ನವದೆಹಲಿ: ಆಧ್ಯಾತ್ಮಿಕ ಪ್ರಚಾರಕಿ ಮತ್ತು ಗಾಯಕಿ ಜಯ ಕಿಶೋರಿ(Jaya Kishori) ಅವರು ₹ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ದುಬಾರಿ ಹ್ಯಾಂಡ್ ಬ್ಯಾಗ್‌ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಈಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಜಯ ಕಿಶೋರಿ ಇದೀಗ ದುಬಾರಿ ಡಿಯೋ(Dior Bag) ಬ್ಯಾಗ್ ಹಿಡಿದು ಏರ್‌ಪೋರ್ಟ್‌ನಲ್ಲಿ ಫೊಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೀಣಾ ಜೈನ್ ಎಂಬಾಕೆ 29 ವರ್ಷದ ಅಧ್ಯಾತ್ಮಿಕ ಚಿಂತಕಿ ಜಯಾ ಕಿಶೋರಿಯವರ ಈ ವೀಡಿಯೊವನ್ನು ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ. ಇದು ಆಧ್ಯಾತ್ಮಿಕ ಪ್ರಚಾರಕಿ ಜಯಾ ಕಿಶೋರಿಯವರ ಡಿಲೀಟೆಡ್ ವಿಡಿಯೋ. ಇಲ್ಲಿ ಆಕೆಯ ಬಳಿ ಕೇವಲ 2,10,000 ರೂ. ಮೌಲ್ಯದ ಬ್ಯಾಗ್ ಇದೆ. ತಾವು ಎಲ್ಲಾ ಮೋಹ ತ್ಯಜಿಸಿದ ಕೃಷ್ಣ ಭಕ್ತೆ ಎಂದು ಹೇಳಿಕೊಳ್ಳುತ್ತಾರೆ. ಈ ಬ್ಯಾಗನ್ನು ಕರು ಚರ್ಮದಿಂದ ತಯಾರಿಸಲಾಗುತ್ತದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಮತ್ತೊಬ್ಬರು ಈ ಬೋಧಕರಲ್ಲಿ ಹೆಚ್ಚಿನವರು ಹೀಗೆಯೇ ಇದ್ದಾರೆ, ನಮ್ಮ ಧರ್ಮವನ್ನು ಲಾಭಕ್ಕಾಗಿ ಮತ್ತು ಅದ್ದೂರಿ ಜೀವನಕ್ಕಾಗಿ ಬಳಸುತ್ತಾರೆ ಎಂದು ಹೇಳಿದ್ದಾರೆ.
ಕೈಚೀಲದಲ್ಲಿ ದನದ ಚರ್ಮದ ಬಳಕೆ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. “ಗೋವುಗಳನ್ನು ಪೂಜಿಸುವ ಬಗ್ಗೆ ಮಾತನಾಡುವ ಅವರು, ಹಸುವಿನ ಚರ್ಮದಿಂದ ಉತ್ಪನ್ನಗಳನ್ನು ತಯಾರಿಸುವ ಕಂಪನಿಯ ಚೀಲವನ್ನು ಬಳಸುತ್ತಿದ್ದಾರೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ಕಾಮೆಂಟ್‌ಗಳಲ್ಲಿ ಬರೆಯಲಾಗಿದೆ.
ಜುಲೈ 13, 1995 ರಂದು ಕೋಲ್ಕತ್ತಾದಲ್ಲಿ ಜನಿಸಿದ ಜಯ ಕಿಶೋರಿ ಅವರು ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮಿಕತೆಯತ್ತ ಒಲವು ತೋರಲು ಪ್ರಾರಂಭಿಸಿದರು. ಅವರು ಇಂದು ಆಧ್ಯಾತ್ಮಿಕ ಭಾಷಣಕಾರರಾಗಿ, ಗಾಯಕಿಯಾಗಿ ಮತ್ತು ಧಾರ್ಮಿಕತೆ ಮತ್ತು ಸರಳ ಜೀವನವನ್ನು ಬೋಧಿಸುವ ಪ್ರೇರಕ ವ್ಯಕ್ತಿಯಾಗಿ ಪ್ರಸಿದ್ಧರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ