ವೀಡಿಯೊ…| ಮದುವೆಯ ಮೆರವಣಿಗೆ ಮೇಲೆ ₹ 20 ಲಕ್ಷ ಮೌಲ್ಯದ ನೋಟುಗಳ ಸುರಿಮಳೆ ಗೈದರು…!

ನವದೆಹಲಿ : ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿನ ನಡೆದ ಮದುವೆ ಮೆರವಣಿಗೆಯ ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಮದುವೆಯ ಮೆರವಣಿಗೆ ಸಂದರ್ಭದಲ್ಲಿ ನೋಟುಗಳನ್ನು ಮೆರವಣಿಗೆ ಮೇಲೆ ಎಸೆಯಲು ₹ 20 ಲಕ್ಷವನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ವೈರಲ್ ವೀಡಿಯೊಗಳಲ್ಲಿ, ಕೆಲವರು ಮನೆಗಳ ಮೇಲೆ ನಿಂತುಕೊಂಡು ನೋಟುಗಳ ಬಂಡಲ್‌ಗಳನ್ನು ಗಾಳಿಗೆ ತೂರುತ್ತಿರುವುದು ಕಂಡುಬಂದಿದೆ.
ವರದಿಯ ಪ್ರಕಾರ, ಹೀಗೆ ನೋಟುಗಳನ್ನು ಗಾಳಿಯಲ್ಲಿ ಜನರ ಮೇಲೆ ತೂರಿದವರು ವರನ ಕಡೆಯಿಂದ ಬಂದವರು. ಮದುವೆಯ ಮೆರವಣಿಗೆಯಲ್ಲಿ, ಕೆಲವರು ಹತ್ತಿರದ ಮನೆಗಳ ಟೆರೇಸ್ ಅನ್ನು ಹತ್ತಿದರು, ಇತರರು ಜೆಸಿಬಿಗಳ ಮೇಲೆ ಹತ್ತಿದರು. ಅವರು ₹ 100, ₹ 200 ಹಾಗೂ ₹ 500 ನೋಟುಗಳನ್ನು ಗಾಳಿಗೆ ತೂರಿದ್ದಾರೆ.

ವೈರಲ್ ಆಗಿರುವ ವಿಡಿಯೋ ಅಫ್ಜಲ್ ಮತ್ತು ಅರ್ಮಾನ್ ಮದುವೆಯದ್ದು ಎನ್ನಲಾಗಿದೆ.
ಈ ವೀಡಿಯೊಕ್ಕೆ ಅಂತರ್ಜಾಲದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟಿಜನ್‌ಗಳು ಹಣವನ್ನು ಅಗತ್ಯವಿರುವವರಿಗೆ ಹಂಚಲು ಸಲಹೆ ನೀಡಿದರೆ, ಇತರರು ಆದಾಯ ತೆರಿಗೆ ಕಚೇರಿಗೆ ಡಯಲ್ ಮಾಡಿ ಎಂದು ತಮಾಷೆಯಾಗಿ ಹೇಳಿದ್ದಾರೆ.
ಮತ್ತೊಬ್ಬರು “ಸಹೋದರ, ಹಣವನ್ನು ಬಡವರಿಗೆ ಹಂಚು” ಎಂದು ಬರೆದಿದ್ದಾರೆ. “ಇಷ್ಟು ಹಣದಲ್ಲಿ ನಾಲ್ಕೈದು ಬಡ ಹುಡುಗಿಯರನ್ನು ಮದುವೆಯಾಗಬಹುದಿತ್ತು” ಎಂದು ಇನ್ನೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಭಾರತ ತೊರೆಯುವಂತೆ ನೋಟಿಸ್ : ಬಾಂಬೆ ಹೈಕೋರ್ಟ್‌ ಮೊರೆ ಹೋದ ನಟ ಇಮ್ರಾನ್ ಖಾನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement