ವೇದಿಕೆಯಲ್ಲಿ ಭಾಗವತಿಕೆ ಮಾಡುತ್ತಿದ್ದಾಗಲೇ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಕುಕ್ಕೆಹಳ್ಳಿ ವಿಠ್ಠಲ ಪ್ರಭು

ಉಡುಪಿ : ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು ಬಂದು ಕಲಾವಿದರೋರ್ವರು ಸಾವಿಗೀಡಾದ ಘಟನೆ ಮುಂಬೈಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕುಕ್ಕೆಹಳ್ಳಿ ವಿಟ್ಠಲ ಪ್ರಭು ತೀವ್ರ ಹೃದಯಾಘಾತದಿಂದ ನಿಧನರಾದ ಕಲಾವಿದರಾಗಿದ್ದಾರೆ. . ಶನಿವಾರ ಕುಕ್ಕೆಹಳ್ಳಿ ವಿಠ್ಠಲ ಪ್ರಭು ಅವರ ನಿರ್ದೇಶನದಲ್ಲಿ ಮುಂಬೈಯಲ್ಲಿ ಯಕ್ಷಗಾನ ನಡೆಯುತ್ತಿತ್ತು. ಭಾಗವತಿಕೆ ನಡೆಸುತ್ತಿದ್ದ ವೇಳೆ ಅವರಿಗೆ ತೀವ್ರವಾದ ಎದೆ ನೋವು ಬಂದ ಕಾರಣ ಬೇರೊಬ್ಬ ಭಾಗವತರಿಗೆ ಭಾಗವತಿಕೆ ಒಪ್ಪಿಸಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಅವರು ಇಹಲೋಕ ತ್ಯಜಿಸಿದರು ಎಂದು ಹೇಳಲಾಗಿದೆ. ಮುಂಬೈಯಲ್ಲಿ ಯಕ್ಷಗಾನ ಪರಿಚಯಿಸಲು ಕುಕ್ಕೆಹಳ್ಳಿ ವಿಠ್ಠಲ ಪ್ರಭು ಅವರು ತಮ್ಮದೇ ತಂಡ ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದರು. ಯಕ್ಷಗಾನ ನಿರ್ದೇಶನ, ಪಾತ್ರಧಾರಿಕೆ, ತಾಳಮದ್ದಳೆ ಹೇಳಿಕೊಡುತ್ತಿದ್ದರು. ಮರಾಠಿ ಮತ್ತು ಕೊಂಕಣಿ ಭಾಷೆಗಳಲ್ಲೂ ಯಕ್ಷಗಾನ ಕಲಿಸುತ್ತಿದ್ದರು.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement