ವೀಡಿಯೊ…| ಭೂಮಿಯೊಳಗೆ 200 ಅಡಿ ಆಳದಲ್ಲಿ 15 ಅಂತಸ್ತಿನ ಬೃಹತ್‌ ಕಟ್ಟಡ ನಿರ್ಮಾಣ; ಇದರಲ್ಲಿದೆ ಸೂಪರ್ ಮಾರ್ಕೆಟ್…ಈಜುಕೊಳ…ಜಿಮ್‌…

ರಾಷ್ಟ್ರಗಳ ನಡುವಿನ ಘರ್ಷಣೆಗಳು ಹೆಚ್ಚು ಸಾಮಾನ್ಯವಾಗಿರುವ ಈ ಕಾಲಘಟ್ಟದಲ್ಲಿ ಬಾಂಬ್ ಸ್ಫೋಟ, ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಾರೆ. ಅಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯಿಂದ ಪಾರಾಗಲು ಬಂಕರ್‌ಗಳನ್ನು (15 ಅಡಿ ಆಳದಲ್ಲಿ) ಅಮೆರಿಕದಲ್ಲಿ ನಿರ್ಮಿಸಲಾಗಿದೆ. ಆದರೆ ಇದು ಕೇವಲ ಬಂಕರ್‌ ಅಲ್ಲ, 15 ಅಂತಸ್ತಿನ ಕಟ್ಟಡವನ್ನೇ ಭೂಮಿಯ ಕೆಳಗೆ ನಿರ್ಮಿಸಲಾಗಿದೆ…!
ಪರಮಾಣು ದಾಳಿಯಿಂದ ರಕ್ಷಿಸಿಕೊಳ್ಳಲು ಈ 15 ಅಂತಸ್ತು ಹೊಂದಿರುವ ಈ ಬೃಹತ್ ಬಂಕರ್ ಅನ್ನು ನಿರ್ಮಿಸಲಾಗಿದೆ. ಸರ್ವೈವಲ್ ಕಾಂಡೋ (Survival Condo) ಎಂಬ ಹೆಸರಿನ ಈ ಬಂಕರ್ ಅಮೆರಿಕದ ಕಾನ್ಸಾಸ್‌ನಲ್ಲಿದೆ. ಅದರ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರ ಮೈದಾನದ ಮಧ್ಯದಲ್ಲಿದ್ದು, ಪ್ರವೇಶ ದ್ವಾರದಲ್ಲಿ 8 ಟನ್ ಉಕ್ಕಿನ ಬಾಗಿಲನ್ನು ಅಳವಡಿಸಲಾಗಿದೆ.

ಇದನ್ನು ನೆಲದಡಿ 200 ಅಡಿ ಆಳದಲ್ಲಿ ನಿರ್ಮಿಸಲಾಗಿದೆ, ಮತ್ತು ಈ ಕಟ್ಟಡವು 15 ಮಹಡಿಗಳನ್ನು ಹೊಂದಿದೆ. ಮತ್ತು ದೈನಂದಿನ ಜೀವನ ನಡೆಸಲು ಬೇಕಾದ ಎಲ್ಲ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ.
ಕಟ್ಟಡದ ನಾಲ್ಕನೇ ಮಹಡಿಯಲ್ಲಿ (ಮೈನಸ್-4) ಸುಲಭವಾಗಿ ಆಹಾರ ಮತ್ತು ಪಾನೀಯಗಳು ಇರುವ ಸೂಪರ್‌ ರ್ಮಾರ್ಕೆಟ್ ಸಹ ಇದೆ. ಕಟ್ಟಡದಲ್ಲಿ ಈಜುಕೊಳವಿದ್ದು, ಅಲ್ಲದೆ, ಜಿಮ್, ಪೆಟ್ ಪಾರ್ಕ್ ಮತ್ತು ವೈದ್ಯಕೀಯ ಘಟಕವನ್ನು ಹೊಂದಿದೆ. ನೆಲದಡಿಯ ಈ ಬೃಹತ್‌ ಕಟ್ಟಡವು ಸಣ್ಣ ಸಿನಿಮಾ ಹಾಲ್ ಮತ್ತು ಗ್ರಂಥಾಲಯವನ್ನೂ ಹೊಂದಿದೆ. ಗಮನಿಸಬೇಕಾದ ಅಂಶವೆಂದರೆ ಒಂದು ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ 25 ಕೋಟಿ ರೂ.ಗಳು.

2008 ರಲ್ಲಿ, ಲ್ಯಾರಿ ಹಾಲ್ ಎಂಬವರು ನಿವೃತ್ತ ಕ್ಷಿಪಣಿ ಸಿಲೋವನ್ನು ಖರೀದಿಸಿದರು. ಪರಮಾಣು ಶಸ್ತ್ರಾಸ್ತ್ರ-ಸಾಗಿಸುವ ಕ್ಷಿಪಣಿಗಳ ಸಂಗ್ರಹಣೆ ಮತ್ತು ಉಡಾವಣೆಗಾಗಿ ಮಾಡಿದ ಭೂಗತ ರಚನೆ ಇದಾಗಿತ್ತು. ಇದನ್ನು ಅವರು ಜನರಿಗೆ ಬೇಕಾದ ಅಪಾರ್ಟ್ಮೆಂಟನ್ನಾಗಿ ಪರಿವರ್ತಿಸಿದರು.
ಸರ್ವೈವಲ್ ಕಾಂಡೋ ಪ್ರಾಜೆಕ್ಟ್ ಅಡಿ ಕಾನ್ಸಾಸ್‌ನಲ್ಲಿ ಇದನ್ನು ನಿರ್ಮಿಸಲು ಸುಮಾರು $20 ಮಿಲಿಯನ್ ವೆಚ್ಚವಾಗಿದೆ ಮತ್ತು ಸರಿಸುಮಾರು ಒಂದು ಡಜನ್ ಕುಟುಂಬಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಹಾರ ಮಳಿಗೆಗಳು, ಮೀನುಗಾರಿಕೆ, ಉದ್ಯಾನಗಳು ಮತ್ತು ಈಜುಗೊಳ ಮೊದಲಾದವುಗಳನ್ನು ಹೊಂದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement