ವೀಡಿಯೊ…| ಒಂದೇ ಬೈಕ್‌ನಲ್ಲಿ 8 ಜನರ ಪ್ರಯಾಣ; ಬೈಕ್‌ ತಡೆದ ಪೊಲೀಸರೇ ಶಾಕ್‌…!

ಶಹಜಹಾನಪುರ : ಅಚ್ಚರಿಯ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ಕುಟುಂಬದ ಏಳು ಜನರೊಂದಿಗೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಸವಾರಿಯನ್ನು ಸ್ಥಳೀಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ನಿಲ್ಲಿಸಿದ್ದು, ಬೈಕಿನಲ್ಲಿ ಎಂಟು ಜನ ಹೋಗುತ್ತಿರುವುದನ್ನು ನೋಡಿ ಪೊಲೀಸ್‌ ಅಧಿಕಾರಿಯೇ ಗಬರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಹಜಹಾನಪುರದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿರುವ ಘಟನೆಯಲ್ಲಿ ಎಂಟು ಜನರು ಬೈಕ್‌ ಮೇಲೆ ಹೋಗುತ್ತಿರುವುದನ್ನು ಪೊಲೀಸರು ತಡೆದಿದ್ದಾರೆ.

ಗಂಡ-ಹೆಂಡತಿ ಮತ್ತು ಆರು ಮಕ್ಕಳು ಒಂದೇ ಬೈಕ್‌ನಲ್ಲಿ ಸವಾರಿ ಮಾಡುವುದನ್ನು ಈಗ ವೈರಲ್‌ ಆದ ವೀಡಿಯೊದಲ್ಲಿ ಕಾಣಬಹುದು.ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮೂವರು ಮಕ್ಕಳು ಕುಳಿತಿದ್ದರು. ಸವಾರನ ಹಿಂದೆ ಆತನ ಪತ್ನಿ, ಮೂವರು ಮಕ್ಕಳು ಕುಳಿತಿರುವುದನ್ನು ಕಾಣಬಹುದು. ಇದರ ಜೊತೆಗೆ ಅವರು ಉಪಯೋಗಿಸುವ ಇತರ ಗೃಹೋಪಯೋಗಿ ವಸ್ತುಗಳೂ ಸಹ ಬೈಕಿನ ಮೇಲಿವೆ. ಇವರನ್ನು ತಡೆದ ಸಂಚಾರ ಪೊಲೀಸರು ನಂತರ ಬೈಕಿನ ಮೇಲಿರುವ ಜನರನ್ನು ಎಣಿಸಿದ ನಂತರ ಗಾಬರಿಯಾಗಿದ್ದಾರೆ.

ನಂತರ ಇಷ್ಟೊಂದು ಜನರನ್ನು ಕರೆದೊಯ್ಯುತ್ತಿದ್ದ ಸವಾರನಿಗೆ ಛೀಮಾರಿ ಹಾಕಿದರು. ‘ಟ್ರಾಫಿಕ್ ರೂಲ್ಸ್ ಪಾಲಿಸಬೇಕಲ್ಲವೇ’ ಎಂದು ಮನೆಯವರಿಗೆ ಪ್ರಶ್ನಿಸಿದ ಪೊಲೀಸ್‌ ಅಧಿಕಾರಿ ಅವರಿಗೆ ಈ ರೀತಿ ಅಪಾಯಕಾರಿ ಸವಾರಿ ಮಾಡುವುದಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಬೈಕ್‌ ಸವಾರ ಹೇಳಿದ ನಂತರ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಇದೇ ವೇಳೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ, ‘ನಿಮ್ಮ ಬೈಕ್ ಮಾರಿ ಅದರ ಬದಲು ರಿಕ್ಷಾ ಖರೀದಿಸಿ’ ಎಂದು ವ್ಯಂಗ್ಯವಾಡಿದ್ದಾರೆ.
ಸಂಪೂರ್ಣ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement