ಮೈ ಜುಂ ಎನಿಸುವ ವೀಡಿಯೊ…| ತಾಯಿ-ಮಗಳನ್ನು ಸಮುದ್ರಕ್ಕೆ ಎಳೆದೊಯ್ದ ಬೃಹತ್‌ ಅಲೆಗಳು ; ಜೀವನ್ಮರಣ ಹೋರಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಎಲ್ಲರೂ ಸಮುದ್ರತೀರದಲ್ಲಿ ಕುಳಿತು ಅಲೆಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ ಅಲೆಗಳು ದೈತ್ಯ ರೂಪವನ್ನು ಪಡೆದರೆ, ಅದು ಅತ್ಯಂತ ಭಯಾನಕ. ಹೀಗಾಗಿ ಅಲೆಗಳ ಸ್ವರೂಪವನ್ನು ಗಮನಿಸಿಯೇ ಸಮುದ್ರಕ್ಕೆ ಇಳಿಯಬೇಕು… ಇಲ್ಲವಾದರೆ ಯಾವುದೇ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ವೈರಲ್‌ ಆದ ವೀಡಿಯೊವೇ ನಿದರ್ಶನ.
ಸಮುದ್ರದ ಅಲೆಗಳು ಯಾರನ್ನಾದರೂ ಹೇಗೆ ಅಸಹಾಯಕರನ್ನಾಗಿ ಮಾಡುತ್ತವೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಬಹುದು. ಈ ವೈರಲ್ ಕ್ಲಿಪ್‌ನ ಆರಂಭದಲ್ಲಿ, ಮಹಿಳೆಯು ಹುಡುಗಿಯೊಂದಿಗೆ ಸಮುದ್ರ ತೀರದಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಏಕಾಏಕಿ ಬಂದ ಬೃಹತ್‌ ಅಲೆಯ ಹೊಡೆತಕ್ಕೆ ತಕ್ಷಣ ಇಬ್ಬರೂ ಸಮತೋಲನ ಕಳೆದುಕೊಂಡು ಸಮುದ್ರದಲ್ಲಿ ಬಿದ್ದಿದ್ದಾರೆ.

ಮೊದಲಿಗೆ ಇದು ಸಾಮಾನ್ಯ ವಿಷಯ ಎಂದು ಅವರು ಭಾವಿಸುತ್ತಾರೆ. ಆದರೆ ಅಲೆಯು ಎಷ್ಟು ಪ್ರಬಲವಾಗಿತ್ತೆಂದರೆ ಅವರಿಬ್ಬರು ದಡವನ್ನು ತಲುಪಲು ಪ್ರಯತ್ನಿಸಿದರೂ ಅದು ಪುನಃ ಅವರನ್ನು ಸಮುದ್ರಕ್ಕೆ ಎಳೆದೊಯ್ಯುತ್ತಿತ್ತು. ಇಬ್ಬರೂ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಸಾವಿರಿಸಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾರೆ.
ಇಬ್ಬರೂ ಬಹಳ ಹೊತ್ತು ಒಬ್ಬರನ್ನೊಬ್ಬರು ಹಿಡಿದಿಕೊಂಡು ಮೇಲೇಳಲು ಪ್ರಯತ್ನಿಸಿದ್ದಾರೆ, ಆದರೆ ದೈತ್ಯ ಅಲೆ ಅವರಿಗೆ ಏಳಲು ಕೊಡಲಿಲ್ಲ. ಅವರನ್ನು ಪುನಃ ಎಳೆದುಕೊಂಡು ಹೋಗಿದೆ. ಅಂತಿಮವಾಗಿ ಜನರೇ ಧೈರ್ಯ ಮಾಡಿ ಅವರನ್ನು ಉಳಿಸಲು ಮುಂದಾಗಿದ್ದಾರೆ. ಆದರೂ ಅವರಿಬ್ಬರು ಅಲೆಗಳ ಮಧ್ಯೆ ಸಿಕ್ಕಿಹಾಕಿಕೊಂಡ ಕಾರಣ ಜನರಿಗೂ ಅವರನ್ನು ದಡಕ್ಕೆ ಎಳೆದು ತರಲು ಸಾಧ್ಯವಾಗುತ್ತಿರಲಿಲ್ಲ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಆದರೆ ಅಲ್ಲಿದ್ದವರಿಗೆ ಇಬ್ಬರಿಗೂ ಗಾಬರಿಯಾಗದೆ ಶಾಂತವಾಗಿರಲು ಹೇಳಿದ್ದಾರೆ. ಮತ್ತು ಅಲೆಯು ಅವರನ್ನು ದೂಡಿಕೊಂಡು ದಡದ ಸಮೀಪ ಬಂದ ತಕ್ಷಣ ಅಲ್ಲಿದ್ದವರು ಅವರನ್ನು ಹಿಡಿದು ದಡದತ್ತ ಎಳೆಯುತ್ತಾರೆ. ಅಂತೂ ಅವರಿಬ್ಬರ ಪ್ರಾಣ ಉಳಿದಿದೆ. ಆದರೆ ಅಲೆಗಳ ಶಕ್ತಿಯ ಮುಂದೆ ಒಬ್ಬ ವ್ಯಕ್ತಿ ಎಷ್ಟು ಅಸಹಾಯಕನಾಗುತ್ತಾನೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
ಈ 1.5 ನಿಮಿಷದ ವೀಡಿಯೊ ತುಂಬಾ ಭಯಾನಕವಾಗಿದೆ. ಇದನ್ನು ನೋಡುವಾಗ ಹೃದಯ ಬಡಿತವೂ ಹೆಚ್ಚಾಗುತ್ತದೆ. ಈ ವೀಡಿಯೊ ಇಲ್ಲಿಯವರೆಗೆ 17 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement