
ಶನಿವಾರ ಇಸ್ರೇಲಿನ ಉತ್ತರ ಪಟ್ಟಣವಾದ ಸಿಸೇರಿಯಾದಲ್ಲಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಕಡೆಗೆ ಎರಡು ಫ್ಲಾಶ್ ಬಾಂಬ್ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಈ ವೇಳೆ ಪ್ರಧಾನಿ ನೆತನ್ಯಾಹು ಮತ್ತು ಅವರ ಕುಟುಂಬವು ಮನೆಯಲ್ಲಿ ಇರಲಿಲ್ಲ ಮತ್ತು ಫ್ಲ್ಯಾಷ್ ಬಾಂಬ್ ನೆತನ್ಯಾಹು ಅವರ ಮನೆಯ ಉದ್ಯಾನಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿ ಉರಿದಿದೆ. ಆದರೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಯು “ಎಲ್ಲಾ ಕೆಂಪು ಗೆರೆಗಳನ್ನು” ದಾಟಿದೆ ಎಂದು ದೃಢಪಡಿಸಿದ ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಇರಾನ್ ಮತ್ತು ಅದರ ಪ್ರಾಕ್ಸಿಗಳು ಇಸ್ರೇಲಿ ಪ್ರಧಾನಿಗೆ ಹಾನಿ ಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.

ಇಸ್ರೇಲ್ನ ಅಧ್ಯಕ್ಷ ಐಸಾಕ್ ಹೆರ್ಜೋಗ್ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
“ನಾನು ಈಗ ಶಿನ್ ಬೆಟ್ನ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ ಮತ್ತು ಘಟನೆಗೆ ಕಾರಣರಾದವರನ್ನು ಆದಷ್ಟು ಬೇಗ ತನಿಖೆ ಮಾಡುವ ಮತ್ತು ವ್ಯವಹರಿಸುವ ತುರ್ತು ಅಗತ್ಯವನ್ನು ವ್ಯಕ್ತಪಡಿಸಿದ್ದೇನೆ” ಎಂದು ಹರ್ಜೋಗ್ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್, “ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧದ ಪ್ರಚೋದನೆಯು ಎಲ್ಲಾ ಗಡಿಗಳನ್ನು ದಾಟಿದೆ. ಇಂದು ರಾತ್ರಿ ಅವರ ಮನೆಗೆ ಫ್ಲಾಶ್ ಬಾಂಬ್ ಎಸೆಯುವುದು ಮತ್ತೊಂದು ಕೆಂಪು ಗೆರೆಯನ್ನು ದಾಟಿದೆ ಎಂದು ಹೇಳಿದ್ದಾರೆ.
ಫ್ಲಾಶ್ ಬಾಂಬ್ ದಾಳಿಯ ಹಿಂದೆ ಯಾರಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಇಸ್ರೇಲಿ ಏಜೆನ್ಸಿಗಳು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ, ಶನಿವಾರದ ಘಟನೆಯ ಹೊಣೆಗಾರಿಕೆಯನ್ನು ತಕ್ಷಣವೇ ಯಾರೂ ಹೊತ್ತುಕೊಂಡಿಲ್ಲ.
ಅದೇ ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ, ಡ್ರೋನ್ ದಾಳಿಯನ್ನು ತಾನು ನಡೆಸಿರುವುದಾಗಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹೆಜ್ಬೊಲ್ಲಾ ಹೇಳಿಕೊಂಡಿತ್ತು.
ಕಳೆದ ವರ್ಷ ಸೆಪ್ಟೆಂಬರ್ನಿಂದ, ಇಸ್ರೇಲಿ ಪಡೆಗಳು ಲೆಬನಾನ್ನ ಸಶಸ್ತ್ರ ಹೆಜ್ಬೊಲ್ಲಾ ಗುಂಪಿನೊಂದಿಗೆ ಸಂಘರ್ಷ ನಡೆಸುತ್ತಿವೆ. ಗಾಜಾದಲ್ಲಿನ ಯುದ್ಧದ ಕುರಿತು ಹೆಜ್ಬೊಲ್ಲಾ ಉಗ್ರಗಾಮಿಗಳು ಪ್ರಾರಂಭಿಸಿದ ಸೀಮಿತ, ಗಡಿಯಾಚೆಗಿನ ರಾಕೆಟ್ ದಾಳಿ ಹಾಗೂ ಗುಂಡಿನ ದಾಳಿಯ ನಂತರ ಸುಮಾರು ಒಂದು ವರ್ಷದ ನಂತರ ಇಸ್ರೇಲ್ ಭುಸೇನೆಯನ ಮೂಲಕ ಇಸ್ರೇಲ್ ಗಡಿಗುಂಟ ಲೆಬನಾನಿನ ಹೆಜ್ಬೊಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ