ಆಘಾತಕಾರಿ ಘಟನೆಯೊಂದರಲ್ಲಿ, ಸೋಮವಾರ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯು ಸೆಕ್ಟರ್ 74 ರಲ್ಲಿರುವ ಸೂಪರ್‌ಟೆಕ್ ಕೇಪ್ ಟೌನ್ ಸೊಸೈಟಿಯಲ್ಲಿ ಸಂಭವಿಸಿದೆ. ವಿವರಗಳ ಪ್ರಕಾರ, 21 ವರ್ಷದ ಯುವಕ 14 ನೇ ಮಹಡಿಯಿಂದ ಜಿಗಿಯಲು ಮುಂದಾದಾಗ ನೋಡುಗರು ಗಮನಿಸಿ ಈ ಬಗ್ಗೆ ಎಚ್ಚರಿಸಿದ್ದಾರೆ. ಇದನ್ನು ಅನುಸರಿಸಿ, ತಕ್ಷಣ ಸ್ಥಳಕ್ಕೆ ಧಾವಿಸಿದ ಇಬ್ಬರು ಈ ವ್ಯಕ್ತಿಯನ್ನು ಸಕಾಲದಲ್ಲಿ ಸುರಕ್ಷಿತವಾಗಿ ಮೇಲಕ್ಕೆ ಎಳೆದುಕೊಂಡು ದುರಂತವನ್ನು ತಪ್ಪಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್‌ಟೆಕ್ ಕೇಪ್ ಟೌನ್ ಸೊಸೈಟಿಯಲ್ಲಿ ಬೆಳಿಗ್ಗೆ ಸೋಮವಾರ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾಲ್ಕನಿ ರೇಲಿಂಗ್ ಮೇಲೆ ಹತ್ತಿದ್ದು, ಅನಿಶ್ಚಿತವಾಗಿ ನೇತಾಡುತ್ತಿರುವುದನ್ನು ನಿವಾಸಿಗಳು ನೋಡಿ ಕೂಗಿಕೊಂಡಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿದ ಇಬ್ಬರು ವ್ಯಕ್ತಿಗಳು ಕಳೆಗಿನ ಮಹಡಿಗಳಿಂದ ಬಂದು ಮೆಟ್ಟಿಲುಗಳ ಮೇಲೆ ಧಾವಿಸಿ ಈತನನ್ನು ಸುರಕ್ಷಿತವಾಗಿ ಹಿಂದಕ್ಕೆ ಎಳೆದುಕೊಂಡಿದ್ದಾರೆ. ಹಾಗೂ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಸುಮಾರು ಆರು ತಿಂಗಳ ಹಿಂದೆ ಕುಟುಂಬದೊಂದಿಗೆ ಇದೇ ಸೊಸೈಟಿಯಲ್ಲಿ ವಾಸಿಸುತ್ತಿದ್ದ ಈತ, ಪ್ರಸ್ತುತ ನೋಯ್ಡಾದ ಸೆಕ್ಟರ್ 41 ರಲ್ಲಿ ವಾಸಿಸುತ್ತಿದ್ದಾನೆ. ಘಟನೆ ಸಂಭವಿಸುವವರೆಗೂ ಆತನ ಮನೆಯವರಿಗೆ ಆತ ಎಲ್ಲಿದ್ದಾನೆಂದು ತಿಳಿದಿರಲಿಲ್ಲ. ರಕ್ಷಣೆ ಮಾಡಿದ ನಂತರ ಪೊಲೀಸರು ಆತನನ್ನು ಕುಟುಂಬದವರಿಗೆ ಒಪ್ಪಿಸಿದ್ದಾರೆ. ಆತ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಅವರು ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಕುಟುಂಬದವರು ದೃಢಪಡಿಸಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ