ರೈಲು ಡಿಕ್ಕಿ ಹೊಡೆದು ನಾಲ್ವರು ಸ್ವಚ್ಛತಾ ಕಾರ್ಮಿಕರು ಸಾವು

ತಿರುವನಂತಪುರಂ :  ಶನಿವಾರ ಸಂಜೆ ಶೋರನೂರ್ ರೈಲು ನಿಲ್ದಾಣದ ಬಳಿ ತಿರುವನಂತಪುರಂ ಕಡೆಗೆ ಹೋಗುವ ಕೇರಳ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸ್ಚಚ್ಛತಾ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ರೈಲು ನಿಲ್ದಾಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಶೋರನೂರ್ ಸೇತುವೆಯ ಬಳಿ ರೈಲ್ವೆ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ಮಧ್ಯಾಹ್ನ 3:05 ರ ಸುಮಾರಿಗೆ ಆಗಮಿಸಿದ ನವದೆಹಲಿ-ತಿರುವನಂತಪುರಂ ರೈಲು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ರೈಲ್ವೇಯಿಂದ ಸ್ವಚ್ಛತಾ ಕೆಲಸದ ಗುತ್ತಿಗೆ ಕಾರ್ಮಿಕರು ಟ್ರ್ಯಾಕ್‌ನಿಂದ ಎಸೆಯಲ್ಪಟ್ಟರು. ಮೂರು ಶವಗಳನ್ನು ಈ ಪ್ರದೇಶದಿಂದ ಹೊರತೆಗೆಯಲಾಗಿದ್ದು, ನಾಲ್ಕನೆಯ ಮೃತದೇಹವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ, ಇದು ಭರತಪುಳ ನದಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ರೈಲ್ವೇ ಪೊಲೀಸರ ತಂಡ ಆಗಮಿಸಿದೆ.
“ಅಪಘಾತಕ್ಕೆ ಕಾರಣವಾದ ರೈಲು ಸಮೀಪಿಸುತ್ತಿರುವುದನ್ನು ಕಾರ್ಮಿಕರು ಗಮನಿಸದೇ ಇರುವುದು ಅಪಘಾತಕ್ಕೆ ಕಾರಣವಾಗಿರಬಹುದು, ಆದರೆ ಹೆಚ್ಚಿನ ತನಿಖೆ ನಡೆಯುತ್ತಿವೆ” ಎಂದು ಶೋರನೂರ್ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement