ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ (TMC) ಕೌನ್ಸಿಲರ್ ಸುಶಾಂತ ಘೋಷ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಆದರೆ ರಿವಾಲ್ವರ್‌ನಿಂದ ಗುಂಡು ಹಾರದ ಕಾರಣ ಹತ್ಯೆ ಯತ್ನ ವಿಫಲವಾಗಿದೆ. ಆರೋಪಿಯನ್ನು ಕೌನ್ಸಿಲರ್ ಹಾಗೂ ಇತರರು ಬೆನ್ನಟ್ಟಿ ಹಿಡಿದಿದ್ದಾರೆ.
ಶುಕ್ರವಾರ (ನ. 15) ರಾತ್ರಿ 8:10ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇಬ್ಬರು ವ್ಯಕ್ತಿಗಳು ಕಸ್ಬಾ ಪ್ರದೇಶದಲ್ಲಿ ಇರುವ ಸುಭಾಷ್ ಅವರು ತಮ್ಮ ನಿವಾಸದ ಮುಂದೆ ಕುಳಿತಿದ್ದಾಗ ಸ್ಕೂಟರ್‌ನಲ್ಲಿ ಬಂದು ಕೊಲೆ ಮಾಡಲು ಯತ್ನಿಸಿದ್ದಾರೆ.
ಶುಕ್ರವಾರ ರಾತ್ರಿ ಕೌನ್ಸಿಲರ್ ನಿವಾಸದ ಬಳಿ ಬಂದ ಹಂತಕರು ಸುಶಾಂತ ಘೋಷ್ ಅವರ ಮೇಲೆ ಗುಂಡು ಹಾರಿಸಲು ಪ್ರಯತ್ನ ಪಟ್ಟಿದ್ದಾರೆ. ರಿವಾಲ್ವರ್ ಹಿಡಿದು ಬಂದ ವ್ಯಕ್ತಿಗಳು 2 ಬಾರಿ ಗುಂಡು ಹಾರಿಸಲು ಪ್ರಯತ್ನ ಪಟ್ಟರು. ಆದರೆ ರಿವಾಲ್ವರ್ ನಿಂದ ಗುಂಡು ಹಾರಲಿಲ್ಲ.
ಯೋಜನೆ ವಿಫಲವಾದುದ್ದನ್ನು ನೋಡಿ ಇಬ್ಬರು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಶೂಟರ್ ನನ್ನು ನೋಡಿದ ಘೋಷ್ ಆತನತ್ತ ನುಗ್ಗಿದ್ದಾರೆ. ಆಗ ಆತ ತನ್ನ ಸಹಚರನ ಸ್ಕೂಟರ್‌ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಸ್ಕೂಟರಿನಿಂದ ಜಾರಿಬಿದ್ದಿದ್ದಾನೆ ಮತ್ತು ನಂತರ ಓಡಿದ್ದಾನೆ. ಬೆ ಆದರೆ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್, ನೆರೆಹೊರೆಯವರು ಮತ್ತು ಕೆಲವು ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಬೆನ್ನಟ್ಟಿ ಈ ಪೈಕಿ ಓರ್ವ ಆರೋಪಿಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಕೋಲ್ಕತ್ತಾ ಪೋಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು, ಆತನ ಬಳಿಯಿಂದ ಒಂದು ರಿವಾಲ್ವರ್ ಮತ್ತು ಎರಡು ಮ್ಯಾಗಜೀನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿಯ ಹುಡುಕಾಟ ನಡೆಯುತ್ತಿದೆ.
ಸುಶಾಂತ ಘೋಷ್ ಕೋಲ್ಕತ್ತಾದ ವಾರ್ಡ್ ನಂ 108ರಿಂದ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಆಗಿದ್ದಾರೆ. ಮೂಲಗಳ ಪ್ರಕಾರ ಆರೋಪಿ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಸುಶಾಂತ ಘೋಷ್ ಅವರನ್ನು ಹತ್ಯೆ ಮಾಡಲು ವ್ಯಕ್ತಿಯೊಬ್ಬ ತನ್ನನ್ನು ನೇಮಿಸಿಕೊಂಡಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತೃಣಮೂಲ ಕಾಂಗ್ರೆಸ್ ನಾಯಕನ ಫೋಟೋ ತೋರಿಸಿ ಗುಂಡು ಹಾರಿಸುವಂತೆ ಸೂಚಿಸಲಾಗಿದೆ ಎಂದು ಆರೋಪಿ ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ