ಬೆಂಗಳೂರು: ರಾಜಕೀಯ ನಾಯಕರೊಬ್ಬರಿಗೆ ಹನಿಟ್ರ್ಯಾಪ್ ಆರೋಪ ಪ್ರಕರಣದಲ್ಲಿ (Honey Trap Case) ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಮಂಜುಳಾ ಎಂಬವಳನ್ನು ಬಂಧಿಸಿದ್ದು, ಈಕೆ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಎಂದು ಹೇಳಲಾಗುತ್ತಿದೆ.
ರಾಜಕೀಯ ನಾಯಕನೊಂದೊಗೆ ಆರೋಪಿ ಮೊದಲಿಗೆ ಸೆಕ್ಸ್ ಚಾಟ್ ಮಾಡಿ, ನಂತರ ವಾಟ್ಸ್ ಆ್ಯಪ್ ವಿಡಿಯೊ ಕಾಲ್‌ನಲ್ಲಿ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ 20 ಲಕ್ಷ ರೂ. ಹಣಕ್ಕೆಈಕೆ ಬೇಡಿಕೆ ಇಟ್ಟಿದ್ದಾಳೆ. ಅಷ್ಟು ಹಣ ಕೊಡಲು ಆಗುವುದಿಲ್ಲ. ಕಡಿಮೆ ಮಾಡಿ ಹೇಳಿದ್ದಕ್ಕೆ ಆಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಅದರಂತೆ ಹಣ ಪಡೆಯುವಾಗ ಸಿಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಈಕೆ ಹಾಗೂ ಆಕೆಯ ಪತಿಯನ್ನು ಅರೆಸ್ಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ