ಅಮೆರಿಕದ ಲಂಚದ ಆರೋಪ ಆಧಾರರಹಿತ ಎಂದ ತಿರಸ್ಕರಿಸಿದ ಅದಾನಿ ಗ್ರೂಪ್‌ : ಕಾನೂನು ಕ್ರಮದ ಪರಿಶೀಲನೆ

ನವದೆಹಲಿ; ತನ್ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಪ್ರಮುಖ ಕಾರ್ಯನಿರ್ವಾಹಕರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಮಾಡಿದ ಲಂಚ ಮತ್ತು ಭದ್ರತಾ ವಂಚನೆಯ ಆರೋಪಗಳನ್ನು ಅದಾನಿ ಗ್ರೂಪ್ ಬಲವಾಗಿ ನಿರಾಕರಿಸಿದೆ.
ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದೆ ಮತ್ತು ಇದು ಸಮಗ್ರತೆ ಮತ್ತು ಅನುಸರಣೆಯ ಅತ್ಯುನ್ನತ ಮಾನದಂಡಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ. ಆರೋಪಗಳ ಬಗ್ಗೆ ಸಾಧ್ಯವಿರುವ ಎಲ್ಲಾ ಕಾನೂನು ಕ್ರಮಗಳ ಕುರಿತು ಪರಿಶೀಲಿಸಲಾಗುತ್ತದೆ ಎಂದು ಅದಾನಿ ಗ್ರುಪ್‌ ಹೇಳಿದೆ.
ದೋಷಾರೋಪ ಪಟ್ಟಿಯಲ್ಲಿರುವ ಆರೋಪಗಳು ಕೇವಲ ಆರೋಪಗಳಾಗಿವೆ ಮತ್ತು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿಗಳನ್ನು ನಿರಪರಾಧಿಗಳೆಂದು ಭಾವಿಸಲಾಗುತ್ತದೆ ಎಂದು ಅಮೇರಿಕಾದ ನ್ಯಾಯಾಂಗ ಇಲಾಖೆಯೇ ಹೇಳಿದೆ. ಆರೋಪಗಳ ಬಗ್ಗೆ ಎಲ್ಲ ಸಂಭಾವ್ಯ ಕಾನೂನು ನೆರವು ಪಡೆಯಲಾಗುವುದು” ಎಂದು ಅದಾನಿ ಗ್ರೂಪ್ ವಕ್ತಾರರು ತಿಳಿಸಿದ್ದಾರೆ.

“ಅದಾನಿ ಗ್ರೂಪ್ ಯಾವಾಗಲೂ ಪಾರದರ್ಶಕತೆ ಮತ್ತು ನಿಯಂತ್ರಕ ಅನುಸರಣೆಯ ಅತ್ಯುನ್ನತ ಮಾನದಂಡಗಳನ್ನು ನಿರ್ವಹಿಸಲು ದೃಢವಾಗಿ ಬದ್ಧವಾಗಿದೆ. ನಾವು ನಮ್ಮ ಪಾಲುದಾರರು ಮತ್ತು ಉದ್ಯೋಗಿಗಳಿಗೆ ನಾವು ಕಾನೂನು-ಪಾಲಿಸುವ ಸಂಸ್ಥೆಯಾಗಿದ್ದೇವೆ ಎಂದು ಭರವಸೆ ನೀಡುತ್ತೇವೆ ಎಂದು ಹೇಳಿಕೆ ತಿಳಿಸಿದೆ.
ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಪ್ರಮುಖ ಕಾರ್ಯನಿರ್ವಾಹಕರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ದೋಷಾರೂಪ ಮಾಡಿದ ನಂತರ ಗುರುವಾರದ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ 23% ರಷ್ಟು ಕುಸಿತ ಕಂಡಿದೆ. ಇದರ ನಡುವೆ ಅದಾನಿ ಸಮೂಹವು ಈ ಆರೋಪಗಳನ್ನು ನಿರಾಕರಿಸಿದೆ. ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳೀಕರಣವು ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಕುಸಿದಿದೆ ಎಂದು ಗಮನಿಸಬಹುದು.

ಪ್ರಮುಖ ಸುದ್ದಿ :-   2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ಏನಿದು ಲಂಚ ಪ್ರಕರಣ?
ಗೌತಮ್ ಅದಾನಿ, ಅವರ ಸೋರದ ಸಂಬಂಧಿ ಸಾಗರ ಅದಾನಿ ಮತ್ತು ಇತರ ಆರು ಮಂದಿ 2020 ಮತ್ತು 2024 ರ ನಡುವೆ ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳೊಂದಿಗೆ ಸೌರ ವಿದ್ಯುತ್ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 2,029 ಕೋಟಿ ($ 265 ಮಿಲಿಯನ್) ಲಂಚವನ್ನು ನೀಡಿದ್ದಾರೆ ಎಂದು ಾಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಅದಾನಿ ಮತ್ತು ಅವರ ಸೋದರ ಸಂಬಂಧಿ ಸಾಗರ ಅದಾನಿ ವಿರುದ್ಧ ಅಮೆರಿಕದಲ್ಲಿ ಬುಧವಾರ ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿದೆ ಮತ್ತು ಪ್ರಾಸಿಕ್ಯೂಟರ್‌ಗಳು ಆ ವಾರಂಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಯೋಜಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement