ಚಾಕುವಿನಿಂದ ಇರಿದು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣ ಪಂಚಾಯತ ವ್ಯಾಪ್ತಿಯ ಫರೀದಖಾನ ವಾಡಿಯ ತೋಟದ ಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಎರಡು ವರ್ಷ 9 ತಿಂಗಳಿನ ಸಾತ್ವಿಕ್ ರಾಹುಲ್ ಕಟಗೇರಿ ಎಂಬಾತ ಕೊಲೆಯಾದ ಮಗು. ತಾಯಿ ಭಾಗ್ಯಶ್ರೀ ಕೊಲೆ ಆರೋಪಿಯಾಗಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಏಳು ವರ್ಷಗಳ ಹಿಂದೆ ಮದುವೆಯಾದ ರಾಹುಲ್ ಮಾರುತಿ ಕಟಗೇರಿ ಮತ್ತು ಭಾಗ್ಯಶ್ರೀ ದಂಪತಿ, ಫರೀದಖಾನ ವಾಡಿಯ ತೋಟದ ಮನೆಯಲ್ಲಿ ವಾಸವಿದ್ದರು. ಪ್ರಾಣಾಪಾಯದಿಂದ ಪಾರಾದ ತಾಯಿಯನ್ನು ಬಂಧಿಸಲಾಗಿದ್ದು, ಮಗವಿನ ತಂದೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕಡವೆ ಬೇಟೆ : ಅರಣ್ಯಾಧಿಕಾರಿ ಸಿಬ್ಬಂದಿ ದಾಳಿ; ಒಬ್ಬನ ಬಂಧನ, ಐವರು ಪರಾರಿ

ನಿಮ್ಮ ಕಾಮೆಂಟ್ ಬರೆಯಿರಿ

advertisement