ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ಬಳಿಯಲ್ಲಿನ ತಮ್ಮ ಅರ್ಪಾಟ್ಮೆಂಟ್ನಲ್ಲಿ ಅವರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮಾದನಾಯಕನಹಳ್ಳಿ ಬಳಿಯಲ್ಲಿನ ಅಪಾರ್ಟಮಂಟ್ನ, ಅವರ ನಿವಾಸದಲ್ಲಿ ಗುರುಪ್ರಸಾದ ಅವರ ಶವ ಪತ್ತೆಯಾಗಿದೆ. ಮನೆಯಿಂದ ಕೊಳೆತ ವಾಸನೆ ಬಂದ ನಂತರ ಅಕ್ಕ ಪಕ್ಕದ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ದೊರೆತಿದೆ.
1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ ಶರ್ಮಾ 2006 ರಲ್ಲಿ ತೆರೆಕಂಡ ಜಗ್ಗೇಶ ನಟಿಸಿದ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಆರಂಭಿಸಿದರು. ನಂತರ 2009 ರಲ್ಲಿ ‘ಎದ್ದೇಳು ಮಂಜುನಾಥ’ ಸಿನೆಮಾ ನಿರ್ದೇಶಿಸಿದರು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ಬಂತು. ನಂತರ ‘ಡೈರೆಕ್ಟರ್ ಸ್ಪೇಷಲ್’,’ಎರಡನೇ ಸಲ’ ರಂಗನಾಯಕ’ ಮೊದಲಾದ ಚಲನಚಿತ್ರಗಳನ್ನು ನಿರ್ದೇಶಿಸಿದರು. ಅಲ್ಲದೆ, ಅವರು ‘ಮಠ’, ‘ಎದ್ದೇಳು ಮಂಜುನಾಥ’, ’ಅನಂತು v/s ನುಸ್ರತ್’’ಮೈಲಾರಿ’, ‘ಹುಡುಗರು’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರು ಇತ್ತೀಚಿಗೆ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ. ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ