ಗಾಜಿಯಾಬಾದ್: ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ (ಅ.29) ನ್ಯಾಯಾಧೀಶರು ಮತ್ತು ವಕೀಲರ ನಡುವಿನ ವಾಗ್ವಾದ ಹಿಂಸಾ ರೂಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ.
ನ್ಯಾಯಾಧೀಶರ ಕೊಠಡಿಯಲ್ಲಿ ಹೆಚ್ಚಿನ ವಕೀಲರು ಜಮಾಯಿಸಿ ಗದ್ದಲ ಸೃಷ್ಟಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ಕರೆಸಬೇಕಾಯಿತು. ಪೊಲೀಸರು ಕುರ್ಚಿಗಳನ್ನು ಎತ್ತಿ ವಕೀಲರನ್ನು ಓಡಿಸುತ್ತಿರುವ ಆಘಾತಕಾರಿ ದೃಶ್ಯಗಳು ಕಂಡುಬಂದಿವೆ. ನಂತರ ಪರಿಸ್ಥಿತಿ ನಿಯಂತ್ರಿಸಲು ಅರೆಸೇನಾ ಪಡೆ ಸಿಬ್ಬಂದಿ ಕೂಡ ಆಗಮಿಸಿತ್ತು.
ಹಲವಾರು ವಕೀಲರು ಗಾಯಗೊಂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಚರ್ಚಿಸಲು ವಕೀಲರ ಸಂಘವು ಈಗ ಸಭೆಯನ್ನು ಕರೆದಿದೆ ಎಂದು ವರದಿಗಳು ತಿಳಿಸಿವೆ. ನ್ಯಾಯಾಧೀಶರ ಕೊಠಡಿಯೊಳಗೆ ಜಮಾಯಿಸಿದ್ದ ವಕೀಲರನ್ನು ಅಲ್ಲಿಂದ ಹೊರಹಾಕಿದ ನಂತರ, ವಕೀಲರು ಹೊರಗೆ ಜಮಾಯಿಸಿದರು ಮತ್ತು ತಮ್ಮ ವಿರುದ್ಧ ಭದ್ರತಾ ಪಡೆಗಳ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದರು.
ಜಾಮೀನು ಅರ್ಜಿ ವಿಚಾರವಾಗಿ ನ್ಯಾಯಾಧೀಶರು ಮತ್ತು ವಕೀಲರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನ್ಯಾಯಾಧೀಶರ ಕೊಠಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ವಿಷಯದ ವಿಚಾರಣೆ ನಡೆಯುತ್ತಿತ್ತು. ವಕೀಲರು ಹಾಜರಿದ್ದರು. ಈ ವೇಳೆ ನ್ಯಾಯಾಧೀಶರು ಹಾಗೂ ವಕೀಲರ ನಡುವೆ ವಾಗ್ವಾದ ನಡೆದಿದ್ದು ಕೊನೆಗೆ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿದ್ದು, ವಕೀಲರನ್ನು ನ್ಯಾಯಾಲಯದಿಂದ ಹೊರ ಕಳಿಸುವ ಪ್ರಯತ್ನ ನಡೆಯಿತು. ಈ ವೇಳೆ ಪೊಲೀಸರು ಹಾಗೂ ವಕೀಲರ ನಡುವೆ ಘರ್ಷಣೆಗಳು ನಡೆದು ಬಳಿಕ ಪೊಲೀಸರು ಲಾಠಿ ಬೀಸಿ, ನ್ಯಾಯಾಲಯದ ಒಳಗಿದ್ದ ಖುರ್ಚಿಗಳನ್ನು ಎತ್ತಿ ವಕೀಲರನ್ನು ನ್ಯಾಯಾಲಯದಿಂದ ಹೊರ ಹಾಕಿದ್ದಾರೆ.
https://twitter.com/gargakash6957/status/1851165010686583164?ref_src=twsrc%5Etfw%7Ctwcamp%5Etweetembed%7Ctwterm%5E1851165010686583164%7Ctwgr%5E854354209ad6e5dd2945a5adca61c866a526ac24%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannadaಈ ವೇಳೆ ಕೆಲ ವಕೀಲರಿಗೆ ಕೈ, ಕಾಲಿಗೆ ಸಣ್ಣ ಮಟ್ಟದ ಗಾಯಗಳಾಗಿವೆ ಎನ್ನಲಾಗಿದೆ.
ನ್ಯಾಯಾಲಯದ ಕೊಠಡಿಯಲ್ಲಿ ಗದ್ದಲ ಎಬ್ಬಿಸುತ್ತಿದ್ದ ವಕೀಲರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಅಷ್ಟುಮಾತ್ರವಲ್ಲದೆ ನ್ಯಾಯಾಲಯದ ಕೊಠಡಿಯಲ್ಲಿದ್ದ ಕುರ್ಚಿಗಳನ್ನು ಎತ್ತಿ ನ್ಯಾಯಾಲಯದ ಕೊಠಡಿಯಿಂದ ವಕೀಲರನ್ನು ಹೊರ ಓಡಿಸಿದ್ದಾರೆ. ಇದಾದ ನಂತರ ಘಟನೆಯನ್ನು ಖಂಡಿಸಿ ನ್ಯಾಯಾಲಯದ ಹೊರಗೆ ವಕೀಲರು ಧರಣಿ ನಡೆಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದೇವೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಘಾಜಿಯಾಬಾದ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ದಿನೇಶಕುಮಾರ ಪಿ. ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ತುಣುಕುಗಳು ನ್ಯಾಯಾಲಯದ ಕೊಠಡಿಯೊಳಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಘರ್ಷಣೆಯನ್ನು ತೋರಿಸುತ್ತವೆ. ಕೆಲವು ಅಧಿಕಾರಿಗಳು ಲಾಠಿ ಬೀಸುತ್ತಿರುವುದು ಕಂಡುಬಂದರೆ, ಒಬ್ಬರು ಮರದ ಕುರ್ಚಿ ಎತ್ತಿ ಹಿಡಿದಿರುವುದು ಕಂಡುಬಂದಿದೆ.
ಮಾಹಿತಿ ಪ್ರಕಾರ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು, ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಮುಂದಿನ ದಿನಕ್ಕೆ ಮುಂದೂಡಿದ್ದಾರೆ ಆದರೆ ವಕೀಲರು ವಿಚಾರಣೆ ಇಂದೇ ನಡೆಸಬೇಕೆಂದು ಪಟ್ಟುಹಿಡಿದರು. ಒಂದು ವೇಳೆ ವಿಚಾರಣೆ ನಡೆಸಲು ಸಾಧ್ಯವಾಗದಿದ್ದರೆ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿ ಎಂದು ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಇದಕ್ಕೆ ಒಪ್ಪದೆ ವಿಚಾರಣೆಯ ಮುಂದಿನ ದಿನಾಂಕವನ್ನು ಹೇಳಿದ್ದರು ಇದರಿಂದ ವಕೀಲರು ನ್ಯಾಯಾಧೀಶರ ಜೊತೆ ವಾಗ್ವಾದಕ್ಕೆ ಇಳಿದಿರು. ಇದು ವಿಕೋಪಕ್ಕೆ ತಿರುಗಿ ಪೊಲೀಸರು ಬರಬೇಕಾಯಿತು ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ