ಬೆಳಗಾವಿ : ನಾನು ಮಾಡಿರುವ ಅಕ್ರಮದ ಬಗ್ಗೆ ಇದ್ದರೆ ದಾಖಲೆ ಸಮೇತ ಬಿಡುಗಡೆಗೊಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಚಿವ ಬೈರತಿ ಸುರೇಶ ಅವರಿಗೆ ಸವಾಲು ಹಾಕಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಬೈರತಿ ಸುರೇಶ ಅವರು ಮುಡಾ ಹಗರಣ ಸಂಬಂಧ ಸಾವಿರಾರು ಕಡತ ತಂದು ಸುಟ್ಟು ಹಾಕಿದ್ದಾರೆ. ಆ ಬಗ್ಗೆ ನಾನು ಧ್ವನಿಯೆತ್ತಿದ್ದಕ್ಕೆ ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ನನ್ನ ಬಗ್ಗೆ ಹಲವರು ಆರೋಪ ಮಾಡಿ ತನಿಖೆ ಮಾಡಿದರು. ಆದರೆ, ಯಾವುದೇ ಪ್ರಕರಣ ಸಿಕ್ಕಿಲ್ಲ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಿದರು.
ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಪೊನ್ನಣ್ಣ ಅವರಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ನಕಲಿ ಕಡತ ಸೃಷ್ಟಿಸಲು ಪೊನ್ನಣ್ಣ ಅವರಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಅದರಲ್ಲಿಯೂ ಒಂದು ಭ್ರಷ್ಟಾಚಾರ ಮಾಡಲು ಹೊರಟಿದ್ದೀರಿ. ನಿಮ್ಮಲ್ಲಿ ನನ್ನ ವಿರುದ್ಧ ಅಕ್ರಮದ ದಾಖಲೆ ಇದ್ದರೆ ತಕ್ಷಣ ಹೊರಗೆ ಹಾಕಿ ಎಂದು ಸವಾಲು ಹಾಕಿದೆ.
ಬೈರತಿ ಸುರೇಶ ಅವರಿಗೆ ಈಗ ಮುಡಾ ಸಂಕಟ ಶುರುವಾಗಿದೆ. ಅವರು ಮೈಸೂರಿನಿಂದ ಕಡತ ತಂದು ಸುಟ್ಟು ಹಾಕಿದ್ದಾರೆ. ಮುಡಾ ಹಗರಣದ ಭಯ ಅವರಿಗೆ ಆವರಿಸಿದ್ದು ತನಿಖೆ ಆರಂಭವಾಗಿದೆ. ಹೀಗಾಗಿ ನನ್ನ ಮೇಲೆ ಆ ಭಯದಿಂದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಭೈರತಿ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಕಾಮೆಂಟ್ ಬರೆಯಿರಿ