ವೀಡಿಯೊ…| ತನ್ನ ಸತ್ತ ಮರಿಯನ್ನು ಎಬ್ಬಿಸಲು ಹತಾಶ ಪ್ರಯತ್ನ ನಡೆಸಿದ ತಾಯಿ ಆನೆ

ದುಃಖಕ್ಕೆ ಯಾವುದೇ ಗಡಿ ಇಲ್ಲ, ಅದು ಕೇವಲ ಮಾನವರಿಗೆ ಹಾಗೂ ಸಾಕು ಪ್ರಾಣಿಗಳಿಗೆ ಮಾತ್ರ ಸೀಮಿತವಾಗಿಯೂ ಅಲ್ಲ. ಅದು ಎಲ್ಲ ಪ್ರಾಣಿಗಳಲ್ಲಿಯೂ ಕಂಡುಬರುತ್ತದೆ. ಈಗ ಅಂಥದ್ದೇ ಒಂದು ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇತ್ತೀಚೆಗೆ ಹಂಚಿಕೊಂಡಿದ್ದಾರೆ.
ಈ ವೀಡಿಯೊದಲ್ಲಿ ಕಾಡಿನಲ್ಲಿ ಹೆಣ್ಣಾನೆಯೊಂದು ಆನೆಯೊಂದು ದುಃಖದಿಂದ ತನ್ನ ಸತ್ತ ಮರಿಯ ದೇಹವನ್ನು ಎಳೆಯುವ ಹಾಗೂ ಅದನ್ನು ಎಬ್ಬಿಸಲು ಹತಾಶ ಪ್ರಯತ್ನ ನಡೆಸುವುದನ್ನು ತೋರಿಸುತ್ತದೆ. ಈ ಭಾವನಾತ್ಮಕ ತುಣುಕು ತಾಯಿ ಹಾಗೂ ಮಗುವಿನ ಬಲವಾದ ಬಂಧವನ್ನು ಎತ್ತಿ ತೋರಿಸುತ್ತದೆ. ವೀಡಿಯೊ ವೈರಲ್ ಆಗಿದೆ.

ವೀಡಿಯೊದಲ್ಲಿ ಗೋಚರವಾದಂತೆ, ತಾಯಿ ಆನೆಯು ತನ್ನ ಕರುವಿನ ಸಾವನ್ನು ಒಪ್ಪಿಕೊಳ್ಳಲು ಹೆಣಗಾಡುತ್ತಿದೆ, ಪದೇಪದೇ ತನ್ನ ನಿರ್ಜೀವ ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತದೆ.
ಇದು ಆನೆಗಳು ತೀವ್ರ ಭಾವನಾತ್ಮಕ ಜೀವಿಗಳೆಂದು ಹೆಸರುವಾಸಿಯಾಗಿವೆ. ಆನೆಗಳಿಂದ ಇಂತಹ ಭಾವನಾತ್ಮಕ ಪ್ರತಿಕ್ರಿಯೆಗಳು ಅಪರೂಪವಲ್ಲ ಮತ್ತು ತಾವು ತಮ್ಮ ಕರ್ತವ್ಯದ ವರ್ಷಗಳಲ್ಲಿ ಇದೇ ರೀತಿಯ ಕ್ಷಣಗಳನ್ನು ನೋಡಿದ್ದಾಗಿ ಕಸ್ವಾನ್ ಹಂಚಿಕೊಂಡಿದ್ದಾರೆ. “ಇದು ನಮ್ಮ ಮೊದಲ ಪ್ರಕರಣವಲ್ಲ, ಇದನ್ನು ADFO ಜಯಂತ ಮೊಂಡಲ್ ಚಿತ್ರೀಕರಿಸಿದ್ದಾರೆ. ಕಳೆದ ಹಲವು ವರ್ಷಗಳ ಕ್ಷೇತ್ರ ಸೇವೆಯಲ್ಲಿ ನಾನು ವೈಯಕ್ತಿಕವಾಗಿ ಅಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇನೆ. ಕೆಲವೊಮ್ಮೆ ಇಡೀ ಹಿಂಡು ಶೋಕಾಚರಣೆ ಮಾಡುತ್ತದೆ. ಅದು ಅಂತ್ಯಕ್ರಿಯೆಯ ಮೆರವಣಿಗೆಯಂತೆ ಕಾಣುತ್ತದೆ, ”ಎಂದು ಅವರು ಮತ್ತೊಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ನವೆಂಬರ್ 21 ರಂದು ಪೋಸ್ಟ್ ಮಾಡಲಾದ ವೀಡಿಯೊವು 1.69 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. “ಆನೆಗಳನ್ನು ಅತ್ಯಂತ ಬುದ್ಧಿವಂತ, ಸೂಕ್ಷ್ಮ ಮತ್ತು ಪರಿಚಿತ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಅವರ ದೊಡ್ಡ ಕುಟುಂಬದ ಸದಸ್ಯರು ಸತ್ತರೆ, ಇಡೀ ಹಿಂಡು ಅಲ್ಲಿಯೇ ನಿಂತಿರುತ್ತದೆ ಮತ್ತು ಅವನು ದೇಹಕ್ಕೆ ಚೈತನ್ಯ ಬರುತ್ತದೆಯೋ ಎಂದು ಕಾಯುತ್ತದೆ. ಮತ್ತೆ ಅದಕ್ಕೆ ಜೀವ ಬರುವುದಿಲ್ಲ ಎಂದು ಖಚಿತವಾದ ನಂತರವೇ ದೇಹವನ್ನು ಬಿಟ್ಟು ಮುಂದೆ ಹೋಗುತ್ತಾರೆ” ಎಂದು ಒಬ್ಬರು ಕಾಮೆಂಟ್‌ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement