಕ್ತಿಗಳು ತಮ್ಮ ಸಂಪತ್ತಿಗೆ 1 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತನ್ನು ಸೇರಿಸಿಕೊಂಡಿದ್ದಾರೆ. ಶೇ. 80ರಷ್ಟು ಮಂದಿಯ ಸಂಪತ್ತಿನಲ್ಲಿ ಹೆಚ್ಚಳವಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement