ವೀಡಿಯೊ..| ಹಾರ್ನ್‌ ಮಾಡಬೇಡಿ ಎಂದಿದ್ದಕ್ಕೆ ವೃದ್ಧನಿಗೆ ಬೆದರಿಕೆ ಹಾಕಿದರು ; ಪೊಲೀಸರನ್ನು ಕರೆದ ಅಕ್ಕಪಕ್ಕದವರಿಗೆ ಕಾರ್‌ ಗುದ್ದಿಸಿದ ಸಹೋದರಿಯರು…!

ನವದೆಹಲಿ : ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನಲ್ಲಿರುವ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದ ಇಬ್ಬರು ಸಹೋದರಿಯರನ್ನು ಹೈಡ್ರಾಮಾದ ನಂತರ ಬಂಧಿಸಲಾಗಿದೆ. ಅವರು ವೃದ್ಧನನ್ನು ಬೆದರಿಕೆ ಹಾಕಿ, ಪೊಲೀಸರು ಬಂದ ನಂತರ ಗಂಟೆಗಳ ಕಾಲ ಮನೆಯೊಳಗೆ ಲಾಕ್‌ ಮಾಡಿಕೊಂಡು, ನಂತರ ಕ್ಯಾಂಪಸ್‌ನೊಳಗೆ ತಮ್ಮ ಕಾರನ್ನು ಬೇಕಾಬಿಟ್ಟಿ ಓಡಿಸಿ ಜನರನ್ನು ಗಾಯಗೊಳಿಸಿದ್ದಾರೆ. ವಾಹನಗಳಿಗೆ ಡಿಕ್ಕಿ ಹೊಡೆದು ಹಾನಿ ಮಾಡಿದ್ದಾರೆ. ಪೊಲೀಸರು ಸೇರಿದಂತೆ ಹಲವರಿಗೆ ಅವರ ಕಾರು ಗುದ್ದಿದೆ ಎಂದು ಹೇಳಲಾಗಿದೆ.
ಒಂದು ತಿಂಗಳ ಹಿಂದೆ ಅನೇಕಾಂತ್ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದ ಭವ್ಯ ಜೈನ್ ಮತ್ತು ಚಾರ್ವಿ ಜೈನ್ ಶುಕ್ರವಾರ ತಡರಾತ್ರಿ ತಮ್ಮ ಕಾರಿನ ಹಾರ್ನ್ ಅನ್ನು ಬ್ಲೋವ್‌ ಮಾಡುತ್ತಿದ್ದರು . ಸಂಕೀರ್ಣದಲ್ಲಿ ವಾಸಿಸುವ 70 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ ಶರ್ಮಾ ಎಂಬವರು ಹಾರ್ನ್‌ ಮಾಡುವುದನ್ನು ನಿಲ್ಲಿಸಲು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ಶರ್ಮಾ ಅವರ ಹೂವಿನ ಕುಂಡಗಳಿಗೆ ಹಾನಿ ಮಾಡಿದ್ದಾರೆ. ನಂತರ ಅವರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿದ್ದಾರೆ.

ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬರುವ ಹೊತ್ತಿಗೆ, ಸಹೋದರಿಯರು ಗಂಟೆಗಳ ಕಾಲ ತಮ್ಮ ಫ್ಲಾಟ್‌ನೊಳಗೆ ತಮ್ಮನ್ನು ತಾವೇ ಲಾಕ್ ಮಾಡಿಕೊಂಡರು. ಹೊರಗೆ ಬಂದಾಗ ತಮ್ಮ ಕಾರನ್ನು ಹತ್ತಿಸಿ ಸೊಸೈಟಿಯೊಳಗೆ ಅತಿರೇಕವಾಗಿ ವಾಹನ ಚಲಾಯಿಸಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಹಾನಿ ಮಾಡಿದರು, ಜನರನ್ನು ಗಾಯಗೊಳಿಸಿದ್ದಾರೆ. ರೆಸಿಡೆನ್ಶಿಯಲ್ ಸೊಸೈಟಿಯ ಗೇಟ್‌ನಲ್ಲಿದ್ದ ತಡೆಗೋಡೆ ಮುರಿದು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪೊಲೀಸರು ಕಾರನ್ನು ಹಿಂಬಾಲಿಸಿದಾಗ ವಸತಿ ಸಮುಚ್ಚಯದ ಹೊರಗೆ ರಸ್ತೆಯಲ್ಲಿ ನಿಂತಿದ್ದ ಸ್ಕೂಟರ್ ಚಾಲಕನಿಗೂ ಸಹೋದರಿಯರು ಡಿಕ್ಕಿ ಹೊಡೆದಿದ್ದಾರೆ. ಸವಾರ ಪಾರಾಗಿದ್ದರೂ ಕಾರಿನಲ್ಲಿದ್ದ ಸಹೋದರಿಯರು ಆತನ ಸ್ಕೂಟರ್ ಅನ್ನು ಸ್ವಲ್ಪ ದೂರ ಎಳೆದಿದ್ದಾರೆ. ಪೊಲೀಸರು ಅಂತಿಮವಾಗಿ ನೋಯ್ಡಾ ಸೆಕ್ಟರ್ 20 ನಲ್ಲಿ ಅವರ ಕಾರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.

ಅಪಾರ್ಟ್‌ಮೆಂಟ್‌ನ ಹೊರಗೆ ಸ್ಕೂಟರ್‌ನೊಂದಿಗೆ ನಿಂತಿದ್ದಾಗ ಸಹೋದರಿಯರೊಂದಿಗೆ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅದನ್ನು ಎಳೆದುಕೊಂಡು ಹೋಗಿದೆ ಎಂದು ಸ್ಕೂಟರ್ ಸವಾರ ಜೋಗಿಂದರ್ ಹೇಳಿದ್ದಾರೆ.
ಅನೇಕಾಂತ್ ಅಪಾರ್ಟ್‌ಮೆಂಟ್‌ನ ಎಲೆಕ್ಟ್ರಿಷಿಯನ್ ಪ್ರದೀಪ್ ಚೌರಾಸಿಯಾ ಅವರು ಗಾಯಗೊಂಡವರಲ್ಲಿ ಸೇರಿದ್ದಾರೆ. “ಒಬ್ಬ ಸಹೋದರಿ ನಮ್ಮನ್ನೆಲ್ಲ ನೋಡಿದರು, ಕಾರು ಹತ್ತಿ ಕಾರು ಓಡಿಸಲು ಪ್ರಾರಂಭಿಸಿದರು, ಅವರು ತುಂಬಾ ವೇಗದಲ್ಲಿದ್ದರು, ನನ್ನ ಕೈಗೆ ಗಾಯವಾಯಿತು” ಎಂದು ಅವರು ಹೇಳಿದರು. ಸಿಸಿಟಿವಿ ದೃಶ್ಯಾವಳಿಗಳು ಕೆಲವರು ದೊಣ್ಣೆಗಳೊಂದಿಗೆ ಕಾರಿನ ಹಿಂದೆ ಓಡುತ್ತಿರುವುದನ್ನು ತೋರಿಸುತ್ತದೆ. ಆದರೆ ಅವರು ಕಾರು ವಾನಹಗಳಿಗೆ ಡಿಕ್ಕಿ ಹೊಡೆಯುತ್ತ ಸಾಗಿದೆ.

ಪ್ರಮುಖ ಸುದ್ದಿ :-   26/11 ಮುಂಬೈ ಭಯೋತ್ಪಾದಕ ದಾಳಿ ಸಂಚುಕೋರ ತಹವ್ವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಒಪ್ಪಿಗೆ ; ಪ್ರಧಾನಿ ಮೋದಿ ಸಮ್ಮುಖದಲ್ಲಿ ಟ್ರಂಪ್‌ ಘೋಷಣೆ

ಭವ್ಯ ಜೈನ್‌ ವಯಸ್ಸು 23 ಮತ್ತು ಚಾರ್ವಿ ಜೈನ್‌ ವಯಸ್ಸು 21. ಅವರು ಪದವೀಧರರು, ಆದರೆ ಕೆಲಸ ಮಾಡುತ್ತಿಲ್ಲ. ಅವರು ತಮ್ಮ ತಾಯಿಯೊಂದಿಗೆ ಇರುತ್ತಾರೆ, ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ, ಮತ್ತು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ತಂದೆ ನೀರಜ್ ಜೈನ್ ಅವರು ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾರೆ ಮತ್ತು ಪಹರ್‌ಗಂಜ್‌ನಲ್ಲಿ ವಾಸಿಸುತ್ತಿದ್ದಾರೆ. ಇದಕ್ಕೂ ಮೊದಲು, ಸೆಪ್ಟೆಂಬರ್‌ನಲ್ಲಿ, ವಸತಿ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ಗೆ ಥಳಿಸಿದ ಪ್ರಕರಣದಲ್ಲಿ ಸಹೋದರಿಯರ ಮೇಲೆ ಅಕ್ರಮ ಬಂಧನ ಮತ್ತು ಗಾಯ ಉಂಟುಮಾಡಿದ ಆರೋಪ ಹೊರಿಸಲಾಗಿತ್ತು.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement