ಮುಡಾ ಹಗರಣ | ನೋಂದಣಿಗೂ ಮೊದಲೇ ಶುಲ್ಕ ಪಾವತಿ : ಸ್ನೇಹಮಯಿ ಕೃಷ್ಣ ಆರೋಪ ; ಸಿದ್ದರಾಮಯ್ಯ ವಿರುದ್ಧ ದಾಖಲೆ ಬಿಡುಗಡೆ

ಬೆಂಗಳೂರು: ಮುಡಾ ಹಗರಣದ (MUDA Scam) ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತೊಂದು ಆರೋಪ ಮಾಡಿದ್ದು, ಈ ಸಂಬಂದ ದಾಖಲೆ ಬಿಡುಗಡೆ ಮಾಡಿದ್ದಾರೆ.
ನಿವೇಶನ ನೋಂದಣಿಯಾಗುವ ಮುನ್ನವೇ ನೋಂದಣಿ ಶುಲ್ಕ ಪಾವತಿ ಮಾಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಅವರು ಆರೋಪಿಸಿದ್ದು, ಈ ಸಂಬಂಧ ಫೇಸ್‌ಬುಕ್‌ನಲ್ಲಿ ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ.

ನೋಂದಣಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 2020ರ ಜನವರಿ 12ರಂದು ಮುಡಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೆ ನೋಂದಣಿ ಶುಲ್ಕವನ್ನು ಒಂದು ದಿನ ಮುಂಚಿತವಾಗಿ ಪಾವತಿ ಮಾಡಿದ್ದರು. ಅಂದರೆ 2020ರ ಜನವರಿ 11ರಂದು ತಹಶೀಲ್ದಾರರಿಂದ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಸಿದ್ದರಾಮಯ್ಯನವರ ಪ್ರಭಾವ ಅಧಿಕಾರಿಗಳ ಮೇಲೆ ಬೀರಿದೆ ಎಂಬುದಕ್ಕೆ ಇದು ದಾಖಲೆಗಳು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ನೋಂದಣಿಗೆ ಅರ್ಜಿ ಕೊಡುವ ಒಂದು ದಿನದ ಮೊದಲೇ ಶುಲ್ಕ ಪಾವತಿ ಮಾಡಲಾಗಿದೆ. ಈ ರೀತಿ ಪಾವತಿ ಮಾಡಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಇದು ಅಧಿಕಾರಿಗಳ ಮೇಲೆ ನಿಮ್ಮ ಪ್ರಭಾವ ಬೀರಿದೆ ಎಂಬುದನ್ನು ಸಾಬೀತು ಪಡಿಸುವುದಿಲ್ಲವೆ? ಸ್ವತಃ ವಕೀಲರಾದ ಮತ್ತು ಮುಡಾ ಪ್ರಕರಣದಲ್ಲಿ ತಮ್ಮ ಯಾವುದೇ ಪ್ರಭಾವ ಇಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸ್ಪಷ್ಟೀಕರಣ ಕೊಡುವರೆ ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಆಸ್ಪತ್ರೆಗೆ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement