ಹೈದರಾಬಾದ್ : ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ತೆಲುಗು ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ದಕ್ಷಿಣ ಭಾರತದ ನಟಿ ಕಸ್ತೂರಿ ಶಂಕರ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ನಟಿ ಕಸ್ತೂರಿ ಶಂಕರ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದ ನಂತರ, ಚೆನ್ನೈನಲ್ಲಿರುವ ತನ್ನ ಮನೆಯಿಂದ ನಟಿ ನಾಪತ್ತೆಯಾಗಿದ್ದರು. ಮತ್ತು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರು. ನಂತರ ಪೊಲೀಸರು ಅವರಿಗಾಗಿ ಹುಡುಕುತ್ತಿದ್ದರು. ಈಗ ಅವರು ಹೈದರಾಬಾದ್‌ನಲ್ಲಿ ನಟಿಯನ್ನು ಬಂಧಿಸಿದ್ದಾರೆ. ವರದಿಯ ಪ್ರಕಾರ, ಚೆನ್ನೈನ ಎಗ್ಮೋರ್ ಪೊಲೀಸರು ಭಾರತ ನಾಗರಿಕ ಸುರಕ್ಷಾ ಸಂಹಿತೆಯ ನಾಲ್ಕು ನಿಬಂಧನೆಗಳ ಅಡಿಯಲ್ಲಿ ನಟಿ ವಿರುದ್ಧ ದೂರು ದಾಖಲಿಸಿದ್ದಾರೆ.
50 ವರ್ಷದ ನಟಿ ಕಸ್ತೂತಿ ಶಂಕರ ಅವರು ಇಂಡಿಯನ್ ಮತ್ತು , ಭಾರತೀಯ ಮತ್ತು ಅಣ್ಣಮಯ್ಯದಂತಹ ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ, ನವೆಂಬರ್ ಮೊದಲ ವಾರ ಹಿಂದೂ ಮಕ್ಕಳ್ ಕಚ್ಚಿ ಸಂಘಟನೆ ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟಿ ಕಸ್ತೂರಿ ಶಂಕರ, ತೆಲುಗು ಜನರ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ ನಂತರ ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿದ್ದರು.
ನಟಿಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡಿನ ಬಿಜೆಪಿ ರಾಷ್ಟ್ರೀಯ ಸಹ ಉಸ್ತುವಾರಿ ಡಾ. ಪೊಂಗುಲೇಟಿ ಸುಧಾಕರ ರೆಡ್ಡಿ ಅವರು ತಮ್ಮ ಹೇಳಿಕೆಗೆ ನಟಿ ಕಸ್ತೂರಿ ಶಂಕರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಆಕೆಯ ಹೇಳಿಕೆಗಳು ತಮಿಳುನಾಡಿನ ಜನರ ನಡುವೆ ಸೌಹಾರ್ದಯುತ ವಾತಾವರಣಕ್ಕೆ ಅಡ್ಡಿಯಾಗುತ್ತವೆ ಮತ್ತು ವಸುದೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ಎಂಬ ತತ್ವಕ್ಕೆ ವಿರುದ್ಧವಾಗಿವೆ ಎಂದು ಬಿಜೆಪಿ ನಾಯಕ ಸುಧಾಕರ ರೆಡ್ಡಿ ತಿಳಿಸಿದ್ದಾರೆ.
ತೀವ್ರ ಆಕ್ರೋಶ ವ್ಯಕ್ತವಾದ ನಂತರ ನಟಿ ತನ್ನ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದರು. ಹಾಗೂ ಅವುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. X ನಲ್ಲಿ ಕಸ್ತೂರಿ ಅವರು ತಮ್ಮ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, “ನನ್ನ ತೆಲುಗು ವಿಸ್ತೃತ ಸಂಬಂಧಿಕರನ್ನು ಅವಮಾನಿಸುವ ಅಥವಾ ಅಗೌರವಿಸುವ ಉದ್ದೇಶವನ್ನು ನಾನು ಎಂದಿಗೂ ಹೊಂದಿರಲಿಲ್ಲ. ಯಾವುದೇ ಉದ್ದೇಶಪೂರ್ವಕವಲ್ಲದ ಕೆಟ್ಟ ಭಾವನೆಗಳಿಗಾಗಿ ನಾನು ಕ್ಷಮೆಯಾಚಿಸುತ್ತೇನೆ ” ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ತಮಿಳು ರಾಜರು ಇರಿಸಿಕೊಂಡಿದ್ದ ವೇಶ್ಯೆಯರ ಸೇವೆ ಮಾಡಲು ಬಂದ ತೆಲುಗರು ಈಗ ತಾವೇ ತಮಿಳರು ಎಂದು ಹೇಳಿಕೊಳ್ಳುತ್ತಿದ್ದಾರೆಎಂದು ಹೇಳಿದ್ದರು.
ಕಸ್ತೂರಿ ಅವರು ಕಮಲ ಹಾಸನ್ ಅವರ ಇಂಡಿಯನ್, ಪರಂಪರಾ, ಹಬ್ಬ, ವೆಲ್ವೆಟ್ ನಗರಂ, ಗಾಡ್ ಫಾದರ್, ವಡಕರಿ, ಕೃಷ್ಣ, ಅಣ್ಣಮಯ್ಯ, ಸ್ನೇಹಮ್ ಮತ್ತು ಇತರರು ಸೇರಿದಂತೆ ದಕ್ಷಿಣ ಭಾರತದ ಹಲವಾರು ದೊಡ್ಡ-ಬಜೆಟ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ