ದೀಪಾವಳಿ ಆಚರಿಸುತ್ತಿದ್ದ ವೇಳೆ ಮಗನ ಎದುರೇ ವ್ಯಕ್ತಿ-ಅಪ್ರಾಪ್ತನ ಹತ್ಯೆ ; ಇದರ ʼಮಾಸ್ಟರ್‌ ಮೈಂಡ್‌ʼ ಮತ್ತೊಬ್ಬ ಅಪ್ರಾಪ್ತ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಶಾಹದಾರ ಪ್ರದೇಶದ ಬಿಹಾರಿ ಕಾಲೋನಿಯಲ್ಲಿ ಗುರುವಾರ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ಹುಡುಗ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಒಬ್ಬ ಹುಡುಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತರನ್ನು ಆಕಾಶ (40) ಮತ್ತು ಆತನ ಸಹೋದರನ ಮಗ ರಿಷಭ (16) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಮೃತ ಆಕಾಶ ಮಗ 10 ವರ್ಷದ ಮಗ ಕ್ರಿಶ್ ಗಾಯಗೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ
ಪೊಲೀಸರ ಪ್ರಕಾರ, ಐದು ಸುತ್ತು ಗುಂಡುಗಳನ್ನು ಅವರ ಮೇಲೆ ಹಾರಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಒಬ್ಬ ಅಪ್ರಾಪ್ತನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದು ವೈಯಕ್ತಿಕ ದ್ವೇಷದ ಪ್ರಕರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ವಶಕ್ಕೆ ಪಡೆಯಲಾದ ಅಪ್ರಾಪ್ತನೇ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ … ಈ ಘಟನೆಯಲ್ಲಿ, ಆಕಾಶ, ರಿಷಬ್ ಮತ್ತು ಕ್ರಿಶ್ ಅವರ ಮೇಲೆ ಗುಂಡು ಹಾರಿಸಲಾಯಿತು. ಆಕಾಶ ಮತ್ತು ರಿಷಬ್ ಸಾವಿಗೀಡಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತನನ್ನು ಬಂಧಿಸಲಾಗಿದೆ. ಪ್ರಾಥಮಿಕವಾಗಿ ನೋಡಿದರೆ ಅಪ್ರಾಪ್ತ ಆರೋಪಿ ಮತ್ತು ಮೃತ ಆಕಾಶ ನಡುವೆ 70,000 ರೂ.ಗಳಿಗಾಗಿ ಜಗಳ ನಡೆದಿತ್ತು. ಅಪ್ರಾಪ್ತ ಆರೋಪಿ ವಿರುದ್ಧ ಕೊಲೆ ಯತ್ನದ ಆರೋಪಿತ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಳೆದ 15-17 ದಿನಗಳಿಂದ ಆಕಾಶ ಅವರನ್ನು ಟಾರ್ಗೆಟ್ ಮಾಡಲು ಯೋಜಿಸುತ್ತಿದ್ದರು ಎಂದು ಡಿಸಿಪಿ ಪ್ರಶಾಂತ್ ಗೌತಂ ಹೇಳಿದ್ದಾರೆ.
ಆಕಾಶ ಶರ್ಮಾ ತನ್ನ ಮಗ ಕ್ರಿಶ್ ಶರ್ಮಾ ಮತ್ತು ಸೋದರಳಿಯ ರಿಷಬ್ ಶರ್ಮಾ ಅವರೊಂದಿಗೆ ಮನೆಯ ಹೊರಗಡೆ ದೀಪಾವಳಿ ಆಚರಿಸುತ್ತಿದ್ದರು. ಈ ವೇಳೆ ಯುವಕನೊಬ್ಬ ಅಲ್ಲಿಗೆ ಬಂದು, ಒಂದರ ನಂತರ ಒಂದರಂತೆ ಐದು ಗುಂಡುಗಳನ್ನು ಹಾರಿಸಿದ್ದು, ಇದರಲ್ಲಿ ಆಕಾಶ, ರಿಷಬ್ ಮತ್ತು ಕ್ರಿಶ್ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳೀಯರು ತಕ್ಷಣ ಇವರನ್ನೆಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ದರು, ವೈದ್ಯರು ಆಕಾಶ ಮತ್ತು ರಿಷಭ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಮೃತ ಆಕಾಶ ತಾಯಿ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಕೆಲವು ದಿನಗಳವರೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಎಂದು ಹೇಳಿದ್ದಾರೆ. ವ್ಯಕ್ತಿ ಕಳೆದ 3-4 ದಿನಗಳಿಂದ ನಮ್ಮ ಲೇನ್‌ಗೆ ಭೇಟಿ ನೀಡುತ್ತಿದ್ದರು. ನಿನ್ನೆ (ಗುರುವಾರ), ಅವರು ಸಿಹಿತಿಂಡಿಗಳ ಪೆಟ್ಟಿಗೆಯೊಂದಿಗೆ ನಮ್ಮ ಮನೆಗೆ ಬಂದರು ಮತ್ತು ಅದನ್ನು ನನ್ನ ಕೈಯಲ್ಲಿ ಸ್ವೀಕರಿಸುವಂತೆ ಒತ್ತಾಯಿಸಿದರು. ನನ್ನ ಮಗ ಪಟಾಕಿ ಸಿಡಿಸಲು ತಯಾರಿ ನಡೆಸುತ್ತಿದ್ದಾಗ ಈ ವ್ಯಕ್ತಿ ಸೇರಿದಂತೆ ಇಬ್ಬರು ಬಂದರು ಮತ್ತು ಗುಂಡಿನ ಸದ್ದು ಕೇಳಿಸಿತು. ಮುಂದೆ, ನನ್ನ ಮಗನಿಗೆ ಗುಂಡು ಹಾರಿಸಿರುವುದನ್ನು ನಾನು ನೋಡಿದೆ … ” ಎಂದು ಅವರು ಹೇಳಿದರು.
ಆಕಾಶ ಅವರ ಸಹೋದರ, ಮೃತ ರಿಷಬ್‌ ತಂದೆ ಯೋಗೇಶ ಅವರು, ಆಕಾಶಗೆ ಯಾರೊಂದಿಗಾದರೂ ಹಣಕಾಸಿನ ವಿವಾದವಿತ್ತು ಎಂದು ಹೇಳಿದ್ದಾರೆ.
“ಈ ಘಟನೆ ನಿನ್ನೆ (ಗುರುವಾರ) ಸಂಜೆ 7:30 ರಿಂದ 8:00 ರ ಸುಮಾರಿಗೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನನ್ನ ಸೋದರಳಿಯ ಮತ್ತು ಅಪರಿಚಿತ ಪಾದಚಾರಿ ಸೇರಿದಂತೆ ಇಬ್ಬರು ಬಂದಿದ್ದರು. ದ್ವಿಚಕ್ರ ವಾಹನದಲ್ಲಿ ಬಂದವರೇ ನನ್ನ ಸಹೋದರ ಮತ್ತು ಮಗನನ್ನು ಹತ್ಯೆ ಮಾಡಿದ್ದಾರೆ. ಕೆಲ ಸಮಯದ ಹಿಂದೆ ನನ್ನ ಸಹೋದರನಿಗೆ ಯಾರೊಂದಿಗಾದರೂ ಹಣದ ವಿಚಾರವಾಗಿ ಜಗಳವಾಗಿತ್ತು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement