ಗೌಪ್ಯತೆ ನೀತಿ | ಮೆಟಾಕ್ಕೆ ₹ 213 ಕೋಟಿ ದಂಡದ ವಿಧಿಸಿದ ಸಿಸಿಐ ; ಮೇಲ್ಮನವಿ ಸಲ್ಲಿಸಲು ಮೆಟಾ ನಿರ್ಧಾರ

ನವದೆಹಲಿ: ವಾಟ್ಸಾಪ್ (WhatsApp ) ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಆಯೋಗ Competition Commission of India ವು ಮೆಟಾ ಕಂಪನಿಗೆ ₹ 213 ಕೋಟಿ ದಂಡ ವಿಧಿಸಿದ ನಂತರ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯೋಚಿಸಲಾಗಿದೆ ಎಂದು ಕಂಪನಿ ಹೇಳಿದೆ.
ಐದು ವರ್ಷಗಳ ಅವಧಿಗೆ ಜಾಹೀರಾತು ಉದ್ದೇಶಗಳಿಗಾಗಿ ಮೆಟಾ ಒಡೆತನದ ಇತರ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಸೋಮವಾರ ವಾಟ್ಸಾಪ್‌ (WhatsApp)ಗೆ ಸೂಚಿಸಿದೆ.
2021 ರಲ್ಲಿ ಮಾಡಿದ ವಾಟ್ಸಾಪ್‌ ಗೌಪ್ಯತೆ ನೀತಿಯ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಅನ್ಯಾಯದ ವ್ಯಾಪಾರ ಮಾರ್ಗಗಳಿಗಾಗಿ ಭಾರತದ ವಾಚ್‌ಡಾಗ್ ಸ್ಪರ್ಧಾತ್ಮಕ ಆಯೋಗ (Competition Commission) ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಕಂಪನಿಗೆ ₹ 213.14 ಕೋಟಿ ದಂಡವನ್ನು ವಿಧಿಸಿದೆ. ಇದಲ್ಲದೆ, ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳಿಂದ ದೂರವಿರಲು ನಿರ್ದೇಶಿಸಿದೆ.

ಸಿಸಿಐ (CCI) ಆದೇಶದ ಪ್ರಕಾರ, ಸ್ಪರ್ಧಾತ್ಮಕ-ವಿರೋಧಿ ಸಮಸ್ಯೆಗಳನ್ನು ಪರಿಹರಿಸಲು ನಿರ್ದಿಷ್ಟ ಸಮಯದೊಳಗೆ ಕೆಲವು ನಡವಳಿಕೆಯ ಪರಿಹಾರಗಳನ್ನು ಅಳವಡಿಸಲು ಮೆಟಾ ಮತ್ತು ವಾಟ್ಸಪ್‌ಗೆ ಸೂಚಿಸಲಾಗಿದೆ. ಸಿಸಿಐ ನಿರ್ಧಾರವನ್ನು ಕಂಪನಿಯು ಒಪ್ಪುವುದಿಲ್ಲ ಮತ್ತು ಮೇಲ್ಮನವಿ ಸಲ್ಲಿಸಲು ಯೋಜಿಸಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
“ಜ್ಞಾಪನೆಯಾಗಿ, 2021 ರ ಅಪ್‌ಡೇಟ್ ಜನರ ವೈಯಕ್ತಿಕ ಸಂದೇಶಗಳ ಗೌಪ್ಯತೆಯನ್ನು ಬದಲಾಯಿಸಲಿಲ್ಲ ಮತ್ತು ಆ ಸಮಯದಲ್ಲಿ ಬಳಕೆದಾರರಿಗೆ ಆಯ್ಕೆ ನೀಡಲಾಯಿತು. ಈ ಅಪ್‌ಡೇಟ್‌ನಿಂದಾಗಿ ಯಾರೂ ಅವರ ಖಾತೆಗಳನ್ನು ಅಳಿಸುವುದಿಲ್ಲ ಅಥವಾ ವಾಟ್ಸಾಪ್‌ ಸೇವೆಯ ಕಾರ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ ಎಂದು ಮೆಟಾ ವಕ್ತಾರರು ಹೇಳಿದರು.ವಾಟ್ಸಾಪ್‌ನಲ್ಲಿ ಐಚ್ಛಿಕ ವ್ಯಾಪಾರ ವೈಶಿಷ್ಟ್ಯಗಳನ್ನು ಪರಿಚಯಿಸುವ ಬಗ್ಗೆ ಮತ್ತು ಡೇಟಾ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಮತ್ತಷ್ಟು ಪಾರದರ್ಶಕತೆಯನ್ನು ಒದಗಿಸುವ ಬಗ್ಗೆ ಈ ಅಪ್‌ಡೇಟ್ ಅನ್ನು ಮೆಟಾ ತಿಳಿಸಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement