ಇಸ್ರೇಲಿ ವಾಯು ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯ ವಕ್ತಾರ ಸಾವು

ಲೆಬನಾನಿನ ಹೆಜ್ಬೊಲ್ಲಾ ಗುಂಪಿನ ಮುಖ್ಯ ವಕ್ತಾರ ಭಾನುವಾರ ಮಧ್ಯ ಬೈರುತ್‌ನಲ್ಲಿ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ಕುರಿತು ಹೆಜ್ಬೊಲ್ಲಾಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ.
ಲೆಬನಾನಿನ ಮಧ್ಯ ಬೈರುತ್‌ ಮೇಲೆ ನಡೆದ ಇಸ್ರೇಲಿ ದಾಳಿಯಲ್ಲಿ ಹೆಜ್ಬೊಲ್ಲಾದ ಮುಖ್ಯ ವಕ್ತಾರ ಮೊಹಮ್ಮದ್ ಅಫೀಫ್ ಸಾವಿಗೀಡಾಗಿದ್ದಾರೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಅಧಿಕಾರವಿಲ್ಲದ ಕಾರಣ ಹೆಸರು ಹೇಳಲು ಇಚ್ಛಿಸದ ಹೆಜ್ಬೊಲ್ಲಾ ಅಧಿಕಾರಿ ಭಾನುವಾರ ನಡೆದ ವಾಯಿ ದಾಳಿಯಲ್ಲಿ ಅಫೀಫ್ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೆಜ್ಬೊಲ್ಲಾದಿಂದ ಇದನ್ನು ದೃಢೀಕರಿಸಿಲ್ಲವಾದರೂ ಲೆಬನಾನಿನ ಅಲ್-ಜದೀದ್ ಬ್ರಾಡ್‌ಕಾಸ್ಟರ್ ಇಸ್ರೇಲ್‌ ದಾಳಿಯಲ್ಲಿ ಅಫೀಫ್‌ ಕೊಲ್ಲಲ್ಪಟ್ಟರು ಎಂದು ದೃಢಪಡಿಸಿದೆ. ಏತನ್ಮಧ್ಯೆ, ದಾಳಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲಿ ಮಿಲಿಟರಿ ಕೂಡ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ಅಫೀಫ್‌ ಇರಾನ್-ಬೆಂಬಲಿತ ಹೆಜ್ಬೊಲ್ಲಾ ಗುಂಪಿನ ಮಾಧ್ಯಮ ಸಂಬಂಧಗಳ ಹೊಣೆ ಹೊರುವ ಮೊದಲು ಹೆಜ್ಬೊಲ್ಲಾದ ಅಲ್-ಮನರ್ ಟಿವಿ ಕೇಂದ್ರವನ್ನು ಹಲವು ವರ್ಷಗಳ ಕಾಲ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಹಿಂದಿನ ದಿನ, ಹಲವಾರು ಕಟ್ಟಡಗಳಿಂದ ಜನರನ್ನು ಸ್ಥಳಾಂತರಿಸುವಂತೆ ಇಸ್ರೇಲಿ ಮಿಲಿಟರಿ ಎಚ್ಚರಿಕೆ ನೀಡಿದ ನಂತರ ಇಸ್ರೇಲಿ ಯುದ್ಧವಿಮಾನಗಳು ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ವಾಯು ದಾಳಿ ನಡೆಸಿದವು. ದಹಿಯೆಹ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಹೆಜ್ಬೊಲ್ಲಾ ಪ್ರಬಲ ಅಸ್ತಿತ್ವವನ್ನು ಹೊಂದಿದೆ ಎಂಬುದು ಗಮನಾರ್ಹ. ಲೆಬನಾನಿನ ಅಧಿಕಾರಿಗಳು ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಪ್ರಸ್ತಾಪವನ್ನು ಪರಿಗಣಿಸುತ್ತಿರುವಾಗ ಇಸ್ರೇಲ್‌ ಈ ದಾಳಿ ನಡೆಸಿದೆ.

ಪ್ರಮುಖ ಸುದ್ದಿ :-   ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement