ವೀಡಿಯೊ : ವಿಷಕಾರಿ ಹಾವು ಕಚ್ಚಿದ ನಂತರ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಯೊಳಗೆ ಬಂದ ವ್ಯಕ್ತಿ…!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ಸ್ ವೈಪರ್ ಬಿಹಾರದ ಭಾಗಲ್ಪುರದಲ್ಲಿ ವ್ಯಕ್ತಿಯನ್ನು ಕಚ್ಚಿದೆ. ಮುಂದೆ ನಡೆದಿದ್ದು ಮಾತ್ರ ಅನಿರೀಕ್ಷಿತ.
ರಸೆಲ್ಸ್ ವೈಪರ್ ಕಚ್ಚಿದ ನಂತರ ಪ್ರಕಾಶ ಮಂಡಲ ಎಂಬ ವ್ಯಕ್ತಿ ವಿಷಪೂರಿತ ಹಾವಿನ ಬಾಯಿಯನ್ನು ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಹಾವು ಹಿಡಿದು ವ್ಯಕ್ತಿಯನ್ನು ಕಂಡು ವೈದ್ಯರು ಹಾಗೂ ರೋಗಿಗಳು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ನಡೆದ ವಿಲಕ್ಷಣ ದೃಶ್ಯವನ್ನು ಜನರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಷಪೂರಿತ ಹಾವು ವ್ಯಕ್ತಿಯ ಕೈಯಿಂದ ತಪ್ಪಿಸಿಕೊಂಡರೆ ಏನು ಬೇಕಾದರೂ ಆಗಬಹುದೆಂಬ ಭಯದಿಂದ ರೋಗಿಗಳ ಜೊತೆ ಬಂದವರು ಹಾಗೂ ಆಸ್ಪತ್ರೆ ಸಿಬ್ಬಂದಿ ದೂರದಲ್ಲಿ ನಿಂತಿದ್ದರು.

ಆವರಣದಲ್ಲಿದ್ದ ಎಲ್ಲರ ಭಯವನ್ನೂ ದೂರ ಮಾಡಲು ಮತ್ತೊಬ್ಬ ವ್ಯಕ್ತಿ ಪ್ರಕಾಶ ಮಂಡಲ ಅವರ ಕೈಯನ್ನು ಹಿಡಿದು ಮತ್ತೊಂದೆಡೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ.
ಪ್ರಕಾಶ ಮಂಡಲ ಅವರ ಮುಂದಿನ ನಡೆ ಕೂಡ ಆಶ್ಚರ್ಯಕರವಾಗಿತ್ತು. ಪ್ರಕಾಶ ಮಂಡಲ ನೆಲದ ಮೇಲೆ ಮಲಗಿದರು. ಆದರೆ ಅವರು ಬಲಗೈಯಿಂದ ರಸ್ಸೆಲ್ಸ್ ವೈಪರ್ ಗಂಟಲನ್ನು ಬಲವಾಗಿ ಹಿಡಿದುಕೊಂಡೇ ಮಲಗಿದ್ದರು.
ಮತ್ತೊಂದು ವೀಡಿಯೊದಲ್ಲಿ ಪ್ರಕಾಶ್ ಹಾವಿನೊಂದಿಗೆ ಸ್ಟ್ರೆಚರ್ ಮೇಲೆ ಮಲಗಿರುವುದನ್ನು ತೋರಿಸಿದೆ. ಅವರು ನೋವಿನಿಂದ ಬಳಲುತ್ತಿರಬಹದು ಎಂದು ತೋರುತ್ತದೆ. ಆದರೆ ಕೈಯಲ್ಲಿ ಗಟ್ಟಿಯಗಿ ಹಿಡಿದಿದ್ದ ಹಾವನ್ನು ಮಾತ್ರ ಬಿಡಲಿಲ್ಲ.

ಹಾವನ್ನು ಹಿಡಿದುಕೊಂಡರೆ ಚಿಕಿತ್ಸೆ ನೀಡುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಗೆ ಅವರು ಹಾವನ್ನು ಬಿಟ್ಟಿದ್ದಾರೆ. ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸ್ಥಿತಿ ತಿಳಿದುಬಂದಿಲ್ಲ .
ರಸ್ಸೆಲ್‌ ವೈಪರ್ ವೈಪರಿಡೆ ಕುಟುಂಬದ ಅತ್ಯಂತ ವಿಷಕಾರಿ ಹಾವು. ಇದು ಭಾರತದಿಂದ ಹಿಡಿದು ತೈವಾನ್ ಮತ್ತು ಜಾವಾವರೆಗೆ ಕಂಡುಬರುತ್ತದೆ, ಇದು ಸಾಮಾನ್ಯವಾಗಿ ಮಾನವ ಸಂಪರ್ಕ ಹೇರಳವಾಗಿರುವ ಕೃಷಿಭೂಮಿಗಳಲ್ಲಿ ಕಂಡುಬರುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement