ಹುಲಿ ವೀಕ್ಷಣೆಗಳು ಸಾಮಾನ್ಯವಾಗಿರಬಹುದು, ಆದರೆ ಎರಡು ಪ್ರಬಲ ಎರಡು ಹುಲಿಗಳ ನಡುವಿನ ಹೊಡೆದಾಟಕ್ಕೆ ಸಾಕ್ಷಿಯಾಗುವುದು ಬಹುತೇಕ ಅಪರೂಪ. ಇದೀಗ, ಇಂಥದ್ದೇ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಹುಲಿಗಳು ಭೀಕರ ಕಾಳಗದಲ್ಲಿ ತೊಡಗಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.
ಸಫಾರಿ ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡಿದ ಈ ಉಗ್ರ ಎನ್ಕೌಂಟರ್ನಲ್ಲಿ ವೀಕ್ಷಕರು ಸುರಕ್ಷಿತ ದೂರದಿಂದ ವೀಕ್ಷಿಸಿದ್ದಾರೆ. ಇವೆರಡು ಹೆಣ್ಣು ಹುಲಿಹಳು ಎಂದು ಹೇಳಲಾಗಿದ್ದು, ಎರಡು ಹುಲಿಗಳು ಭೀಕರ ಕಾಳಗ ನಡೆಸಿವೆ. ಈ ಹುಲಿಗಳ ಕಾಳಗ ನೇರವಾಗಿ ಸಫಾರಿ ವಾಹನಗಳ ಮುಂದೆಯೇ ನಡೆದಿದೆ. ಪ್ರವಾಸಗರು ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ವರದಿಯ ಪ್ರಕಾರ, ಹೇರಳವಾದ ವನ್ಯಜೀವಿಗಳಿಗೆ ಹೆಸರುವಾಸಿಯಾಗಿರುವ ಖುರ್ಸಾಪರ್ ವಲಯದ ಪ್ರಸಿದ್ಧ ಚೈಪಟ್ಟಿ ಪ್ರದೇಶದಲ್ಲಿ ಈ ಹುಲಿಗಳ ಕಾಳಗ ನಡೆದಿದೆ. ವೀಡಿಯೊದಲ್ಲಿರುವ ಹುಲಿಗಳ ಹೆಸರು ವೀರಾ ಮತ್ತು ಭೇಲಾ. ಈ ಹುಲಿಗಳ ಘರ್ಜನೆಗಳು ಕಾಡಿನಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ, ಗಾಳಿಯಲ್ಲಿನ ಉದ್ವೇಗವು ಆ ಪ್ರದೇಶದಲ್ಲಿದ್ದ ಪ್ರಾಣಿಗಳ ಆತಂಕಕ್ಕೆ ಕಾರಣವಾಯಿತು.
ಫೆಬ್ರವರಿಯಲ್ಲಿ ಮಹಾರಾಷ್ಟ್ರ ಅರಣ್ಯ ಇಲಾಖೆಯ X ಖಾತೆಯು ವೀಡಿಯೊವನ್ನು ಮೊದಲು ಹಂಚಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಅದನ್ನೇ ಈಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.
ಭಾರತದ 47 ಪ್ರಾಜೆಕ್ಟ್ ಹುಲಿ ಮೀಸಲು ಅರಣ್ಯದಲ್ಲಿ ಒಂದಾದ ತಡೋಬಾ-ಅಂಧಾರಿ ಟೈಗರ್ ರಿಸರ್ವ್, ಮಹಾರಾಷ್ಟ್ರದ ಅತಿದೊಡ್ಡ ಮತ್ತು ಹಳೆಯ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ನಾಗಪುರ ನಗರದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ ಮತ್ತು ಇದು ಚಂದ್ರಾಪುರ ಜಿಲ್ಲೆಯಲ್ಲಿದೆ. ಕರಡಿಗಳು, ಭಾರತೀಯ ಚಿರತೆಗಳು, ಗೌರ್ಗಳು, ನೀಲ್ಗಾಯ್, ಸಣ್ಣ ಭಾರತೀಯ ಸಿವೆಟ್ಗಳು, ಸಾಂಬಾರ್, ಬಾರ್ಕಿಂಗ್ ಜಿಂಕೆ ಮೊದಲಾದವುಗಳು ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿವೆ.
ನಿಮ್ಮ ಕಾಮೆಂಟ್ ಬರೆಯಿರಿ